96 ಗಂಟೆಯೊಳಗೆ 75 ಸಾವಿರ 'ಕಾಟೇರ' ಟಿಕೆಟ್ ಸೇಲ್; ಎಲ್ಲೆಲ್ಲಿ ಎಷ್ಟೆಷ್ಟು ಥಿಯೇಟರ್ ಹೌಸ್‌ಫುಲ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕಾಟೇರ' ಹವಾ ಜೋರಾಗಿದೆ. ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅಷ್ಟೇ. ಅಷ್ಟರಲ್ಲೇ ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದ್ದಂತೆ ಸಿನಿಮಾ ಅಭಿಮಾನಿಗಳು ಟಿಕೆಟ್ ಖರೀದಿಗಾಗಿ ಮುಗಿಬಿದ್ದಿದ್ದಾರೆ.

ಇದೂವರೆಗೂ ದರ್ಶನ್ ನಟಿಸಿದ 55 ಸಿನಿಮಾಗಳಿಗಿಂತ 'ಕಾಟೇರ' ವಿಭಿನ್ನ ಸಿನಿಮಾ. ರೆಟ್ರೋ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದರೂ, 70ರ ದಶಕದ ಕಥೆಯಲ್ಲಿ ದರ್ಶನ್ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ದರ್ಶನ್ ಅಭಿಮಾನಿಗಳಿಗೆ ಈ ಸಿನಿಮಾ ಎಲ್ಲಿಲ್ಲದ ಕುತೂಹಲವಿದೆ. 'ಕಾಟೇರ'ದಲ್ಲಿ ದರ್ಶನ್ ಖದರ್ ನೋಡುವುದಕ್ಕಾಗಿಯೇ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

Within 96 hours Darshan Starrer Kaatera movie sold 75 thousand tickets in book my show

'ಕಾಟೇರ' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್ ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದಾರೆ. ಕೇವಲ 96 ಗಂಟೆಯೊಳಗೆ ಪ್ಯಾನ್ ಇಂಡಿಯಾ ರೇಂಜ್‌ಗೆ ಟಿಕೆಟ್ ಸೇಲ್ ಆಗಿದೆ. ಚಿತ್ರತಂಡದ ಪ್ರಕಾರ, ಬುಕ್ ಮೈ ಶೋನಲ್ಲಿ 'ಕಾಟೇರ' ಟಿಕೆಟ್ ಹಾಟ್ ಕೇಕ್‌ನಂತೆ ಸೇಲ್ ಆಗುತ್ತಿದೆ. ಬರೀ ಬುಕ್ ಮೈ ಶೋನಲ್ಲಿಯೇ 75 ಸಾವಿರಕ್ಕೂ ಅಧಿಕ 'ಕಾಟೇರ' ಟಿಕೆಟ್‌ಗಳು ಮಾರಾಟ ಆಗಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ ಎನ್ನಬಹುದು.

'ಕಾಟೇರ' ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗುತ್ತಿರೋ ಸಿನಿಮಾ. ಹೀಗಿದ್ದರೂ ಅಡ್ವಾನ್ಸ್ ಬುಕಿಂಗ್‌ನಲ್ಲಿ ದಾಖಲೆ ಬರೆದಿದೆ ಅಂತ ಅಭಿಮಾನಿಗಳು ಅನೌನ್ಸ್ ಮಾಡಿದ್ದಾರೆ. ನಿನ್ನೆಗೆ (ಡಿಸೆಂಬರ್ 26) ಅಡ್ವಾನ್ಸ್ ಬುಕಿಂಗ್ ಓಪನ್ ಆದ ಕೇವಲ 48 ಗಂಟೆಗಳಲ್ಲಿ 'ಕಾಟೇರ' ಒಂದು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾಗಳ ಪೈಪೋಟಿಯಲ್ಲಿ ಕನ್ನಡ ಸಿನಿಮಾಗೆ ಈ ಮಟ್ಟಿಗೆ ಕ್ರೇಜ್ ಇರೋದು ಸಿನಿಮಾ ಮೇಲಿರೋ ಕ್ರೇಜ್ ಅನ್ನು ಹೇಳುತ್ತಿದೆ.

Within 96 hours Darshan Starrer Kaatera movie sold 75 thousand tickets in book my show

ಇಷ್ಟೇ ಅಲ್ಲದೆ, 'ಕಾಟೇರ' ಸಿನಿಮಾ ರಿಲೀಸ್ ಆಗುತ್ತಿರುವ ಬೆಂಗಳೂರು ಹಾಗೂ ಮೈಸೂರಿನ ಬಹುತೇಕ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಬೆಂಗಳೂರಿನಲ್ಲಿ ಲಕ್ಷ್ಮಿ ನರಸಿಂಹ ಚಿತ್ರಮಂದಿರ ಬೆಳಗ್ಗೆಯ 5 ಗಂಟೆ ಶೋ ಹೌಸ್ ಫುಲ್ ಆಗಿದೆ. ಕಾಮಾಕ್ಯ 5 ಗಂಟೆ ಶೋ, ವೆಂಕಟೇಶ್ವರ 6 ಗಂಟೆ ಶೋ, ಸಿದ್ದೇಶ್ವರದ ರಾತ್ರಿ 12 ಗಂಟೆ ಶೋ ಹಾಗೂ ಸಂಜೆ 4 ಗಂಟೆ ಶೋಗಳು ಹೌಸ್‌ಫುಲ್ ಆಗಿವೆ. ಇನ್ನು ಬಹುತೇಕ ಚಿತ್ರಮಂದಿರಗಳು ಫಾಸ್ಟ್ ಆಗಿ ಬುಕಿಂಗ್ ಆಗುತ್ತವೆ. ರಾಕ್‌ಲೈನ್ ಸಿನಿಮಾ, ಗೋಪಾಲನ್ ಸಿನಿಮಾಸ್, ಅನುಪಮಾ, ಕಾಮಾಕ್ಯ, ಪ್ರಸನ್ನ, ಸಿದ್ಧೇಶ್ವರ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ಹಾಗೇ ಮೈಸೂರಿನ ಚಿತ್ರಮಂದಿರಗಳು ಕೂಡ ಅಷ್ಟೇ ಫಾಸ್ಟ್ ಆಗಿ ಬುಕ್ ಆಗುತ್ತಿವೆ. ಮೈಸೂರಿನ ಎಲ್ಲಾ ಮೂರು ಥಿಯೇಟರ್‌ಗಳ ಮೊದಲ ದಿನದ ಎಲ್ಲಾ ಶೋಗಳು ಹೌಸ್‌ ಫುಲ್ ಆಗಿವೆ. ಹಾಗೇ ಮೈಸೂರು ಪಿವಿಆರ್ ಹಾಗೂ ಡಿಸಿಆರ್‌ನ ಎಲ್ಲಾ ಶೋಗಳು ಹೌಸ್ ಫುಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿವೆ.

ಇನ್ನು 'ಕಾಟೇರ' ಸಿನಿಮಾದಲ್ಲಿ ದರ್ಶನ್ ಜೊತೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕುಮಾರ್ ಗೋವಿಂದ್, ಹಿರಿಯ ನಟಿ ಶ್ರುತಿ, ಹಿರಿಯ ನಟ ಬಿರಾದರ್ ಸೇರಿದಂತೆ ಕನ್ನಡದ ಬಹುತೇಕ ಕಲಾವಿದರು ನಟಿಸಿದ್ದಾರೆ. 'ರಾಬರ್ಟ್' ಬಳಿಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದೇ ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಇಡೀ ಚಿತ್ರರಂಗ ಎದುರು ನೋಡುತ್ತಿದೆ.

More from Filmibeat

English summary
75 thousand Kaatera ticket sold in just 96 hours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X