ಪುನೀತ್ ಯಾರಿಗೂ ಫೋನ್ ಮಾಡುತ್ತಿರಲಿಲ್ಲ, 'ಕಾಲ್' ಮೆಸೇಜ್ ಕಳಿಸ್ತಿದ್ರು ಯಾಕೆ?

ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅದೆಷ್ಟೋ ಮಂದಿಗೆ ಆದರ್ಶ. ಅವರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲ. ಅವರಂತೆ ಬದುಕಲು ಅದೇ ಮಂದಿ ಅಭಿಮಾನಿಗಳು ಖಡಕ್ ನಿರ್ಧಾರ ಮಾಡಿದ್ದಾರೆ. ಅಪ್ಪು ಅಗಲಿದ ಮೇಲೆ ಅವರ ಅಭಿಮಾನಿಗಳು ಹಾಗೇ ಬದುಕುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಗಲಿದ ನಂತರವೇ ಅವರ ನಿಜವಾದ ಮನಸ್ಸು ಪ್ರಪಂಚಕ್ಕೆ ಗೊತ್ತಾಗಿತ್ತು. ಅವರ ಸಮಾಜ ಮುಖಿ ಕೆಲಸಗಳು ಕಂಡು ಕರುನಾಡಷ್ಟೇ ಅಲ್ಲ. ಇಡೀ ಭಾರತವೇವೇ ಮೆಚ್ಚುಗೆ ಸೂಚಿಸಿತ್ತು. ಈ ಮತ್ತೊಂದು ವಿಷಯ ಅಪ್ಪು ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿದೆ.

ಪುನೀತ್‌ ರಾಜ್‌ಕುಮಾರ್ ತಮ್ಮ ಆಪ್ತರಿಗೆ ದಿಢೀರನೇ ಪೋನ್ ಮಾಡುತ್ತಿರಲಿಲ್ವಂತೆ. ಅವರು ಕಾಲ್ ಅಂತ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುತ್ತಿದ್ದಂತೆ. ಅದ್ಯಾಕೆ ಅನ್ನುವುದನ್ನು 'ಬೈರಾಗಿ' ಸಿನಿಮಾ ನಿರ್ಮಾಪಕ ಕೃಷ್ಣ ಸಾರ್ಥಕ್ ರಿವೀಲ್ ಮಾಡಿದ್ದಾರೆ. ಅಲ್ಲದೆ, ಇದರೊಂದಿಗೆ ಶಿವಣ್ಣ ಹಾಗೂ ಅಪ್ಪು ಜೊತೆಯಾಗಿ ಹಾಡಬೇಕಿದ್ದ ಹಾಡಿನ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ.

ಅಪ್ಪು ಸರ್ ಕಾಲ್ ಅಂತ ಮೆಸೇಜ್ ಹಾಕುತ್ತಿದ್ರು

ಅಪ್ಪು ಸರ್ ಕಾಲ್ ಅಂತ ಮೆಸೇಜ್ ಹಾಕುತ್ತಿದ್ರು

"ಅವರು ಎಲ್ಲರಿಗೂ ಹಾಗೆನೇ ಅಂತೆ. ಯಾರೊಂದಿಗೋ ಮಾತಾಡಬೇಕು ಅಂದರೆ, ಬರೀ ಕಾಲ್ ಅಂತ ಮೆಸೇಜ್ ಮಾಡೋರಂತೆ. ಅದರ ಹಿಂದಿನ ಅರ್ಥ ಏನು ಅಂದರೆ, ನಾವು ಯಾವುದೋ ಕೆಲಸದಲ್ಲಿ ಬ್ಯುಸಿ ಇರುತ್ತೇವೆ. ಅಪ್ಪು ಸರ್ ಫೋನ್ ಮಾಡಿದರೆ, ಆ ಕೆಲಸ ಬಿಟ್ಟು ಫೋನ್ ತೆಗೆಯುತ್ತೇವೆ. ಅದು ಅವರಿಗೆ ಇಷ್ಟ ಆಗುತ್ತಿರಲಿಲ್ವಂತೆ. ಕಾಲ್ ಅಂತ ಕಳಿಸಿದರೆ, ನಾವು ಫ್ರೀ ಆದಾಗ ಮಾಡಲಿ ಅನ್ನೋ ಅರ್ಥ." ಎಂದು ಬೈರಾಗಿ ನಿರ್ಮಾಪಕ ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳಿದ್ದಾರೆ.

ಫೋನ್ ಮಾಡಿದ್ರೆ ಸಾಕಿತ್ತು

ಫೋನ್ ಮಾಡಿದ್ರೆ ಸಾಕಿತ್ತು

" ಕಳೆದ ವರ್ಷ ಶಿವಣ್ಣ ಹುಟ್ಟುಹಬ್ಬಕ್ಕೆ ಬೈರಾಗಿ ಫಸ್ಟ್ ಲುಕ್ ಬಿಟ್ಟೆವು. ಆಗ ಶಿವಣ್ಣನನ್ನೇ ಕೇಳಿದೆ. ಇಂಡಸ್ಟ್ರಿಗೆ ಬರುವುದಕ್ಕೆ ಅಪ್ಪು ಸರ್ ದೊಡ್ಡ ಪ್ರೇರಣೆ. ಅವರೊಂದಿಗೆ ಮಾಡಿಸಬೇಕು ಎಂದು ಹೇಳಿದೆ. ಆಗ ತಕ್ಷಣ ಶಿವಣ್ಣನೇ ಅಪ್ಪು ಸರ್‌ಗೆ ಫೋನ್ ಮಾಡಿದ್ದರು. 'ಜೇಮ್ಸ್' ಶೂಟಿಂಗ್‌ನಲ್ಲಿದ್ದರು. ಅಲ್ಲಿಗೆ ಹೋಗುತ್ತೇನೆ ಎಂದು ಹೇಳಿದೆ. ಅಯ್ಯೋ ಅವರು ಇಲ್ಲಿಗೆ ಯಾಕೆ ಬರಬೇಕು. ಒಂದು ಫೋನ್ ಮಾಡಿದರೆ ಸಾಕು ಎಂದು ಹೇಳಿದ್ದರು. "

ನವೆಂಬರ್ 05ಕ್ಕೆ ಒಟ್ಟಿಗೆ ಹಾಡಬೇಕಿತ್ತು

ನವೆಂಬರ್ 05ಕ್ಕೆ ಒಟ್ಟಿಗೆ ಹಾಡಬೇಕಿತ್ತು

"ನಮ್ಮ ಸಿನಿಮಾಗೆ ಒಂದು ಹಾಡು ಹಾಡಬೇಕು ಎಂದು ಕೇಳಿಕೊಂಡಿದ್ದೆ. ಆಗ ಹಾಡು ಕೇಳಿ ಚೆನ್ನಾಗಿದೆ ಎಂದಿದ್ದರು. ಶಿವಣ್ಣನ ಜೊತೆ ನೀವು ಹಾಡಬೇಕು ಎಂದಿದ್ದೆ. ಹಾಡು ಕೇಳಿ, ಶಿವಣ್ಣನಿಗೆ ಹಾಗೂ ಅನೂಪ್ ಅವರಿಗೂ ಮಾಡಿ ಸಾಂಗ್ ಚೆನ್ನಾಗಿದೆ ಎಂದು ಹೇಳಿದ್ದರು. ಇಬ್ಬರು ಮೊದಲ ಬಾರಿಗೆ ಹಾಡುತ್ತಿದ್ದೇವೆ. ಬೇರೆ ತರ ಮಾಡೋಣ. ನವೆಂಬರ್ ಮೊದಲ ವಾರ ಫ್ರೀ ಇದ್ದೀನಿ ಹಾಡೋಣ ಅಂತ ಹೇಳಿದ್ದರು. ನವೆಂಬರ್ 05ನೇ ತಾರೀಕಿನಂದು ಫಿಕ್ಸ್ ಆಗಿತ್ತು. ಅವತ್ತು ಹಿಂದಿನ ದಿನ ರಾತ್ರಿ ಫೋನ್ ಮಾಡಿ ಟೈಮ್ ಫಿಕ್ಸ್ ಮಾಡಿದ್ದೆ." ಎನ್ನುತ್ತಾರೆ ನಿರ್ಮಾಪಕ ಕೃಷ್ಣ ಸಾರ್ಥಕ್.

ಒಂದು ದಿನ ಮುನ್ನ ಕಾಲ್ ಮಾಡಿದ್ದೆ

ಒಂದು ದಿನ ಮುನ್ನ ಕಾಲ್ ಮಾಡಿದ್ದೆ

ಅಪ್ಪು ಅಗಲಿದ ದಿನ ನಾನು ಶಿವಣ್ಣನ ಮನೆಯಲ್ಲಿದ್ದೆ. ಅಂದು ಏನಾಯಿತು ಎಂದು ಹೇಳಲು ನನಗೆ ಇಷ್ಟವಿಲ್ಲ. ಅದು ನನ್ನೊಂದಿಗೆ ಇರಲಿ. ಆ ಘಳಿಗೆಯನ್ನು ಮಾತ್ರ ಮರೆಯವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲ ಅಪ್ಪು ಅಗಲುವ ಒಂದು ದಿನ ಮುನ್ನ ಅವರೊಂದಿಗೆ ಮಾತಾಡಿದ್ದರು. ನೆವೆಂಬರ್ 05ರಂದು ಹಾಡುವುದಕ್ಕೆ ಡೇಟ್ ಫಿಕ್ಸ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ಅವರು ಆಗಾಗ ಯೋಗಕ್ಷೇಮ ವಿಚಾರಿಸುತ್ತಿದ್ದರು. ಹೇ ವಾಟ್ ಮ್ಯಾನ್ ಎಂದು ಹೇಳುತ್ತಿದ್ದರು. ಅವರು ಹೋಗುವ ಹಿಂದಿನ ದಿನ ರಾತ್ರಿ 9.30ರ ವರೆಗೂ ಟಚ್‌ನಲ್ಲಿಯೇ ಇದ್ದೆ." ಎನ್ನುತ್ತಾರೆ.

More from Filmibeat

English summary
Why Puneeth Rajkumar Never Used To Call Industry People Instead Massage, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X