"ಮನೆಯಲ್ಲಿ ಮಗಳಿದ್ದಾಳೆ, ಊರಲ್ಲಿ ರಾಕ್ಷಸರಿದ್ದಾರೆ"; ಕಿಚ್ಚು ಹಚ್ಚಿದ ಬಾಳೆಹೊನ್ನೂರು ದರ್ಶನ್‌ ಫ್ಯಾನ್ಸ್ ಬ್ಯಾನರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಅರ್ಜಿ ವಿಚಾರ ಸದ್ಯ ಹಾಟ್ ಟಾಪಿಕ್ ಆಗಿದೆ. ಕಳೆದ ಕೆಲವು ದಿನಗಳಿಂದ ದರ್ಶನ್‌ಗೆ ಜಾಮೀನು ಸಿಗುತ್ತೋ ಇಲ್ಲವೂ ಅಂತ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇನ್ನೇನು ಜಾಮೀನು ಸಿಕ್ಕೇ ಬಿಡ್ತು ಅನ್ನುವಾಗಲೇ ಮುಂದೂಡಿಕೆಯಾಗುತ್ತಿದೆ. ಸದ್ಯ ಹಿರಿಯ ವಕೀಲ ಸಿ ವಿ ನಾಗೇಶ್ ದರ್ಶನ್ ಪರ ವಾದವನ್ನು ಮಂಡಿಸುತ್ತಿದ್ದಾರೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆ (ಅಕ್ಟೋಬರ್ 8) ನಡೆಯಲಿದೆ. ಎಸ್‌ಪಿಪಿ ಪ್ರಸನ್ನ ಕುಮಾರ್ ನಾಳೆ (ಅಕ್ಟೋಬರ್) ವಾದವನ್ನ ಮಂಡಿಸಲಿದ್ದಾರೆ. ಈ ಕಾರಣಕ್ಕೆ ದರ್ಶನ್ ಅಭಿಮಾನಿಗಳು ನಾಳೆ ಜಾಮೀನು ಸಿಗಬಹುದಾ ಎಂದು ಎದುರು ನೋಡುತ್ತಿದ್ದಾರೆ.

Why is the banner of Darshan fans of Balehonnur in Chikmagalur district going viral

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಬಳ್ಳಾರಿ ಜೈಲಿನಲ್ಲಿಇದ್ದಾರೆ. ಸಿ ವಿ ನಾಗೇಶ್ ಪ್ರಬಲ ವಾದ ಬಳಿಕ ದರ್ಶನ್ ಅಭಿಮಾನಿಗಳಲ್ಲಿ ಜಾಮೀಸು ಸಿಗುತ್ತೆ ಅಂತ ಭರವಸೆ ಮೂಡಿದೆ. ಇದೇ ಬೆನ್ಮಲ್ಲೇ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಅಭಿಮಾನಿಗಳು ಹಾಕಿರುವ ಬ್ಯಾನರ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಬ್ಯಾನರ್‌ನಲ್ಲಿ ಅಂತಹದ್ದೇನಿದೆ? ತಿಳಿಯುವುದಕ್ಕೆ ಮುಂದೆ ಓದು,.

ಇದರ ನಡುವೆಯೇ ಕೆಲ ಅಂಧಾಭಿಮಾನಿಗಳು ವಿಚಿತ್ರ ಪೋಸ್ಟರ್‌ಗಳನ್ನು ಹಾಕುವ ಮೂಲಕ ಹುಚ್ಚಾಟ ಮೆರೆಯುತ್ತಿದ್ದಾರೆ. ಇದೀಗ ಬಾಳೆಹೊನ್ನೂರಿನಲ್ಲಿ ದರ್ಶನ್‌ ಅಭಿಮಾನಿಗಳು ಹಾಕಿರುವ ಬ್ಯಾನರ್‌ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಹಾಗಾದರೆ ಆ ಬ್ಯಾನರ್‌ನಲ್ಲಿ ಏನು ಬರೆದಿದೆ ಎಂದು ಇಲ್ಲಿ ತಿಳಿಯಿರಿ.

Why is the banner of Darshan fans of Balehonnur in Chikmagalur district going viral

ದರ್ಶನ್ ಜೈಲು ಸೇರಿದ ದಿನದಿಂದ ಅಭಿಮಾನಿಗಳು ಬೀದಿಗೆ ಇಳಿದಿದ್ದಾರೆ. ಅವರ ಬೆಂಬಲಕ್ಕೆ ನಿಂತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್‌ ಬಗ್ಗೆ ನೆಗೆಟಿವ್ ಆಗಿ ಮಾಡಿದವರನ್ನು ಟೀಕೆ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳಂತೂ ಇದನ್ನೇ ವಿಷಯವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗ ಬೈಯ್ಯುತ್ತಿದ್ದಾರೆ. ಇನ್ನು ಬಾಳೆ ಹೊನ್ನೂರಿನ ದರ್ಶನ್ ಅಭಿಮಾನಿ ಬಳಗ ಒಂದು ಹೆಜ್ಜೆ ಮುಂದೆ ಹೋಗಿದೆ.

ದರ್ಶನ್‌ಗೆ ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ಭರವಸೆಯಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊನ್ನೂರಿನ ಅಭಿಮಾನಿಗಳು ಬ್ಯಾನರ್ ಹಾಕಿದ್ದಾರೆ. ದಸರಾ ಹಬ್ಬಕ್ಕೆ ಶುಭಕೋರುವ ಭರಾಟೆಯಲ್ಲಿ "ಮನೆಯಲ್ಲಿ ಮಗಳಿದ್ದಾಳೆ, ಊರಲ್ಲಿ ರಾಕ್ಷಸರಿದ್ದಾರೆ" ಎಂದು ಬ್ಯಾನರ್ ಹಾಕಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಪೋಸ್ಟ್‌ನಲ್ಲಿ ಏನಿದೆ ಅಂದರೆ..

ದಸರಾ ಹಬ್ಬದ ಪ್ರಯುಕ್ತ ಗಜಪಡೆ ಬಾಳೆಹೊನ್ನೂರು ಎಂಬ ಅಭಿಮಾನಿಗಳ ಬಳಗ ಬ್ಯಾನರ್‌ ಮಾಡಿಸಿದೆ. ಅದರಲ್ಲಿ ಬರೆದ ಸಾಲುಗಳು ಹೀಗಿವೆ. "ಎಲ್ಲಾ ತಂದೆ ತಾಯಂದಿರು ಸರ್ಕಾರಕ್ಕೆ ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿ. 'ಮನೆಯಲ್ಲಿ ಮಗಳಿದ್ದಾಳೆ. ಊರಲ್ಲಿ ರಾಕ್ಷಸರಿದ್ದಾರೆ ಎಂದು ಕಾರಣ ಬರೆಯಿರಿ. ಜೈ ಡಿ ಬಾಸ್ " ಎಂದು ಬಾಳೆಹೊನ್ನೂರು ಡಿ ಬಾಸ್ ಅಭಿಮಾನಿಗಳು ಬ್ಯಾನರ್ ಹಾಕಿದ್ದಾರೆ. ಈ ಫೋಟೊಗಳು ಡಿಬಾಸ್ ಸಾಮ್ರಾಜ್ಯ ಬಾಳೆಹೊನ್ನೂರು ಎಂಬ ತ್ರೆಡ್ ಖಾತೆಯಲ್ಲಿ ಹರಿದಾಡುತ್ತಿದೆ.

ನಾಳೆ (ಅಕ್ಟೋಬರ್ 8) ಜಾಮೀನು ಅರ್ಜಿ ವಿಚಾರಣೆ ಇರುವ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತೆ ಬಳ್ಳಾರಿ ಜೈಲ್‌ಗೆ ಭೇಟಿ ಕೊಟ್ಟಿದ್ದಾರೆ. ಪತಿಯೊಂದಿಗೆ ಜಾಮೀನು ಅರ್ಜಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

More from Filmibeat

English summary
Why is the banner of Darshan fans of Balehonnur in Chikmagalur district going viral?:
Read more about: darshan banner filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X