ಕಾಟೇರ ಬಳಿಕ 'ರಾಬರ್ಟ್' ಪ್ರೀಕ್ವೆಲ್ ಆಗುತ್ತಾ? ತರುಣ್ ಸುಧೀರ್ ಯುನಿವರ್ಸ್ ಬಗ್ಗೆ ಸಿಕ್ಕ ಸುಳಿವೇನು?

ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರದ್ದು ಹಿಟ್ ಕಾಂಬಿನೇಷನ್ ಅಂತ ಸಾಬೀತಾಗಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ 'ರಾಬರ್ಟ್' ಬಾಕ್ಸಾಫೀಸ್ ಧೂಳೆಬ್ಬಿಸಿತ್ತು. ಈ ಸಿನಿಮಾಗೂ ಮುನ್ನ 'ಚೌಕ'ದಲ್ಲಿ ತರುಣ್ ಸುಧೀರ್ ಚಾಲೆಂಜಿಂಗ್ ಸ್ಟಾರ್‌ಗೆ ಆಕ್ಷನ್ ಕಟ್ ಹೇಳಿದ್ದರು.

'ಚೌಕ' ಸಿನಿಮಾ ನಾಲ್ಕು ಮಂದಿಯ ಕಥೆ ಆಗಿದ್ದರೂ, ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಾಬರ್ಟ್ ಎಂಬ ಪಾತ್ರಕ್ಕೆ ದರ್ಶನ್ ಬಣ್ಣ ಹಚ್ಚಿದ್ದರು. ಆ ಬಳಿಕ ಇದೇ 'ರಾಬರ್ಟ್' ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈಗ ಮತ್ತೆ 'ರಾಬರ್ಟ್' ಬಗ್ಗೆ ತರುಣ್ ಸುಧೀರ್ ಮಾತಾಡಿದ್ದಾರೆ.

Will Kaatera director Tharun Sudhir make a prequel of Robert with Darshan

ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರೋ ತರುಣ್ ಸುಧೀರ್‌ಗೆ ನಿರೂಪಕರು 'ಕಾಟೇರ' ಸಿನಿಮಾ ಬಗ್ಗೆ ಮಾತಾಡಿಸುತ್ತಿದ್ದರು. ಈ ವೇಳೆ ತರುಣ್ ಉನಿವರ್ಸ್ ಬಗ್ಗೆ ಚಿಂತನೆ ನಡೆಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ದರು. ಆಗ ತರುಣ್ ಸುಧೀರ್ 'ಚೌಕ' ಸಿನಿಮಾದ 'ರಾಬರ್ಟ್' ಪಾತ್ರದ ಬಗ್ಗೆ ಚರ್ಚೆ ಮಾಡಿದ್ದಾರೆ. 'ಕಾಟೇರ' ಬಳಿಕ ಇದರ ಬಗ್ಗೆ ಆಲೋಚನೆ ಮಾಡಬಹುದು ಎಂದಿದ್ದಾರೆ. ಹಾಗಿದ್ರೆ, ರಾಬರ್ಟ್ ಪ್ರೀಕ್ವೆಲ್ ಆಗುತ್ತಾ? ತರುಣ್ ಹೇಳಿದ್ದೇನು? ಅವರ ಮಾತಿನ ಸಾರಾಂಶ ಇಲ್ಲಿದೆ.

'ರಾಬರ್ಟ್' ಬ್ಯಾಕ್ ಸ್ಟೋರಿ ಏನಿರಬಹುದು?

'ಚೌಕ' ಸಿನಿಮಾ ದರ್ಶನ್ ನೇರವಾಗಿ ಜೈಲಿಗೆ ಬಂದಿದ್ದನ್ನು ತೋರಿಸಲಾಗಿತ್ತು. ಆದರೆ, ಯಾಕೆ ಜೈಲಿಗೆ ಬಂದಿದ್ದು? ರಾಬರ್ಟ್ ಹಿನ್ನೆಲೆಯೇನು? ಅನ್ನೋದನ್ನು ಪ್ರೀಕ್ವೆಲ್‌ನಲ್ಲಿ ರಿವೀಲ್ ಮಾಡಲು ಸಾಧ್ಯವಿದೆ ಎಂದು ಸುಳಿವು ನೀಡಿದ್ದರು. "ರಾಬರ್ಟ್ ಸಿನಿಮಾ ಮಾಡಿದ್ವಿ ಅದು ಓಕೆ. ಚೌಕ ಸಿನಿಮಾದಲ್ಲಿ ದರ್ಶನ್ ರಾಬರ್ಟ್ ಕ್ಯಾರೆಕ್ಟರ್ ಮಾಡಿದ್ರಲ್ವಾ.. ಅದು ಜೈಲಿನಲ್ಲೇ ಇಂಟ್ರುಡಕ್ಷನ್ ಆಗುತ್ತೆ. ಅವರ ಬ್ಯಾಕ್ ಸ್ಟೋರಿ ಏನಿರಬಹುದು? ಏನು ಹೇಳಬಹುದು? ಅನ್ನೋ ಆಲೋಚನೆ ಯಾವಾಗಲೂ ಇರುತ್ತೆ. ಅದರ ಮೇಲೆ ವರ್ಕ್ ಮಾಡಬಹುದು ಅನ್ನೋ ಫೀಲಿಂಗ್ ಯಾವಾಗಲೂ ಇರುತ್ತೆ." ಎಂದು ತರುಣ್ ಸುಧೀರ್ ಹೇಳಿದ್ದಾರೆ.

"ರಾಬರ್ಟ್ ಕಥೆ ಯಾರಿಗೂ ತೋರಿಸಿಲ್ಲ"

"ಚೌಕದಲ್ಲಿ ನಾಲ್ಕು ಜನರ ಕಥೆಯನ್ನು ತೋರಿಸಿದ್ದೇವೆ. ಅಲ್ಲಿಗೆ ಬಂದ ರಾಬರ್ಟ್ ಕಥೆ ಯಾರಿಗೂ ತೋರಿಸಿಲ್ಲ. ಅದಾಗಲೇ ಜೈಲಿಗೆ ಬಂದಿದ್ದಾಗಿದೆ. ಏನಕ್ಕೆ ಬಂದಿರಬಹುದು? ಅದರ ಹಿಂದೆ ಒಂದು ದೊಡ್ಡ ಕಥೆನೇ ಇರಬಹುದು. ಈ ವಿಷಯವನ್ನು ಹೇಳಬಹುದು." ಎಂದು ತರುಣ್ ಸುಧೀರ್ ಪ್ರೀಕ್ಷೆಲ್ ಬಗ್ಗೆ ಅಭಿಪ್ರಾಯ ಪಟ್ಟಿದ್ದಾರೆ.

Will Kaatera director Tharun Sudhir make a prequel of Robert with Darshan

"ಅದ್ಭುತ ಲೈನ್ ಸಿಕ್ಕರೆ ಸಿನಿಮಾ ಆಗುತ್ತೆ"

"ಕಾಟೇರ ಆದ್ಮೇಲೆ ಅಂತಹದ್ದೊಂದು ಅದ್ಭುತ ಲೈನ್ ಸಿಕ್ಕರೆ ಖಂಡಿತಾ ಮಾಡಬಹುದು. ಅಂತಹ ಸ್ಕ್ರೀಪ್ಟ್ ಸಿಕ್ಕರೆ ಪ್ರೇಮ್, ಪ್ರಜ್ವಲ್ ದೇವರಾಜ್ ಎಲ್ಲಾ ಸ್ನೇಹಿತರೇ ಅವರನ್ನು ಅಪ್ರೋಚ್ ಮಾಡುತ್ತೇನೆ. ಫ್ರೆಂಡ್ಸ್ ಅಂದಕೂಡಲೇ ನಾನು ಟೇಕನ್ ಫಾರ್ ಗ್ರ್ಯಾಂಟೆಡ್ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ." ಎಂದು ಪ್ರೀಕ್ವೆಲ್ ಆಗುವ ಬಗ್ಗೆ ಸುಳಿವು ನೀಡಿದ್ದಾರೆ.

'ಕಾಟೇರ' ರಿಲೀಸ್ ಪ್ಲ್ಯಾನ್ ಏನು?

ಸದ್ಯ ಡಿಸೆಂಬರ್ 29ಕ್ಕೆ ರಿಲೀಸ್ ಆಗುತ್ತಿರುವ 'ಕಾಟೇರ' ಸಿನಿಮಾದ ಪ್ರಚಾರದ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಈ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. "ಸದ್ಯಕ್ಕೀಗ ಕನ್ನಡ ಭಾಷೆಯನ್ನು ಮಾತ್ರ ಪ್ಲ್ಯಾನ್ ಮಾಡಿದ್ದೇವೆ. ನಂತರ ಎಲ್ಲಾ ಕಡೆಗೂ ರಿಲೀಸ್ ಆಗುತ್ತೆ. ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ಮಾಡುತ್ತಿದ್ದೇವೆ. ಪ್ಲ್ಯಾನಿಂಗ್ ಎಲ್ಲಾ ಮಾಡಿದ್ದೇವೆ. ಪ್ರಮೋಷನ್ಸ್, ಈವೆಂಟ್ಸ್ ಎಲ್ಲವೂ ತುಂಬಾ ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ಆಗಿದೆ. ಸದ್ಯಕ್ಕೆ ಕನ್ನಡ ಅಷ್ಟೇ ಅಂದುಕೊಂಡಿದ್ದೇವೆ. ಮುಂದಿನಗಳಲ್ಲಿ ಹೇಗೆ ಕಾಂತಾರ ಆಯ್ತೋ ಹಾಗೇ ರೆಡಿ ಪ್ಲ್ಯಾನ್ ಕೂಡ ಇಟ್ಟುಕೊಂಡಿದ್ದೇವೆ." ಎಂದಿದ್ದಾರೆ.

More from Filmibeat

English summary
Will Kaatera director Tharun Sudhir make a prequel of Robert with Darshan?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X