ಯುವ ರಾಜ್‌ಕುಮಾರ್ 2ನೇ ಸಿನಿಮಾ 'ಯುವ 2': ಸಪ್ತಮಿ ಗೌಡನೇ ನಾಯಕಿನಾ? ಇಲ್ವಾ?

ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ 'ಯುವ' ತೆರೆಕಂಡ ಬಳಿಕ ಎರಡನೇ ಸಿನಿಮಾ ಬಗ್ಗೆ ಸುದ್ದಿನೇ ಇರಲಿಲ್ಲ. ಈ ಮಧ್ಯೆ ಯುವ ಸಾಂಸಾರಿಕ ವಿಚಾರ ಬೀದಿ ರಂಪ ಆಗಿತ್ತು. ಈ ಕಾರಣಕ್ಕೆ ಯುವ ಎರಡನೇ ಸಿನಿಮಾ ಶೀಘ್ರದಲ್ಲಿಯೇ ಆರಂಭ ಆಗುವುದು ಅನುಮಾನ ಎಂದೇ ಅಂದಾಜಿಸಲಾಗಿತ್ತು.

ಒಂದ್ಕೆಡೆ ಇಷ್ಟೆಲ್ಲ ಚರ್ಚೆ ನಡೆಯುತ್ತಿರುವಾಗಲೇ ಯುವ ರಾಜ್‌ಕುಮಾರ್ ಎರಡನೇ ಸಿನಿಮಾ ಅನೌನ್ಸ್ ಆಗಿದೆ. ಕಳೆದ ಕೆಲವು ದಿನಗಳಿಂದ ಯುವ ಎರಡನೇ ಸಿನಿಮಾದ ಬಗ್ಗೆ ಚರ್ಚೆಯಾಗುತ್ತಿತ್ತು. ನಿರೀಕ್ಷೆ ಮಾಡಿದಂತೆ 'ಯುವ 2' ಸಿನಿಮಾ ಅನೌನ್ಸ್ ಆಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ವಿಷಯವನ್ನು ಶೇರ್ ಮಾಡಿದ್ದಾರೆ.

Will Sapathami Gowda continue as lead actress in Yuva Rajkumar second movie Yuva 2

'ಯುವ 2'ಗಾಗಿ ಅಶ್ವಿನಿ ಪುನೀತ್‌ರಾಜ್‌ಕುಮಾರ್, ಕೆಆರ್‌ಜಿ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕೇವಲ ಒಂದು ಅನೌನ್ಸ್‌ಮೆಂಟ್ ಪೋಸ್ಟರ್ ಅಷ್ಟೇ ರಿಲೀಸ್ ಆಗಿದ್ದು, ಇನ್ನು ಉಳಿದ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಮಧ್ಯೆ 'ಯುವ 2'ನಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ಮುಂದುವರೆಯುತ್ತಾರಾ? ಅನ್ನೋ ಪ್ರಶ್ನೆನೂ ಎದ್ದಿದೆ.

ಹೊಂಬಾಳೆ ಫಿಲ್ಮ್ಸ್ ಯುವ ರಾಜ್‌ಕುಮಾರ್ ಮೊದಲ ಸಿನಿಮಾ 'ಯುವ'ವನ್ನು ನಿರ್ಮಾಣ ಮಾಡಿತ್ತು. ಆದ್ರೀಗ ಸೀಕ್ವೆಲ್ 'ಯುವ 2' ಅನ್ನು ಮೂರು ಸಂಸ್ಥೆಗಳು ಸೇರಿಕೊಂಡು ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದೆ. ಕೆಆರ್‌ಜಿ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್ ಹಾಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಮೂಲಕ ಹೊಂಬಾಳೆ ಫಿಲ್ಮ್ಸ್‌ಗೂ 'ಯುವ 2'ಗೂ ಯಾವುದೇ ಸಂಬಂಧವಿಲ್ಲ ಅನ್ನೋದು ಗೊತ್ತಾಗುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿರೋದು ಸಪ್ತಮಿ ಗೌಡ ವಿಚಾರ. ಮೊದಲ ಸಿನಿಮಾದಲ್ಲಿ ಯುವ ರಾಜ್‌ಕುಮಾರ್‌ಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದರು. ಹೀಗಾಗಿ ಎರಡನೇ ಸಿನಿಮಾದಲ್ಲೂ ಸಪ್ತಮಿ ಗೌಡ ನಾಯಕಿಯಾಗಿ ಮುಂದುವರೆಯುತ್ತಾರಾ? ಇಲ್ಲ ವಿವಾದದ ಬಳಿಕ ಬೇರೊಬ್ಬ ನಾಯಕಿಯನ್ನು ಕರೆದುಕೊಂಡು ಬರುತ್ತಾರಾ? ಅನ್ನೋ ಕುತೂಹಲ ಮೂಡಿದೆ. ಸದ್ಯ ರಿಲೀಸ್ ಆಗಿರುವ ಅನೌನ್ಸ್‌ಮೆಂಟ್ ಪೋಸ್ಟರ್‌ನಲ್ಲಿ ಈ ಬಗ್ಗೆ ಸುಳಿವು ಇಲ್ಲ.

ಯುವ ರಾಜ್‌ಕುಮಾರ್ ವಿಚ್ಛೇದನ ಪ್ರಕರಣದಲ್ಲಿ ನಟಿ ಸಪ್ತಮಿ ಗೌಡ ಹೆಸರು ಕೇಳಿ ಬಂದಿತ್ತು. ಡಿವೋರ್ಸ್ ಪ್ರಕರಣ ಹೊರ ಬರುತ್ತಿದ್ದಂತೆ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ನಟಿ ಸಪ್ತಮಿ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆ ಬಳಿಕ ಸಪ್ತಮಿ ಗೌಡ ಕೋರ್ಟ್ ಮೊರೆ ಹೋಗಿದ್ದರು. ಅಲ್ಲಿಂದ ಯುವ ರಾಜ್‌ಕುಮಾರ್ ಹಾಗೂ ಸಪ್ತಮಿ ಗೌಡ ಮ್ಯಾಟರ್ ಸೈಲೆಂಟ್ ಆಗಿತ್ತು. ಈಗ 'ಯುವ 2' ಅನೌನ್ಸ್ ಆದ ಬೆನ್ನಲ್ಲೇ ಸಪ್ತಮಿ ಗೌಡ ನಾಯಕಿಯಾಗಿ ಮುಂದುವರೆಯುತ್ತಾರಾ? ಅನ್ನೋ ಅನುಮಾನ ಮೂಡಿದೆ.

ಯುವ ಸಿನಿಮಾ ನಿರ್ದೇಶಿಸಿದ್ದ ಸಂತೋಷ್ ಆನಂದ್‌ರಾಮ್ 'ಯುವ 2'ಗೂ ಆಕ್ಷನ್ ಕಟ್ ಹೇಳುತ್ತಾರಾ? ಅನ್ನೋ ಪ್ರಶ್ನೆನೂ ಕಾಡುತ್ತಿದೆ. 'ಯುವ 2' ಅನೌನ್ಸ್‌ಮೆಂಟ್ ಪೋಸ್ಟರ್‌ನಲ್ಲಿ ಸಂತೋಷ್‌ ಆನಂದ್‌ರಾಮ್‌ ಬಗ್ಗೆ ಉಲ್ಲೇಖವಿಲ್ಲ. ಬಹುಶ: ಮುಂದಿನ ದಿನಗಳಲ್ಲಿ ನಿರ್ದೇಶಕರ ಹೆಸರು ರಿವೀಲ್ ಆದರೂ ಆಗಬಹುದು. ಸದ್ಯಕ್ಕೆ ಸಂತೋಷ್ ಆನಂದ್‌ರಾಮ್ ಹಾಗೂ ಸಪ್ತಮಿ ಗೌಡ 'ಯುವ 2' ಭಾಗವಾಗಿರುತ್ತಾರಾ? ಅನ್ನೋ ಕುತೂಹಲ ಘಟ್ಟದಲ್ಲಿದೆ.

More from Filmibeat

English summary
Will Sapathami Gowda continue as lead actress in Yuva Rajkumar second movie Yuva 2:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X