25ನೇ ದಿನದ ಸಂಭ್ರಮ ಕ್ಯಾನ್ಸಲ್.. ಪಾಂಡವರಪುರದ ಇವೆಂಟ್ ಕಥೆಯೇನು? ದರ್ಶನ್ ಬಿಟ್ಟ ವಿಡಿಯೋದಲ್ಲೇನಿದೆ?
ದರ್ಶನ್ ಜೊತೆಗಿರುವ ಫೋಟೊವನ್ನು ನಟಿ ಪವಿತ್ರಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಬೆನ್ನಲ್ಲೇ ವಿವಾದ ಎದ್ದಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ರೊಚ್ಚಿಗೆದ್ದಿದ್ದರು. ಹೀಗಾಗಿ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ನಡುವೆ ಮುಸುಗಿನ ಗುದ್ದಾಟಕ್ಕೆ ಮತ್ತೆ ಬಹಿರಂಗಗೊಂಡಂತೆ ಆಗಿದೆ.
ಇತ್ತೀಚೆಗೆ 'ಕಾಟೇರ' ಸಿನಿಮಾ 25 ದಿನಗಳನ್ನು ಪೂರೈಸಿತ್ತು. ಆ ಸಂಬಂಧ ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು. ಇದಕ್ಕೆ ದರ್ಶನ್ ಆಗಮಿಸಬೇಕಿತ್ತು. ಆದರೆ, ನಟಿ ಪವಿತ್ರಾ ಗೌಡ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ಮ್ಯಾಟರ್ ವಿವಾದಕ್ಕೆ ತಿರುಗಿತ್ತು. ಹೀಗಾಗಿ ದರ್ಶಶ್ ಭಾಗವಹಿಸಬೇಕಿದ್ದ 'ಕಾಟೇರ' 25 ದಿನಗಳ ಸಂಭ್ರಮವನ್ನೇ ಕ್ಯಾನ್ಸಲ್ ಮಾಡಲಾಗಿತ್ತು.

ಆದರೆ, ನಾಳೆ (ಜನವರಿ 26) ಪಾಂಡವಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದರ್ಶನ್ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿದೆ. ನಾಳೆ (ಜನವರಿ 26) ಕೆ.ಎಸ್ ಪುಟ್ಟಣ್ಣಯ್ಯನವರ 75ನೇ ವರ್ಷದ ಜನ್ಮದಿನೋತ್ಸವ ನಡೆಯಲಿದೆ. ಈ ವೇಳೆ ಪುತ್ರ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಹೋಗುತ್ತಾರಾ? ಅನ್ನೋ ಗೊಂದಲದಲ್ಲಿ ಅಭಿಮಾನಿಗಳು ಇದ್ದರು. ಅದಕ್ಕೀಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶೇರ್ ಮಾಡಿದ ವಿಡಿಯೋ ಉತ್ತರ ಕೊಟ್ಟಿದೆ.
ಕೆ.ಎಸ್ ಪುಟ್ಟಣ್ಣಯ್ಯ ಅವರ 75ನೇ ಜನ್ಮದಿನೋತ್ಸವದ ಅಂಗವಾಗಿ ಜನವರಿ 26 ಶುಕ್ರವಾರದಂದು ಕಾರ್ಯಕ್ರಮಕ್ಕೆ ಬರುವಂತೆ ದರ್ಶನ್ ಫ್ಯಾನ್ಸ್‌ಗೆ ಆಹ್ವಾನ ನೀಡಲಾಗಿದೆ. "ಜನವರಿ 26ರಂದು ಕೆ ಎಸ್ ಪುಟ್ಟಣ್ಣಯ್ಯನವರ 75ನೇ ವರ್ಷದ ಜನ್ಮದಿನೋತ್ಸವ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್‌ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ. ದಯವಿಟ್ಟು ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ" ಎಂದು ದರ್ಶನ್ ಪುಟ್ಟಣ್ಣಯ್ಯ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ದರ್ಶನ್‌ಗೆ ರೈತರ ಆಪ್ತ ಎಂಬ ಬಿರುದು ಕೊಟ್ಟು ಸನ್ಮಾನ ಮಾಡುತ್ತಿದ್ದಾರೆ.
ಈ ವಿಡಿಯೋ ಮುನ್ನ ದರ್ಶನ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ದರ್ಶನ್, ಕೆ.ಎಸ್ ಪುಟ್ಟಣ್ಣಯ್ಯ ಅವರನ್ನು ರೈತ ಸಂಘದ ದೇವರು ಅಂತ ಕರೆದಿದ್ದಾರೆ. ಇದೇ ವೇಳೆ ಕೆ.ಎಸ್ ಪುಟ್ಟಣ್ಣಯ್ಯ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ತನ್ನ ಜೊತೆ 'ಕಾಟೇರ' ಚಿತ್ರತಂಡ ಕೂಡ ಬರುತ್ತಿದ್ದು, ನೀವು ಬರುವಂತೆ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಪವಿತ್ರಾ ಗೌಡ ಜೊತೆಗಿನ ಫೋಟೊಗಳು ವೈರಲ್ ಆಗುತ್ತಿದ್ದಂತೆ ದರ್ಶನ್ ಎಲ್ಲಾ ಕಾರ್ಯಕ್ರಮಗಳನ್ನು ರದ್ಧುಗೊಳಿಸಬಹುದು ಎಂಬ ಅಂದಾಜಿಸಲಾಗಿತ್ತು. ಆದರೆ, ದರ್ಶನ್ ತಮ್ಮ ಅಭಿಮಾನಿಗಳಿಗೆ ಕೆ.ಎಸ್ ಪುಟ್ಟಣ್ಣಯ್ಯ ಅವರ ಕಾರ್ಯಕ್ರಮಕ್ಕೆ ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳ ಗೊಂದಲಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆ ಎಳೆದಿದ್ದಾರೆ.


Click it and Unblock the Notifications











