'ಕೂಲಿ' ಟ್ರೈಲರ್‌ನಲ್ಲಿ ರಚಿತಾ ರಾಮ್; ಗುಲ್ಲೆದ್ದಾಗ ಯಾಕೆ ಓಪ್ಪಿಕೊಂಡಿರಲಿಲ್ಲ ಡಿಂಪಲ್ ಕ್ವೀನ್

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷೆಯ ಸಿನಿಮಾ 'ಕೂಲಿ'. ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್‌ ಸಿನಿಮಾಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಒಂದ್ಕಡೆ ರಜನಿಕಾಂತ್ ಸ್ಟೈಲ್, ಮ್ಯಾನರಿಸಂ. ಇನ್ನೊಂದು ಕಡೆ ಲೋಕೇಶ್ ಕನಗರಾಜ್ ನಿರ್ದೇಶಕ. ಜೊತೆಗೆ ಸೂಪರ್‌ಸ್ಟಾರ್‌ಗಳ ಮಹಾ ಸಂಗಮ.

ಇಲ್ಲಿವರೆಗೂ ರಜನಿಕಾಂತ್ ಜೊತೆ ಪರಭಾಷೆಯ ನಟರು ಯಾರೆಲ್ಲ ನಟಿಸುತ್ತಿದ್ದಾರೆ? ಅವರ ಪಾತ್ರವೇನು ಅನ್ನೋದನ್ನು ಚಿತ್ರತಂಡವೇ ಬಹಿರಂಗ ಪಡಿಸಿತ್ತು. ಕನ್ನಡದಿಂದ ರಿಯಲ್ ಸ್ಟಾರ್ ಉಪೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋದು ಗೊತ್ತಿತ್ತು. ಇವರೊಂದಿಗೆ ಪರಭಾಷೆಯಿಂದ ಸ್ಟಾರ್‌ ನಟರು ಕೂಡ ಸೂಪರ್‌ಸ್ಟಾರ್‌ಗಾಗಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಕನ್ನಡದ ಮತ್ತೊಂದು ಹೆಸರು ಕೂಡ ಕೇಳಿ ಬಂದಿತ್ತು. ಅವರೇ ಡಿಂಪಲ್ ಕ್ವೀನ್ ರಚಿತಾ ರಾಮ್.

Why Rachita Ram declined to confirm her role in the Coolie movie with Rajinikanth now its clear with trailer

ಕಳೆದ ವರ್ಷ 'ಕೂಲಿ' ಸಿನಿಮಾದ ಶೂಟಿಂಗ್ ನಡೆಯುವಾಗ ದಿಢೀರನೇ ನಟಿ ರಚಿತಾ ರಾಮ್ ಹೆಸರು ಹಾರಿ ಬಂದಿತ್ತು. ಸೂಪರ್‌ಸ್ಟಾರ್ ಸಿನಿಮಾದಲ್ಲಿ ರಚಿತಾ ರಾಮ್ ವಿಶೇಷವಾದ ಪಾತ್ರದಲ್ಲಿ ನಟಿಸುತ್ತಿದ್ದಾರೆಂದು ಸುದ್ದಿಯಾಗಿತ್ತು. ಆದರೆ, ಆ ವೇಳೆ ಡಿಂಪಲ್ ಕ್ವೀನ್ ಇಂತಹ ಸಿಹಿ ಸುದ್ದಿಯ ಬಗ್ಗೆ ಎಲ್ಲೂ ಬಾಯ್‌ಬಿಟ್ಟಿರಲಿಲ್ಲ. ಸುದ್ದಿ ಜೋರಾಗಿ ಸದ್ದು ಮಾಡಿದಾಗಲೂ ರಚಿತಾ ರಾಮ್ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಈಗ 'ಕೂಲಿ' ಸಿನಿಮಾದ ಟ್ರೈಲರ್‌ನಲ್ಲಿ ಪ್ರತ್ಯಕ್ಷ ಆಗಿದ್ದಾರೆ.

ಕಳೆದ ವರ್ಷ 2024ರ ಆಗಸ್ಟ್ ತಿಂಗಳಲ್ಲಿ 'ಕೂಲಿ' ಸಿನಿಮಾದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆಂಬ ಸುದ್ದಿ ಓಡಾಡಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿಯೂ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಆದರೆ, ಆ ವೇಳೆ ರಚಿತಾ ರಾಮ್ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಸಿಕ್ಕಿರಲಿಲ್ಲ. ಸಿನಿಮಾ, ರಿಯಾಲಿಟಿ ಶೋ ಬಿಟ್ಟರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರಚಿತಾ ರಾಮ್ ಚಿಕ್ಕದೊಂದು ಸುಳಿವು ನೀಡಿರಲಿಲ್ಲ. ಈಗ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ರಚಿತಾ ರಾಮ್ ಕೂಡ ಸಿನಿಮಾದಲ್ಲಿ ಇರೋದು ಬಹಿರಂಗಗೊಂಡಿದೆ.

'ಕೂಲಿ' ಸಿನಿಮಾದಲ್ಲಿ ರಚಿತಾ ರಾಮ್ ಕೂಡ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿರುವಾಗ ಕನ್ಫರ್ಮ್ ಮಾಡಿರಲಿಲ್ಲ. ಆದರೆ, ಚಿತ್ರತಂಡದಿಂದ ಅಪ್ರೋಚ್ ಮಾಡಿರುವುದ ಹೇಳಿಕೊಂಡಿದ್ದರು. ಆ ಬಳಿಕ ಮತ್ತೆ ಸುದ್ದಿಯಿರಲಿಲ್ಲ.ಈಗಾಗಲೇ ರಚಿತಾ ರಾಮ್ ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದರೆ, 'ಕೂಲಿ' ಸಿನಿಮಾ ಟ್ರೈಲರ್ ನೋಡದ ಬಳಿಕ ಆ ಛಾಯೆ ಕಾಣುತ್ತಿಲ್ಲ. ಟ್ರೈಲರ್‌ನಲ್ಲಿ ರಚಿತಾ ರಾಮ್ ಡಿ ಗ್ಲಾಮರ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Why Rachita Ram declined to confirm her role in the Coolie movie with Rajinikanth now its clear with trailer

ರಜನಿಕಾಂತ್ 'ಕೂಲಿ' ಸಿನಿಮಾದ ಟ್ರೈಲರ್ ಅನ್ನು ಪಾತ್ರಗಳನ್ನು ಪರಿಚಯಿಸುವುದಕ್ಕಂತಲೇ ಮಾಡಿದಂತೆ ಇದೆ. ರಜನಿಯಿಂದ ಹಿಡಿದು, ಈ ಸಿನಿಮಾದಲ್ಲಿ ನಟಿಸಿರುವ ಪ್ರಮುಖ ಪಾತ್ರಗಳಿಗೆ ಇಂಟ್ರುಡಕ್ಷನ್ ಕೊಡಲಾಗಿದೆ. ಇದರಲ್ಲಿ ನಟಿ ರಚಿತಾ ರಾಮ್ ಅವರ ಪಾತ್ರವನ್ನು ರಿವೀಲ್ ಮಾಡಲಾಗಿದೆ. ಟ್ರೈಲರ್ ರಿಲೀಸ್ ಆದ ಬಳಿಕವೂ ಡಿಂಪಲ್ ಕ್ವೀನ್ ಸೈಲೆಂಟ್ ಆಗಿದ್ದಾರೆ. ಇಲ್ಲಿವರೆಗೂ ಗೊಂದಲದಲ್ಲಿದ್ದ ಅಭಿಮಾನಿಗಳಿಗೆ ಈಗೊಂದು ಕ್ಲಾರಿಟಿ ಸಿಕ್ಕಿದೆ.

ರಜನಿಕಾಂತ್ 171ನೇ ಸಿನಿಮಾ 'ಕೂಲಿ' ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾಲೇಶ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಜನಿಕಾಂತ್ ಹಾಗೂ ಉಪೇಂದ್ರ ಇಬ್ಬರೂ ಮುಖಾ ಮುಖಯಾಗುತ್ತಾರಾ? ಉಪ್ಪಿಯಾ ಪಾತ್ರ ಹೇಗಿರುತ್ತೆ? ಅನ್ನೋದು ಏಪ್ರಿಲ್ 14 ರಂದು ರಿವೀಲ್ ಆಗಲಿದೆ. ಹಾಗೇ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಮುಖಾ ಮುಖಿಯಾಗುತ್ತಾರಾ? ಎನ್ನುವ ಕುತೂಹಲ ಕೂಡ ಇದೆ.

More from Filmibeat

English summary
Why Rachita Ram declined to confirm her role in the Coolie movie with Rajinikanth now its clear with trailer.
Read more about: rachita ram rajinikanth upendra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X