ಟ್ರೋಲ್ ಸಾಂಗ್ 'ಯುಐ' ಸಿನಿಮಾದಲ್ಲಿ ಇರುತ್ತಾ? ಇಲ್ವಾ? ಈ ಹಾಡಲ್ಲಿ ಹಂಸಲೇಖ ಬಂದಿದ್ದೇಗೆ?
ರಿಯಲ್‌ಸ್ಟಾರ್ ಉಪೇಂದ್ರ ಅವರ 'ಯುಐ' ಸಿನಿಮಾ ಒಂದು ಹಾಡು ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಟ್ರೋಲ್ ಸಾಂಗ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಟ್ರೋಲ್ ಸಾಂಗ್ ಪ್ರಚಾರಕ್ಕಾಗಿ ಕಂಪೋಸ್ ಮಾಡಿರುವ ಹಾಡಿರಬಹುದಾ? ಅಥವಾ ಸಿನಿಮಾದಲ್ಲಿ ಇರುತ್ತಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದಕ್ಕೆ ಸ್ವತ: ಉಪ್ಪಿನೇ ಉತ್ತರ ಕೊಟ್ಟಿದ್ದಾರೆ.
'ಯುಐ' ಸಿನಿಮಾದ ಈ ಸ್ಪೆಷಲ್ ಸಾಂಗ್ ಅನ್ನು ಉಪೇಂದ್ರ, ಅಜನೀಶ್ ಲೋಕನಾಥ್ ಹಾಗೂ ತಂಡ ಮುಂಬೈನಲ್ಲಿರುವ ಯೂಟ್ಯೂಬ್ ಸ್ಟುಡಿಯೋದಲ್ಲಿ ರಿಲೀಸ್ ಮಾಡಿದೆ. ಅಲ್ಲಿ ಉಪ್ಪಿ ಹಾಗೂ ಅಜನೀಶ್ ಲೋಕನಾಥ್ ಇಬ್ಬರೂ ಟ್ರೋಲ್ ಸಾಂಗ್ ಹುಟ್ಟಿಕೊಂಡಿದ್ದೇಗೆ? ಈ ಹಾಡು ಸಿನಿಮಾದಲ್ಲಿ ಇರುತ್ತಾ? ಇಲ್ಲ ಕೇವಲ ಪ್ರಚಾರಕ್ಕಷ್ಟೇ ಮಾಡಿರೋದಾ? ಅನ್ನೋ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ.

ಕೇವಲ ಟ್ರೋಲ್ ಸಾಂಗ್ ಅಷ್ಟೇ ಅಲ್ಲ. ಈ ಹಿಂದೆ ಬಿಟ್ಟಿದ್ದ ಡಾರ್ಕ್ ಟೀಸರ್ ಬಗ್ಗೆನೂ ರಿವೀಲ್ ಮಾಡಿದ್ದಾರೆ. ಹಾಗೇ ಉಪೇಂದ್ರ ಫ್ಯಾನ್ಸ್ " ಚಿಕ್ಕದು ದೊಡ್ಡದು" ಸಾಂಗ್ ರಿಲೀಸ್ ಮಾಡಿಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಟ್ರೋಲ್ ಸಾಂಗ್ ರಿಲೀಸ್ ಆಗಿತ್ತು. ಈ ಹಾಡು ಕೂಡ ಬಿಟ್ಟ ಕೆಲವೇ ನಿಮಿಷಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. ಅಷ್ಟಕ್ಕೂ ಈ ಹಾಡಿನ ಬಗ್ಗೆ ಉಪೇಂದ್ರ ಹೇಳಿದ್ದೇನು?
ಟ್ರೋಲ್ ಸಾಂಗ್ 'ಯುಐ' ಸಿನಿಮಾದಲ್ಲಿ ಇರುತ್ತೆ. ಇದು ಕೇವಲ ಪ್ರಚಾರಕ್ಕಾಗಿ ಮಾಡಿದ ಹಾಡಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇಷ್ಟೇ ಅಲ್ಲ ಯಾವ ಸಂದರ್ಭದಲ್ಲಿ ಈ ಸಾಂಗ್ ಬರುತ್ತೆ? ಹಾಡಿನ ಹಿನ್ನೆಲೆಯೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ಈ ಹಾಡು ಮಾಡುವುದಕ್ಕೆ ಸನ್ನಿವೇಶನೇ ಹಾಗಿದೆ. ಆಕೆ ಯಾರೋ ಒಬ್ಬರನ್ನು ಹುಚ್ಚರಂತೆ ಪ್ರೀತಿ ಮಾಡುತ್ತಾಳೆ. ಅವಳ ಸುತ್ತಮುತ್ತ ಏನೇನೋ ಆಗುತ್ತಿರುತ್ತೆ. ಹಾಗೆಲ್ಲ ಇದ್ದರೂ, ಅವಳು ಅದನ್ನೆಲ್ಲ ಲೆಕ್ಕಿಸದೆ ತನ್ನದೇ ಪ್ರಪಂಚದಲ್ಲಿ ಇರುತ್ತಾಳೆ. ಅದಕ್ಕೆ ನಾವು ಈ ಟ್ರೋಲ್‌ಗಳನ್ನು ಬಳಕೆ ಮಾಡೋಣ ಅನ್ನುವ ಆಲೋಚನೆ ಬಂತು. ನಾವು ಇದನ್ನು ಶುರು ಮಾಡಿದಾಗ ಎಂಜಾಯ್ ಮಾಡುವುದಕ್ಕೆ ಶುರು ಮಾಡಿದ್ವಿ." ಎಂದು ಹೇಳಿದ್ದಾರೆ.

ಅಂದ್ಹಾಗೆ ಈ ಟ್ರೋಲ್ ಸಾಂಗ್ ಬರೆದಿದ್ದು ಉಪೇಂದ್ರ ಅಲ್ಲ. 'ಫಸ್ಟ್ ರ‍್ಯಾಂಕ್ ರಾಜು' ಸಿನಿಮಾದ ನಿರ್ದೇಶಕ ನರೇಶ್ ಕುಮಾರ್. ಈ ಬಗ್ಗೆ ಉಪ್ಪಿ ಹೇಳಿದ್ದಿಷ್ಟು. "ನಮ್ಮ ಲಿರಿಕ್ ರೈಟರ್ ನನ್ನ ಜೊತೆ ಕೂತು ಸಾಕಷ್ಟು ಐಡಿಯಾಗಳನ್ನು ಕೊಟ್ಟರು. ಅದೃಷ್ಟ ಎಂಬಂತೆ ನನಗೆ ಟ್ರೋಲ್‌ಗಳೆಲ್ಲ ಸಿಕ್ಕಿದವು. ಅಜನೀಶ್ ಲೋಕನಾಥ್ ಆ ಟ್ರೋಲ್‌ಗಳನ್ನೆಲ್ಲಾ ಅಡ್ಜೆಸ್ಟ್ ಮಾಡಿ ಸಾಂಗ್ ಮಾಡಿದ್ರು. " ಎಂದಿದ್ದಾರೆ.
ಇನ್ನು ಅಜನೀಶ್ ಲೋಕನಾಥ್ ಕೂಡ ಹಾಡಿನ ಬಗ್ಗೆ ಕೆಲವು ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ. ಹಂಸಲೇಖ ಸಿನಿಮಾದ ಹಳೆ ಹಾಡನ್ನು ತೆಗೆದುಕೊಂಡ ಹೇಗೆ ಹೊಸ ಹಾಡನ್ನು ಕಂಪೋಸ್ ಮಾಡಲಾಗಿತ್ತು. ಅದಕ್ಕೆ ಮೊದಲು ಅವರೇ ಟ್ರೋಲ್ ಮಾಡಿಕೊಂಡು ಹಾಡನ್ನು ಕಂಪೋಸ್ ಮಾಡಿದ್ದಾರೆ. "ಮೊದಲು ನಮ್ಮನ್ನು ನಾವು ಟ್ರೋಲ್ ಮಾಡಿಕೊಳ್ಳೋಣ ಅಂತ ಅಂದುಕೊಂಡ್ವಿ. ಅದಕ್ಕೆ ಹಂಸಲೇಖ ಅವರ ಹಳೆಯ ಸಾಂಗ್ ಅನ್ನು ತೆಗೆದುಕೊಂಡ್ವಿ. ಆದರೆ, ಆ ಸಾಂಗ್ ಡಿಫ್ರೆಂಟ್ ಈ ಸಾಂಗ್ ಡಿಫ್ರೆಂಟ್. ಅವರ ಟ್ಯೂನ್ ಶೈಲಿಯಲ್ಲಿ ಸಾಂಗ್ ಕಂಪೋಸ್ ಮಾಡಿದ್ವಿ. ಇಲ್ಲಿ ರೊಮ್ಯಾಂಟಿಕ್ ಸಾಂಗ್‌ಗೆ ಟ್ರೋಲ್ ಲೈನ್‌ಗಳನ್ನು ಹಾಕಬೇಕಿತ್ತು. ಇದು ಅಷ್ಟು ಸುಲಭವಾಗಿ ಮಾಡುವ ಹಾಡಲ್ಲ. " ಎಂದು ಅಜನೀಶ್ ಲೋಕನಾಥ್ ಹೇಳಿದ್ದಾರೆ.


Click it and Unblock the Notifications











