ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಪಾತ್ರವನ್ನು ಗೌಪ್ಯವಾಗಿಟ್ಟಿದ್ದೇಕೆ? 5ನೇ ನಾಯಕಿ ಹಿಂದಿರುವ ಮಿಸ್ಟರಿ ಏನು?

ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಸಿನಿಮಾ 'ಟಾಕ್ಸಿಕ್'. 'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಮೇಲೆ ರಾಕಿಂಗ್ ಸ್ಟಾರ್ ಯಶ್ ಮೇಲೆ ಸಿನಿಮಾ ಮಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ರಾಕಿ ಭಾಯ್ 'ಟಾಕ್ಸಿಕ್' ಆ ಮಟ್ಟಿಗೆ ನಿರ್ಮಾಣ ಸಂಸ್ಥೆಗಳ ನಿದ್ದೆಗೆಡಿಸಿದೆ. ಒಂದೇ ಒಂದು ಸುಳಿವು ಬಿಟ್ಟು ಕೊಡದೆ ಶೂಟಿಂಗ್ ಮಾಡುತ್ತಿರುವ ಯಶ್, ಈ ಸಿನಿಮಾವನ್ನು ಮುಂದಿನ ವರ್ಷ ರಿಲೀಸ್ ಮಾಡುತ್ತಿದ್ದಾರೆ.

ಕೆವಿಎನ್ ಪ್ರೋಡಕ್ಷನ್ಸ್ ಹಾಗೂ ಯಶ್ ನಿರ್ಮಾಣ ಸಂಸ್ಥೆ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ 'ಟಾಕ್ಸಿಕ್' ಅನ್ನು ನಿರ್ಮಾಣ ಮಾಡುತ್ತಿವೆ. ಹೀಗಾಗಿ ಇದೊಂದು ಮೆಗಾ ಬಜೆಟ್ ಸಿನಿಮಾ ಅನ್ನೋದರಲ್ಲಿ ಅನುಮಾವೇ ಬೇಡ. ವೇಗವಾಗಿ ಶೂಟಿಂಗ್ ಮಾಡುತ್ತಿರುವ ರಾಕಿ ಟೀಂ, ಆದಷ್ಟು ಬೇಗ ಸಿನಿಮಾವನ್ನು ತನ್ನ ಅಭಿಮಾನಿಗಳಿಗೆ ತೋರಿಸಲೇಬೇಕು ಅಂತ ಪಣ ತೊಟ್ಟು ಕೆಲಸ ಮಾಡುತ್ತಿದೆ.

Why Makers Hide Rukmini Vasanth Role in Yash amp amp Geetu Mohandas Toxic

ಇತ್ತೀಚೆಗೆ 'ಟಾಕ್ಸಿಕ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿರುವ ಸುದ್ದಿಯೊಂದು ಲೀಕ್ ಆಗಿತ್ತು. ಈಗಾಗಲೇ ನಾಲ್ಕು ಮಂದಿ ನಾಯಕಿಯರ ಹೆಸರು ಹರಿದಾಡುತ್ತಿರುವಾಗಲೇ ಮತ್ತೊಬ್ಬ ನಟಿ ಕೂಡ ನಟಿಸುತ್ತಿರೋ ವಿಷಯ ಅಭಿಮಾನಿಗಳಲ್ಲಿ ಕುತೂಹಲವನ್ನು ಕೆರಳಿಸಿತ್ತು. ಅಷ್ಟಕ್ಕೂ ಇಷ್ಟು ದಿನ 'ಟಾಕ್ಸಿಕ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿರುವ ವಿಷಯವನ್ನು ಯಾಕೆ ಗೌಪ್ಯವಾಗಿಟ್ಟರು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.

'ಟಾಕ್ಸಿಕ್‌' ಸಿನಿಮಾದ ಐದನೇ ನಾಯಕಿ

ರುಕ್ಮಿಣಿ ವಸಂತ್ 'ಟಾಕ್ಸಿಕ್' ಸಿನಿಮಾದ ಐದನೇ ನಾಯಕಿ. ಫಿಲ್ಮೀಬೀಟ್ ಮೂಲಗಳು 'ಟಾಕ್ಸಿಕ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿರುವುದನ್ನು ಕನ್ಫರ್ಮ್ ಮಾಡಿವೆ. ಈ ಸಿನಿಮಾದಲ್ಲಿ ರಿವೀಲ್ ಆಗಿರುವ ಐದನೇ ನಾಯಕಿ ಇವರು. ಹೀಗಾಗಿ ರುಕ್ಮಿಣಿ ವಸಂತ್ ಪಾತ್ರದ ಬಗ್ಗೆ ಸಿನಿಪ್ರಿಯರು ಕ್ಯೂರಿಯಸ್ ಆಗಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ನಿರ್ಮಾಣ ಸಂಸ್ಥೆ ರುಕ್ಷಿಣಿ ವಸಂತ್ ನಟಿಸುತ್ತಿರುವುದನ್ನು ಗೌಪ್ಯವಾಗಿ ಇಟ್ಟಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ. ಅದಕ್ಕೆ ಕಾರಣವೇನು?

ರುಕ್ಮಿಣಿ ವಸಂತ್ ಪಾತ್ರ ಗೌಪ್ಯವಾಗಿಟ್ಟಿದ್ದೇಕೆ?

ಫಿಲ್ಮಿಬೀಟ್‌ ಕನ್ನಡಗೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, " ಟಾಕ್ಸಿಕ್ ಸಿನಿಮಾದಲ್ಲಿ ಪ್ರಬಲವಾದ ಮಹಿಳಾ ಪಾತ್ರಗಳಿವೆ. ಅದರಲ್ಲಿ ರುಕ್ಮಿಣಿ ವಸಂತ್ ಪಾತ್ರ ವಿಭಿನ್ನವಾಗೇನೂ ಇಲ್ಲ. ಈ ಕಥೆಯಲ್ಲಿ ರುಕ್ಮಿಣಿ ವಸಂತ್ ಪಾತ್ರ ತುಂಬಾನೇ ಪ್ರಬಲವಾಗಿದೆ. ಹೀಗಾಗಿ ಟಾಕ್ಸಿಕ್ ಟೀಮ್ ಈ ಸರ್ಪ್ರೈಸ್ ಅನ್ನು ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಗೌಪ್ಯವಾಗಿ ಇಡುವುದಕ್ಕೆ ನಿರ್ಧರಿಸಿತ್ತು. ಈ ಕಾರಣಕ್ಕೆ ಅವರ ಪಾತ್ರವನ್ನು ತೀರಾ ಗೌಪ್ಯವಾಗಿ ಇಡಲಾಗಿತ್ತು" ಎಂದು ಹೇಳಿವೆ.

Why Makers Hide Rukmini Vasanth Role in Yash amp amp Geetu Mohandas Toxic


ಕೆಲವೇ ದಿನ ಶೂಟಿಂಗ್ ಬಾಕಿ

ರುಕ್ಮಿಣಿ ವಸಂತ್ ಈಗಾಗಲೇ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಹಲವು ದೃಶ್ಯಗಳಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಅದರಲ್ಲೂ ಮುಂಬೈನಲ್ಲಿ ನಡೆದ ರಾಕಿಂಗ್ ಸ್ಟಾರ್ ಯಶ್‌ ಜೊತೆಗೆ ಹಲವು ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ಅವರದ್ದು ಇನ್ನು ಕೆಲವೇ ದಿನಗಳ ಶೂಟಿಂಗ್ ಬಾಕಿ ಉಳಿದಿದೆ ಎಂದು ಮೂಲಗಳು ಮಾಹಿತಿಯನ್ನು ಹಂಚಿಕೊಂಡಿವೆ.

Take a Poll

ನಾಯಕಿಯರದ್ದೇ ದರ್ಬಾರ್

ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿರುವ 'ಟಾಕ್ಸಿಕ್' ಸಿನಿಮಾದಲ್ಲಿ ನಾಯಕಿಯ ಸಂಖ್ಯೆ ಕಮ್ಮಿಯೇನು ಇಲ್ಲ. ಈಗಾಗಲೇ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ, ತಾರಾ ಸುತಾರಿಯಾ ಹಾಗೂ ಹುಮಾ ಖುರೇಶಿ ಹೆಸರುಗಳು ರಿವೀಲ್ ಆಗಿವೆ. ಈ ಹೆಸರುಗಳ ಜೊತೆಗೆ ರುಕ್ಮಿಣಿ ವಸಂತ್ ಕೂಡ ಸೇರಿಕೊಂಡಿದ್ದಾರೆ. 'ಟಾಕ್ಸಿಕ್' ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಏಕಕಾಲದಲ್ಲಿ ಶೂಟಿಂಗ್ ಆಗುತ್ತಿದೆ. ಹಾಗೇ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಮಾರ್ಚ್ 19, 2026ಕ್ಕೆ 'ಟಾಕ್ಸಿಕ್' ವಿಶ್ವದಾದ್ಯಂತ ರಿಲೀಸ್ ಆಗಲಿದೆ.

More from Filmibeat

English summary
Rukmini Vasanth’s secret involvement in Rocking Star Yash and Geetu Mohandas’ Toxic raises curiosity. Why did makers hide her role? Read the full story about the mystery behind her character and film updates.
Read more about: rukmini vasanth yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X