ಕನ್ನಡ ತಾರೆಯರಿಗೆ ಏನದು 'ಮರ್ಯಾದೆ ಪ್ರಶ್ನೆ'? ಬಚ್ಚಿಟ್ಟ ಪ್ರಶ್ನೆಯ ಗುಟ್ಟೇನು?

ಕಳೆದ ಎರಡು ದಿನಗಳಿಂದ ತಲೆಗೆ ಹುಳಬಿಟ್ಕೊಂಡು ಹುಡುಕಾಡಿದರೂ ಕನ್ನಡ ತಾರೆಯರ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಕೊನೆಗೂ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಬಚ್ಚಿಟ್ಟಿದ್ದ ಪ್ರಶ್ನೆಯ ಗುಟ್ಟು ಈಗ ರಟ್ಟಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕಳೆದ ಎರಡು ದಿನಗಳಿಂದ ಸ್ಯಾಂಡಲ್‌ವುಡ್ ತಾರೆಯರು ತಮಗೆ ಎದುರಾದ ಮರ್ಯಾದೆ ಪ್ರಶ್ನೆ ಏನು ಅನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ನಿರ್ದೇಶಕ ಸಿಂಪಲ್ ಸುನಿಯಿಂದ ಹಿಡಿದು ನಿರೂಪ್ ಭಂಡಾರಿವರೆಗೂ ತಮಗೆ ಎದುರಾಗುತ್ತಿರುವ ಪ್ರಶ್ನೆಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು.

Why Kannada celebrities are sharing Maryade Prashne post-decoding secret

ನಟಿ ಸೋನು ಗೌಡ, ನಟ ನಿರೂಪ್ ಭಂಡಾರಿ, ನಟಿ ಸಂಯುಕ್ತ ಹೊರನಾಡು, ನಟಿ ನಿಶ್ವಿಕಾ ನಾಯ್ಡು ಮಾಡಿದ ಎಲ್ಲಾ ಪೋಸ್ಟ್‌ಗಳನ್ನು ಅವರ ಅಭಿಮಾನಿಗಳ ವಲಯದಲ್ಲಿ ಕುತೂಹಲವನ್ನು ಹುಟ್ಟಿಸಿದ್ದವು. ಆದರೆ, ಈ ಸ್ಟಾರ್‌ಗಳು ತಮಗೆ ಸವಾಲಾಗಿ ಪರಿಣಮಿಸಿರುವ ಮರ್ಯಾದೆ ಪ್ರಶ್ನೆ ಏನು? ಅನ್ನೋದನ್ನು ಮಾತ್ರ ರಿವೀಲ್ ಮಾಡಿರಲಿಲ್ಲ. ಅಷ್ಟಕ್ಕೂ ಈ ಮರ್ಯಾದೆ ಪ್ರಶ್ನೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳಲ್ಲಿ ಒಬ್ಬೊಬ್ಬರ ಫೋಸ್ಟ್ ಹೀಗಿತ್ತು. ನಟಿ ನಿಶ್ವಿಕಾ ನಾಯ್ಡು "ಹಿತ್ತಲಕ ಕರಿಬ್ಯಾಡ ಮಾವ.. ಮರ್ಯಾದೆ ಪ್ರಶ್ನೆ" ಎಂದು ಪೋಸ್ಟ್ ಮಾಡಿದ್ದರು. ಇದು 'ಕರಟಕ ದಮನಕ' ಸಿನಿಮಾದ ಹಾಡಿನ ಸಾಲು. ಹೀಗಿರುವಾಗ ಆ ಸಿನಿಮಾ ಬಗ್ಗೆ ಏನಾದರೂ ಹೇಳಿದ್ದಾರೆಯೇ? ಎಂಬ ಪ್ರಶ್ನೆ ಹುಟ್ಕೊಂಡಿತ್ತು. ಇದರ ಜೊತೆನೇ "ತಪ್ಪು ಮಾಡಿಲ್ಲ ಅಂದರೆ, ತಲೆ ತಗ್ಗಿಸಬೇಡ.. ಮರ್ಯಾದೆ ಪ್ರಶ್ನೆ" ಎಂದು ನಟ ನಿರೂಪ್ ಭಂಡಾರಿ ಪೋಸ್ಟ್ ಮಾಡಿದ್ದರು.

Why Kannada celebrities are sharing Maryade Prashne post-decoding secret

ಇನ್ನೊಂದು ಕಡೆ ನಟಿ ಸಂಯುಕ್ತಾ ಹೊರನಾಡು " ಒಳ್ಳೆಯವರಾಗಿ ಇರುವುದಕ್ಕೆ ಕಾಸು ಬೇಕಾ? ಮರ್ಯಾದೆ ಪ್ರಶ್ನೆ" ಎಂದು ಪ್ರಶ್ನೆ ಮಾಡಿದ್ದರು. ಹಾಗೇ ನಿರ್ದೇಶಕ ಸಿಂಪಲ್ ಸುನಿ "ಅವತಾರ ಪುರುಷ 2 ಸಿನಿಮಾ ಗೆಲ್ಲಲೇ ಬೇಕು. ಮರ್ಯಾದೆ ಪ್ರಶ್ನೆ" ಎಂದು ಪೋಸ್ಟ್ ಮಾಡಿದ್ದರು. ಅದೇ ಸೋನು ಗೌಡ "ಶ್ರೀನಿವಾಸನ ಕೃಪೆ ಫಿಟ್ ಆಗ್ಬೇಕು.. ಮರ್ಯಾದೆ ಪ್ರಶ್ನೆ" ಎಂದು ಪೋಸ್ಟ್ ಮಾಡಿದ್ದರು. "ಕಾಸು ಕೊಡ್ತೀರ. ಆದರೆ, ಜಿಮ್​ಗೆ ಬರೋದೇ ಇಲ್ಲ.. ಮರ್ಯಾದೆ ಪ್ರಶ್ನೆ" ಎಂದು ಸೆಲೆಬ್ರಿಟಿ ಟ್ರೇನರ್​ ಶ್ರೀನಿವಾಸ್​ ಗೌಡ ಪೋಸ್ಟ್​ ಹಾಕಿದ್ದರು.

ಇವರೆಲ್ಲ ಯಾಕೆ ಹೀಗೆ ಪೋಸ್ಟ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಂತಹದ್ದು ಏನಾಯ್ತು? ಅಂತ ತಲೆಕೆಡಿಸಿಕೊಂಡವರು ಅಷ್ಟಿಷ್ಟು ಮಂದಿ ಅಲ್ಲ. ಆದರೆ, ಇವರೆಲ್ಲ ಪೋಸ್ಟ್‌ನಲ್ಲಿ ನಾಳೆ (ಮಾರ್ಚ್ 15) ಆ ಸೀಕ್ರೆಟ್ ರಿವೀಲ್ ಆಗುತ್ತೆ ಅನ್ನೋ ಸುಳಿವಂತೂ ಸಿಕ್ಕಿತ್ತು. ಆದರೆ, ಅದಕ್ಕೂ ಮುನ್ನ ಮರ್ಯಾದೆ ಪ್ರಶ್ನೆ ಅಂತಿರೋದು ಯಾಕೆ ಅನ್ನೋದನ್ನು ಫಿಲ್ಮಿಬೀಟ್ ಕನ್ನಡ ರಿವೀಲ್ ಮಾಡುತ್ತಿದೆ.

'ಮರ್ಯಾದೆ ಪ್ರಶ್ನೆ' ಅನ್ನೋದು ಕನ್ನಡದ ಹೊಸ ಸಿನಿಮಾ ಟೈಟಲ್. ಆರ್‌ ಜೆ ಪ್ರದೀಪ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಅನ್ನೋ ಸುಳಿವು ಸಿಕ್ಕಿದೆ. ಆ ಸಿನಿಮಾದ ಟೈಟಲ್ ನಾಳೆ (ಮಾರ್ಚ್ 15) ಅಧಿಕೃತವಾಗಿ ರಿವೀಲ್ ಆಗುತ್ತಿದೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಇಷ್ಟೆಲ್ಲ ಗಿಮಿಕ್ ನಡೆಯುತ್ತಿದೆ. ಅಷ್ಟಕ್ಕೂ ಇದೊಂದು ವಿಶಿಷ್ಠವಾದ ಪ್ರಚಾರ ತಂತ್ರ. ಇಲ್ಲಿವರೆಗೂ ಸಿನಿಮಾ ಪ್ರಿಯರ ಸಮುದಾಯ ಈ 'ಮರ್ಯಾದೆ ಪ್ರಶ್ನೆ' ಬಗ್ಗೆ ತಲೆಕೆಡಿಸಿಕೊಂಡಿದ್ದಂತೂ ನಿಜ. ಸದ್ಯಕ್ಕಿಷ್ಟು ಮಾಹಿತಿಯಿದೆ. ನಾಳೆ (ಮಾರ್ಚ್ 15) ಕಂಪ್ಲೀಟ್ ಆಗಿ ರಿವೀಲ್ ಆಗಬಹುದು.

More from Filmibeat

English summary
Kannada celebrities Maryade Prashne post-decoding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X