KCCಗೆ ದರ್ಶನ್, ಯಶ್, ಧ್ರುವ, ಶೆಟ್ರು ಗ್ಯಾಂಗ್‌ಗೆ ಆಹ್ವಾನ ಕೊಟ್ಟಿಲ್ವಾ? ಈ ಮುಖದಲ್ಲಿ ದ್ವೇಷ ಕಾಣುತ್ತಾ ಎಂದಿದ್ದೇಕೆ ಕಿಚ್ಚ?

ಕರ್ನಾಟಕ ಚಲನ ಚಿತ್ರ ಕಪ್ ನಾಲ್ಕನೇ ಸೀಸನ್‌ಗೆ ದಿನಗಣನೆ ಆರಂಭ ಆಗಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಕೆಸಿಸಿ ನಡೆಯುತ್ತಿದೆ. ನವೆಂಬರ್ 26ರಂದು ಕೆಸಿಸಿ ಹರಾಜು ಪ್ರತಿಕ್ರಿಯೆ ನಡೆದಿತ್ತು. ಸ್ಯಾಂಡಲ್‌ವುಡ್‌ನ ಗಣ್ಯರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಸಿಸಿ ಪಂದ್ಯಾವಳಿಗಳು ಡಿಸೆಂಬರ್ 23 ರಿಂದ 25ವರೆಗೆ ನಡೆಯಲಿದೆ. ಈ ಟೂರ್ನಿಗೆ ಮಾಜಿ ಅಂತರಾಷ್ಟ್ರೀಯ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಇವರೊಂದಿಗೆ ಕನ್ನಡ ಚಿತ್ರರಂಗ ಹಾಗೂ ಮಾಧ್ಯಮದವರು ಅಖಾಡಕ್ಕೆ ಇಳಿದು ಆಡಲಿದ್ದಾರೆ.

Why Rakshit, Rishab, Darshan, Yash, and Dhruva are not playing KCC, explained Sudeep

ಕೆಸಿಸಿ ನಾಲ್ಕನೇ ಸೀಸನ್‌ನಲ್ಲಿ ಶಿವಣ್ಣ, ಕಿಚ್ಚ ಸುದೀಪ್, ಗಣೇಶ್, ಧನಂಜಯ್, ಉಪೇಂದ್ರ ಜೊತೆಗೆ ಈ ಬಾರಿ ದುನಿಯಾ ವಿಜಯ್ ಎಂಟ್ರಿ ಕೊಡಲಿದ್ದಾರೆ. ತಮಿಳಿನಿಂದ ವಿಕ್ರಾಂತ್, ತೆಲುಗಿನಿಂದ ಪ್ರಿನ್ಸ್ ಈ ಪಂದ್ಯದಲ್ಲಿ ಆಡುತ್ತಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಹಾಗೂ ತಂಡ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ದರ್ಶನ್, ಯಶ್ ಹಾಗೂ ಧ್ರುವ ಸರ್ಜಾಗೆ ಆಹ್ವಾನ ನೀಡಿಲ್ಲವೇ ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಕಿಚ್ಚ ಕೊಟ್ಟ ಉತ್ತರದ ಝಲಕ್ ಇಲ್ಲಿದೆ.

"ಅವರನ್ನೇ ಕೇಳಿ. ಅವರು ಕ್ರಿಕೆಟ್ ಆಡೋದಿಲ್ಲ ರೀ. ರಿಷಬ್‌ಗೆ ಕೇಳಿದ್ರೆ, ನಾನು ಬಂದು ಹೋಗ್ತೀನಿ ಬಿಟ್ಟುಬಿಡಿ ಅಂತಾರೆ. ರಾಜ್ ಬಿ ಶೆಟ್ಟಿಗೆ ಕೇಳಿದ್ರೆ, ಗರುಡ ಗಮನದಲ್ಲಿ ಆಡಿದ ಹಾಗಲ್ಲ ಅಂತಾರೆ. ರಕ್ಷಿತ್‌ಗೆ ಕ್ರಿ ಅಂತಿದ್ದಂಗೆ ಬೇಡ ಸಾರ್ ನಂಗೆ ಬರಲ್ಲ ಅಂತಾರೆ. ರಕ್ಷಿತ್ ಬಂದಿದ್ರು. ಆದರೆ, ಅವರು ಕ್ರಿಕೆಟ್ ಆಡೋದಿಲ್ಲ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

" ಅಪ್ಪು ಅವರು ನಮ್ಮೊಂದಿಗೆ ಇಲ್ಲ. ಅವರು ಕ್ರಿಕೆಟ್ ಆಡುತ್ತಿರಲಿಲ್ಲ. ಆದರೆ ಅವರೇ ಬಂದು ಏನೋ ಮಾಡಿದ್ರು. ಧನಂಜಯ್ ಅವರು ಕ್ರಿಕೆಟರ್ ಅಲ್ಲ. ಇಲ್ಲಿ ಬರುವುದಕ್ಕೆ ಶುರು ಮಾಡಿದ ಮೇಲೆ ಹೋಗಿ ಪ್ರಾಕ್ಟೀಸ್ ಎಲ್ಲ ಮಾಡುವುದಕ್ಕೆ ಶುರು ಮಾಡಿದ್ದರು. ದುನಿಯಾ ವಿಜಯ್ ಕ್ರಿಕೆಟ್ ಆಡೋದಿಲ್ಲ. ಅವರು ಹೋಗಿ ಬೌಲಿಂಗ್, ಬ್ಯಾಟಿಂಗ್ ಎಲ್ಲಾ ಪ್ರಾಕ್ಟೀಸ್ ಮಾಡುತ್ತಿದ್ದಾರೆ." ಎಂದು ಕಿಚ್ಚ ಹೇಳಿದ್ದಾರೆ.

Why Rakshit, Rishab, Darshan, Yash, and Dhruva are not playing KCC, explained Sudeep

"ದರ್ಶನ್ ಹಾಗೂ ಯಶ್ ಇಬ್ಬರಿಗೂ ಆಹ್ವಾನ ಕೊಟ್ಟಿದ್ದೇವೆ. ನಾವು ಯಾರನ್ನೂ ಆಡಬೇಡಿ ಅಂತ ಹೇಳುತ್ತಿಲ್ಲ. ಕೆಲವು ಆಡಕ್ಕೆ ಇಷ್ಟವಿಲ್ಲ ಬಂದು ಹೋಗ್ತೀವಿ ಅಂತಾರೆ. ಕೆಸಿಸಿ ಬಲವಂತ ಅಲ್ಲ. ಕೆಸಿಸಿ ಗೋಡೆನೂ ಅಲ್ಲ. ಕೆಸಿಸಿ ಗೇಟು ಅಲ್ಲ. ಕೆಸಿಸಿ ಕಾರ್ಪೇಟ್ ಕೂಡ ಅಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೆಸಿಸಿ ಹಾಸಿಗೆ ಅಂತೂ ಅಲ್ಲವೇ ಅಲ್ಲ. ಕೆಸಿಸಿ ಒಂದು ಗೌರವ ಅಷ್ಟೇ." ಎಂದು ಕಿಚ್ಚ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ.

"ಧ್ರುವ ಅವರನ್ನು ಯಾಕೆ ಕೇಳಲಿಲ್ಲ ನೀವು. ಅವರು ಆರ್ಟಿಸ್ಟ್ ಅಲ್ವಾ? ಕಾಣಿಸಲೇ ಇಲ್ವಾ ನಿಮ್ಮ ಕಣ್ಣಿಗೆ. ನಿಮ್ಮ ಕಣ್ಣಿಗೆ ರಕ್ಷಿತ್, ರಾಜ್, ರಿಷಬ್, ದರ್ಶನ್, ಯಶ್ ಕಾಣಿಸಿದ್ರು. ಧ್ರುವ ಯಾಕೆ ಕಾಣಿಸಲಿಲ್ಲ. ಹಾಗೆ ನಾವು ಏನು ನೋಡುತ್ತೇವೋ ಅದು ಮಾತ್ರ ಕಣ್ಣಿಗೆ ಕಾಣಿಸುತ್ತೆ. ಅದು ಬಿಟ್ಟು ಕೆಲವು ಸತ್ಯಗಳು ಇರುತ್ತವೆ. ಧ್ರುವ ಅವರು ಲಾಸ್ಟ್ ಟೈಮ್ ಇದ್ದರು. ಅವರೇ ಫೋನ್ ಮಾಡಿ ಪ್ರೇಮ್ ಜೊತೆ ಕೆಡಿ ಅನ್ನೋ ಸಿನಿಮಾ ಮಾಡುತ್ತಿದ್ದೇನೆ. ಅವರೊಂದಿಗೆ ಮಾಡುವಾಗ ನಾನು ಮನೆಗೆ ಹೋಗುತ್ತಿಲ್ಲ. ಇನ್ನು ಕ್ರಿಕೆಟ್‌ಗೆ ಎಲ್ಲಿಂದ ಬರಲಿ ಅಂತ ಕೇಳಿದ್ರು. ಅವರು ಮ್ಯಾಚ್‌ಗೆ ಬಂದು ಹೋಗ್ತಾರೆ. ಎಲ್ಲರಿಗೂ ಕರೆದಿದ್ದೇವೆ. ಈ ಮುಖದಲ್ಲಿ ದ್ವೇಷ ಕಾಣುತ್ತಾ ಸರ್." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

More from Filmibeat

English summary
Why Rakshit, Rishab, Darshan, Yash, and Dhruva are not playing KCC, explained Sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X