»   » ಯಶ್ ಮಹತ್ತರ ಕಾರ್ಯಕ್ಕೆ ಸಿಕ್ಕಿದೆ ಮೊದಲ ಪ್ರತಿಫಲ

ಯಶ್ ಮಹತ್ತರ ಕಾರ್ಯಕ್ಕೆ ಸಿಕ್ಕಿದೆ ಮೊದಲ ಪ್ರತಿಫಲ

Posted By:
Subscribe to Filmibeat Kannada

ಬೆಳ್ಳಿತೆರೆ ಮೇಲೆ ಮಾತ್ರ ಹೀರೋ ಅಲ್ಲ, ತಾವು ನಿಜ ಜೀವನದಲ್ಲೂ ಸಹ ಹೀರೋ ಎಂಬುದನ್ನು ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ರೈತರಿಗಾಗಿ ಒಳ್ಳೆ ಕೆಲಸಗಳನ್ನು ಮಾಡುವುದರ ಮೂಲಕ ಸಾಬೀತುಪಡಿಸಿದ್ದಾರೆ.[ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]

ರಾಕಿಂಗ್ ಸ್ಟಾರ್ ದಂಪತಿ ಉತ್ತರ ಕರ್ನಾಟಕದ ಭಾಗದ ರೈತರಿಗೆ ನೆರವಾಗಲು ಇತ್ತೀಚೆಗೆತಾನೆ ತಮ್ಮ ಮೊದಲ ಹೆಜ್ಜೆಯಾಗಿ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಕೆಲಸ ಪ್ರಾರಂಭಿಸಿದ ಒಂದು ತಿಂಗಳಿಗೆ ಮುಂಚಿತವಾಗಿಯೇ ಈಗ ಯಶ್ ಮಹತ್ತರ ಕಾರ್ಯಕ್ಕೆ ಯಶಸ್ಸು ಸಿಕ್ಕಿದೆ. ಅದೇನು ಅಂತ ತಿಳಿಯೋ ಕುತೂಹಲ ನಿಮಗಿದೆಯಾ? ಹಾಗಿದ್ರೆ ಮುಂದೆ ಓದಿ..

ಕೆರೆಗಳ ಅಭಿವೃದ್ದಿಯಲ್ಲಿ ಮೊದಲ ಪ್ರತಿಫಲ

ನಟ ಯಶ್ 'ಯಶೋಮಾರ್ಗ ಫೌಂಡೇಶನ್' ಮೂಲಕ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೆರೆಗಳನ್ನ ಅಭಿವೃದ್ದಿ ಪಡಿಸುವ ಸಲುವಾಗಿ, ಫೆಬ್ರವರಿ 28 ರಂದು ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯಲ್ಲಿ ಭೂಮಿ ಪೂಜೆ ಮಾಡಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದರು. ಈ ಮಹತ್ತರ ಕೆಲಸಕ್ಕೀಗ ಮೊದಲ ಪ್ರತಿಫಲ ಸಿಕ್ಕಿದೆ.[ಯಾದಗಿರಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ಯಶ್: ಕಾರಿನ ಗಾಜು ಪುಡಿ ಪುಡಿ]

ಜಿನುಗುತ್ತಿದೆ ಅಂತರ್ಜಲ

ಹೌದು. ತಲ್ಲೂರು ಕೆರೆಯಲ್ಲಿ ಕಳೆದ 27 ದಿನಗಳಿಂದ ಹೂಳೆತ್ತುವ ಕಾರ್ಯ ನಡೆಯುತ್ತಿತ್ತು. ಕೆರೆಯಲ್ಲಿ 4 ರಿಂದ 5 ಅಡಿ ಆಳ ಹೂಳೆತ್ತಿದ ನಂತರ ಅಂತರ್ಜಲದ ನೀರು ಉಕ್ಕುತ್ತಿದೆ. ಅಂತೂ ಯಶ್ ಮಹತ್ತರ ಕಾರ್ಯಕ್ಕೆ ಈಗ ಮೊದಲ ಫಲ ಸಿಕ್ಕಿದೆ.

ನೀರು ಕುಡಿದು ಸಂತಸ ವ್ಯಕ್ತಪಡಿಸಿದ ಪರಿಸರ ಪ್ರೇಮಿ

ತಲ್ಲೂರು ಕೆರೆಹೂಳೆತ್ತುವ ಕಾರ್ಯ ಪರಿಶೀಲನೆಗಾಗಿ ಭೇಟಿ ನೀಡಿದ್ದ, ಪರಿಸರ ಪ್ರೇಮಿ ಮತ್ತು ನುಡಿಚಿತ್ರ ಬರಹಗಾರರಾದ ಶಿವಾನಂದ ಕಳವೆ ಅವರು ಹೊರಹೊಮ್ಮುತ್ತಿರುವ ಅಂತರ್ಜಲದ ನೀರನ್ನು ಕುಡಿದು, ಕೆರೆಯ ಜೀವಕಳೆ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರಕೃಪೆ; ಶಿವಾನಂದ ಕಳವೆ

ಬೆಟ್ಟದ ದಿಕ್ಕಿನಿಂದ ಉಕ್ಕುತ್ತಿರುವ ಅಂತರ್ಜಲ

ತಲ್ಲೂರು ಕೆರೆಯಲ್ಲಿ ನಾಲ್ಕೈದು ಅಡಿ ಹೂಳು ತೆಗೆದಾಗಿನಿಂದಲೂ, ಅಲ್ಲಿನ ಬೆಟ್ಟದ ದಿಕ್ಕಿನಿಂದ ಅಂತರ್ಜಲ ನೀರು ಉಕ್ಕುತ್ತಿದೆ ಎಂದು ಅಲ್ಲಿನ ಸಿಹಿ ನೀರು ಕುಡಿದ ಶಿವಾನಂದ ಕಳವೆ ಹೇಳಿದ್ದಾರೆ.

ಚಿತ್ರಕೃಪೆ; ಶಿವಾನಂದ ಕಳವೆ

ದನ-ಕರುಗಳಿಗೆ ಸಿಕ್ಕಿದೆ ನೀರಿನ ಆಸರೆ

ಈ ಬಿರುಬೇಸಿಗೆಯಲ್ಲಿ ತಲ್ಲೂರು ಕೆರೆಯಲ್ಲಿ ನೀರಿಲ್ಲದ ಕಾರಣ ಅಲ್ಲಿನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿತ್ತು. ಈಗ ಸ್ವಲ್ಪ ಮಟ್ಟದ ಅಂತರ್ಜಲ ಬರುತ್ತಿದ್ದು, ಈ ನೀರು ಆಸರೆ ಆಗಬಹುದು.

ಹೂಳೆತ್ತುವ ಕಾರ್ಯಕ್ಕೆ 4 ಕೋಟಿ ವೆಚ್ಚ

ಅಂದಹಾಗೆ ತಲ್ಲೂರು ಕೆರೆ ಹೂಳೆತ್ತುವ ಯೋಜನೆಗೆ ನಟ ಯಶ್ 4 ಕೋಟಿ ರೂ ಮೀಸಲಿಟ್ಟಿದ್ದರು. ಅಲ್ಲದೇ ಈ ಕಾರ್ಯದಿಂದ 40 ಗ್ರಾಮಗಳಿಗೆ ನೀರಿನ ಸಮಸ್ಯೆ ತಪ್ಪುತ್ತದೆ ಎಂದು ಅಂದಾಜಿಸಲಾಗಿದೆ. ಕೆರೆಯಲ್ಲಿ 1.5 ಮೀಟರ್ ಹೂಳು ತೆಗೆಯುವುದು, 4000 ಕೋಟಿ ಲೀಟರ್ ನೀರು ಸಂಗ್ರಹ ಮಾಡುವುದು ಯೋಜನೆಯ ಉದ್ದೇಶವಾಗಿದೆ.

English summary
Kannada’s Rocking Star Yash and along with wife Radhika Pandit Performed the ground breaking ceremony and launched the water conservation Programme through his Yashomarga Trust on February 28th. Yash got first reward for his tremendous work.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada