»   » ರಾಜಕೀಯಕ್ಕೆ ಧುಮುಕುತ್ತಾರಾ ರಾಕಿಂಗ್ ಸ್ಟಾರ್.? ನಟ ಯಶ್ ಹೇಳಿದ್ದೇನು.?

ರಾಜಕೀಯಕ್ಕೆ ಧುಮುಕುತ್ತಾರಾ ರಾಕಿಂಗ್ ಸ್ಟಾರ್.? ನಟ ಯಶ್ ಹೇಳಿದ್ದೇನು.?

Posted By:
Subscribe to Filmibeat Kannada

'ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು' ಎಂದು ಕೇವಲ ಹೇಳಿಕೆ ಕೊಡದೆ, ರೈತರ ಕಷ್ಟಗಳನ್ನು ಪರಿಹಾರ ಮಾಡಲು ನಟ ಯಶ್ ಪಣತೊಟ್ಟಿದ್ದಾರೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ರೈತರಿಗೆ ನೆರವಾಗಿರುವ ಯಶ್, ತಮ್ಮ 'ಯಶೋಮಾರ್ಗ ಫೌಂಡೇಶನ್' ಮೂಲಕ ಕೆರೆಗಳಲ್ಲಿ ಹೊಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕೆಲವು ಕಡೆ ಅದಕ್ಕೆ ಪ್ರತಿಫಲ ಕೂಡ ಸಿಕ್ಕಿದೆ.[ಯಶ್ ಮಹತ್ತರ ಕಾರ್ಯಕ್ಕೆ ಸಿಕ್ಕಿದೆ ಮೊದಲ ಪ್ರತಿಫಲ]

ಸದ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸದಲ್ಲೂ ತೊಡಗಿರುವ ನಟ ಯಶ್, ರಾಜಕೀಯಕ್ಕೆ ಧುಮುಕಲು ಹೀಗೆಲ್ಲ ಮಾಡುತ್ತಿದ್ದಾರಾ.? ಈ ಡೌಟು ಬಂದ ಕೂಡಲೆ ಮಾಧ್ಯಮದವರು ಯಶ್ ಬಳಿ ಕೇಳಿದ್ದಾರೆ. ಅದಕ್ಕೆ ನಟ ಯಶ್ ಕಡೆಯಿಂದ ಬಂದ ಉತ್ತರ ಏನು ಗೊತ್ತೇ.?

ರಾಜಕೀಯ ಉದ್ದೇಶ ನನಗಿಲ್ಲ

''ಇದಕ್ಕೆಲ್ಲ ನಾನು ಈ ಮುಂಚೆಯೇ ಉತ್ತರ ಕೊಟ್ಟಿದ್ದೇನೆ. ರೈತರ ಪರವಾಗಿರುವುದು ನನ್ನ ಕಾಳಜಿ. ರಾಜಕೀಯ ಪ್ರವೇಶ ಮಾಡುವ ಉದ್ದೇಶ ನನಗಿಲ್ಲ'' ಎಂದು ಯಶ್ ಹೇಳಿದ್ದಾರೆ.[ರಾಜಕೀಯ ಪ್ರವೇಶ ಉದ್ದೇಶಕ್ಕಾಗಿ ರೈತನಿಗೆ ನೆರವಾಗುತ್ತಿಲ್ಲ: ಯಶ್]

ರೈತರ ಸಾಲ ಮನ್ನಾ ಆಗಬೇಕು

''ಎಲ್ಲ ರೈತ ಸಂಘಟನೆಗಳು ಒಂದಾಗಬೇಕಿದೆ. ಬರ ಪರಿಸ್ಥಿತಿ ಇರುವಾಗ ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು'' ಎಂದು ನಟ ಯಶ್ ಒತ್ತಾಯಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಕುರಿತು

''ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಬೇಕು. ಇಷ್ಟು ವಿಳಂಬ ಆಗಿದ್ದೇ ದುರಾದೃಷ್ಟಕರ. ರೈತರು ಬೆಳೆದ ಬೆಳೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಬೇಕು''

ಬರ ಅಧ್ಯಯನ ಪ್ರವಾಸದಲ್ಲಿ ನಟ ಯಶ್

ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸದಲ್ಲಿರುವ ನಟ ಯಶ್ 'ಯಶೋಮಾರ್ಗ ಫೌಂಡೇಶನ್' ವತಿಯಿಂದ ರೈತರಿಗೆ ಮಳೆಕೊಯ್ಲು ಪಾಠ ಮಾಡಿದರು. ಜೊತೆಗೆ ಅಖಂಡ ಕರ್ನಾಟಕ ರೈತ ಸಂಘ ಆಯೋಜಿಸಿದ್ದ ರೋಡ್ ಶೋನಲ್ಲಿ ಯಶ್ ಪಾಲ್ಗೊಂಡಿದ್ದರು.

English summary
Will Kannada Actor Rocking Star Yash enter Politics.? Read the article to know the answer
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada