Rashmika Mandanna: ರಶ್ಮಿಕಾ ಮಂದಣ್ಣ ಯಾವಾಗಲೂ ಹೀಗೆ ಕೈ ಸನ್ನೆ ಮಾಡುವುದೇಕೆ? ಇದರ ಅರ್ಥವೇನು?

ರಶ್ಮಿಕಾ ಮಂದಣ್ಣ ಹೊಸ ಜನರೇಷನ್‌ನ ನಟಿ. ಅತೀ ಕಡಿಮೆ ಸಮಯದಲ್ಲಿಯೇ ಯಶಸ್ಸು ಕಂಡಿರುವ ನಟಿ ಅಡ್ವಾನ್ಸ್ ಆಗಿ ಯೋಚನೆ ಮಾಡುತ್ತಿದ್ದಾರೆ. ಟೆಕ್ನಾಲಜಿ ಬಳಸುವುದರಿಂದ ಹಿಡಿದು, ಸಿನಿಮಾ ಆಯ್ಕೆ, ಆಲೋಚನೆ ಎಲ್ಲವೂ ವಿಭಿನ್ನವಾಗಿರುತ್ತೆ. ಹಾಗೇ ಇವರ ಅಭಿರುಚಿಗಳು ಕೂಡ ಅಷ್ಟೇ ಅಡ್ವಾನ್ಸ್ ಆಗಿರುತ್ತೆ.

ಕಿರಿಕ್ ಪಾರ್ಟಿಯಿಂದ ಸಿನಿ ಜರ್ನಿ ಆರಂಭ ಮಾಡಿ, ಟಾಲಿವುಡ್‌ಗೆ ಹಾರಿದ್ದ ರಶ್ಮಿಕಾ ಈಗ ಬಾಲಿವುಡ್‌ನಲ್ಲಿ ಸೆಟಲ್ ಆಗುವ ಲಕ್ಷಣಗಳಿವೆ. ಒಂದರ ಹಿಂದೊಂದು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ರಶ್ಮಿಕಾ ಎಲ್ಲೇ ಹೋದರೂ ಅವರನ್ನು ಅಭಿಮಾನಿಗಳು ಫಾಲೋ ಮಾಡುತ್ತಾರೆ. ಇತ್ತ ರಶ್ಮಿಕಾ ಕೂಡ ಕ್ಯಾಮರಾ ಮುಂದೆ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ರಶ್ಮಿಕಾ ಕ್ಯಾಮರಾ ಮುಂದೆ ಬಂದಾಗಲೆಲ್ಲಾ ವಿಶಿಷ್ಟವಾಗಿ ಕೈ ಸನ್ನೆ ಮಾಡುತ್ತಾರೆ. ಅಷ್ಟಕ್ಕೂ ರಶ್ಮಿಕಾ ಯಾಕೆ ಹೀಗೆ ಮಾಡುತ್ತಾರೆ? ಈ ಸನ್ನೆಯ ಅರ್ಥವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ರಶ್ಮಿಕಾ ಕೈ ಸನ್ನೆ ಹಿಂದಿನ ರಹಸ್ಯವೇನು?

ರಶ್ಮಿಕಾ ಕೈ ಸನ್ನೆ ಹಿಂದಿನ ರಹಸ್ಯವೇನು?

ಏರ್‌ಪೋರ್ಟ್‌ನಲ್ಲಿ, ಪ್ರಚಾರದ ಸಂದರ್ಭದಲ್ಲಿ, ಪ್ರೆಸ್‌ ಮೀಟ್‌ಗಳಲ್ಲಿ ರಶ್ಮಿಕಾ ಮಂದಣ್ಣ ಕ್ಯಾಮರಾ ಮುಂದೆ ವಿಭಿನ್ನವಾಗಿ ಪೋಸ್ ಕೊಡುತ್ತಾರೆ. ಕೆಲವರು 'ಥಮ್ಸ್ ಅಪ್' ಮಾಡುತ್ತಾರೆ. ಇಲ್ಲಿ 'ವಿಕ್ಟರಿ' ಸಿಂಬಲ್ ತೋರಿಸುತ್ತಾರೆ. ಆದರೆ, ರಶ್ಮಿಕಾ ಮಾತ್ರ ಹೆಬ್ಬೆರಳು ಹಾಗೂ ತೋರು ಬೆರಳನ್ನು ಸೇರಿಸಿ ವಿಶಿಷ್ಟವಾದ ಸಿಂಬಲ್ ಮೂಲಕ ತೋರಿಸುತ್ತಾರೆ. ಇದು ಹಲವು ದಿನಗಳಿಂದ ಚರ್ಚೆಯಲ್ಲಿದೆ. ಅಸಲಿಗೆ ರಶ್ಮಿಕಾ ಯಾಕೆ ಹೀಗೆ ಕೈ ಸನ್ನೆ ತೋರಿಸುತ್ತಾರೆ? ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇರುತ್ತೆ. ರಶ್ಮಿಕಾ ತೋರಿಸುವ ಕೈ ಸನ್ನೆಯ ಅರ್ಥ ' ಐ ಲವ್ ಯೂ'. ಈ ಸನ್ನೆಯನ್ನು ' ಐ ಪರ್ಪಲ್‌ ಯೂ' ಅಂತನೂ ಹೇಳುತ್ತಾರೆ. ಇದರ ಅರ್ಥ " ನಾನು ನಿಮ್ಮನ್ನು ಬಹಳ ದಿನಗಳಿಂದ ನಂಬುತ್ತಿದ್ದು, ನಿಮ್ಮನ್ನು ಪ್ರೀತಿಸುತ್ತೇನೆ." ಎಂಬುದಾಗಿದೆ.

BTS ಬ್ಯಾಂಡ್ ಫಾಲೋ ಮಾಡ್ತಾರಾ?

BTS ಬ್ಯಾಂಡ್ ಫಾಲೋ ಮಾಡ್ತಾರಾ?

ಈ ಸನ್ನೆಯನ್ನು 2016ರಲ್ಲಿ ದಕ್ಷಿಣ ಕೊರಿಯಾದ ಮ್ಯೂಸಿಕ್ ಬ್ಯಾಂಡ್ BTS ತಂಡದ ಗಾಯಕ ಟೇಹ್ಯುಂಗ್ ಅವ್ರಿಂದ ಫೇಮಸ್ ಆಗಿದೆ. ಅಲ್ಲಿಂದ ಈ ಕೈ ಸನ್ನೆ ವಿಶ್ವದೆಲ್ಲೆಡೆ ಫೇಮಸ್ ಆಗುತ್ತಿದೆ. ಇದನ್ನೇ ರಶ್ಮಿಕಾ ಮಂದಣ್ಣ ಕೂಡ ಅನುಸರಿಸುತ್ತಿದ್ದಾರೆ. ರಶ್ಮಿಕಾಗೆ ದಕ್ಷಿಣ ಕೊರಿಯಾದ BTS ಬ್ಯಾಂಡ್ ಅಂದರೆ, ತುಂಬಾನೇ ಇಷ್ಟ. BTS ಬ್ಯಾಂಡ್‌ನ ಗಾಯಕರನ್ನು ಸದಾ ಫಾಲೋ ಮಾಡುವುದಾಗಿ ರಶ್ಮಿಕಾ ಹೇಳಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ರಶ್ಮಿಕಾ, BTS ಬ್ಯಾಂಡ್‌ ಬಗ್ಗೆ ಮಾತಾಡಿದ್ದರು. "ನಾನು BTS ಬ್ಯಾಂಡ್‌ನ ಅಭಿಮಾನಿ. ನಾನು ಕೇವಲ ಪೋಸ್ಟ್ ಮಾಡುವುದಿಲ್ಲ. ನಾನು ಅವರ ಹಾಡುಗಳನ್ನು ಕೇಳುತ್ತೇನೆ. ಡ್ಯಾನ್ಸ್ ಮಾಡುತ್ತೇನೆ." ಎಂದು ಹೇಳಿದ್ದರು.

BTS ಬ್ಯಾಂಡ್ ಹಿನ್ನೆಲೆ ಏನು?

BTS ಬ್ಯಾಂಡ್ ಹಿನ್ನೆಲೆ ಏನು?

2013ರಲ್ಲಿ ದಕ್ಷಿಣ ಕೊರಿಯಾದ ಯುವ ಸಂಗೀತಕಾರರ ತಂಡ ಬಿಟಿಎಸ್‌ ಬ್ಯಾಂಡ್ ಅನ್ನು ಕಟ್ಟಿಕೊಂಡಿತ್ತು. ಇಲ್ಲಿಂದ ಈ ತಂಡ ಹಲವು ಮ್ಯೂಸಿಕ್ ಬ್ಯಾಂಡ್‌ಗಳನ್ನು ಪ್ರಡ್ಯೂಸ್ ಮಾಡಿದೆ. 'ನೋ ಮೋರ್ ಡ್ರೀಮ್' ನಿಂದ ಶುರುವಾಗಿದ್ದ ಇವರ ಜರ್ನಿ ಇತ್ತೀಚೆಗೆ ಬಿಡುಗಡೆಯಾದ 'ಡೈನಮೈಟ್' ಅಲ್ಬಂವರೆಗೂ ಸಾಗಿ ಬಂದಿದೆ. ಈ ತಂಡ ಹಲವು ರೆಕಾರ್ಡ್ ಬ್ರೇಕಿಂಗ್ ಮ್ಯೂಸಿಕ್ ಅಲ್ಬಂಗಳನ್ನು ನೀಡಿದೆ. ಇವರ ಸಾಂಗ್ ಹಾಗೂ ಡ್ಯಾನ್ಸ್‌ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಇವರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು.

ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ

ಬಾಲಿವುಡ್‌ನಲ್ಲಿ ರಶ್ಮಿಕಾ ಬ್ಯುಸಿ

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಈಗಾಗಾಗಲೇ 'ಮಿಷನ್ ಮಜ್ನು' ಹಾಗೂ 'ಗುಡ್ ಬೈ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆನೇ ರಣ್‌ಬೀರ್ ಕಪೂರ್ ಜೊತೆ ಮತ್ತೊಂದು ಸಿನಿಮಾಗೂ ಆಯ್ಕೆಯಾಗಿದ್ದಾರೆ. ಈ ಮೂಲಕ ಮೂರನೇ ಸಿನಿಮಾಗೆ ಸಹಿ ಮಾಡಿದ್ದು, ರಶ್ಮಿಕಾ ಮಂದಣ್ಣ ಬಹುತೇಕ ಬಾಲಿವುಡ್‌ನಲ್ಲೇ ಬ್ಯುಸಿಯಾಗಿದ್ದಾರೆ.

More from Filmibeat

English summary
Why Rashmika Mandanna Showing BTS Symbol While Posing Infront of Camera. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X