'ವಿಕ್ರಾಂತ್ ರೋಣ' ತಂಡದ NFT ಮೆಂಬರ್‌ಶಿಪ್: ವಿಶ್ವದಲ್ಲಿ ಇದೇ ಮೊದಲು!

ವಿಶ್ವದ ಮೂಲೆ ಮೂಲೆಯಲ್ಲಿ ಎನ್‌ಎಫ್‌ಟಿ ಬಗ್ಗೆ ಚರ್ಚೆಯಾಗುತ್ತಿದೆ. ಚಿತ್ರರಂಗ ಎನ್‌ಎಫ್‌ಟಿ ಅನ್ನುವ ಡಿಜಿಟಲ್ ವರ್ಲ್ಡ್ ಅನ್ನು ಬೇರೆ ಬೇರೆ ರೀತಿಯನ್ನು ಬಳಸಿಕೊಳ್ಳುತ್ತಿದೆ. 'ಕೆಜಿಎಫ್ 2' ಸಿನಿಮಾ ಕೂಡ ಎನ್‌ಎಫ್‌ಟಿಯನ್ನುಬೇರೆ ರೀತಿಯೇ ಬಳಸಿಕೊಂಡಿತ್ತು. ಈಗ 'ವಿಕ್ರಾಂತ್ ರೋಣ' ಸಿನಿಮಾ ಇನ್ನೂ ವಿಭಿನ್ನವಾಗಿ ಬಳಸಿಕೊಳ್ಳುತ್ತಿದೆ.

'ವಿಕ್ರಾಂತ್ ರೋಣ' ಸಿನಿಮಾ ಕೂಡ ಎನ್‌ಎಫ್‌ಟಿಗೆ ಎಂಟ್ರಿ ಕೊಟ್ಟಿದೆ. ಬ್ಲಾಕ್‌ಚೈನ್ ಆಧರಿಸಿದ ಟಿಕೆಟಿಂಗ್ ವೇದಿಕೆಯ ಮೂಲಕ ಪ್ರೀಮಿಯರ್ ಟಿಕೆಟ್‌ ಹಾಗೂ ಸದಸ್ಯತ್ವವನ್ನು ನೀಡಲು ಮುಂದಾಗಿದೆ. ಅಸಲಿಗೆ ಎನ್‌ಎಫ್‌ಟಿ ಮೂಲಕ ಟಿಕೆಟ್‌ಗಳನ್ನು ನೀಡಲು ಹೊರಟ ಈ ಪ್ರಯತ್ನ ಇಡೀ ವಿಶ್ವದಲ್ಲಿಯೇ ಮೊದಲು ಎನ್ನಲಾಗಿದೆ.

NFT ಆಗಿ ಪ್ರೀಮಿಯರ್ ಟಿಕೆಟ್

NFT ಆಗಿ ಪ್ರೀಮಿಯರ್ ಟಿಕೆಟ್

'ವಿಕ್ರಾಂತ್ ರೋಣ' ಸಿನಿಮಾದ NFT ಪ್ರೀಮಿಯರ್ ಟಿಕೆಟ್ ಹಾಗೂ ಮೆಂಬರ್‌ಶಿಪ್ ನೀಡಲು ಚಾಲನೆ ನೀಡಿದೆ. ಸಿಲ್ವರ್, ಗೋಲ್ಡ್, ಪ್ಲಾಟಿನಂ ಹಾಗೂ ಡೈಮಂಡ್ NFT ಮೆಂಬರ್‌ಶಿಪ್‌ಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಪ್ರೀಮಿಯರ್ ವೇಳೆ ರೆಡ್-ಕಾರ್ಪೆಟ್‌ ಎಂಟ್ರಿ, ಸಿನಿಮಾದ NFT ಲೋಗೊ, ವಿಶೇಷವಾದ ಪಾರ್ಟಿ ಆಹ್ವಾನ, ಸಿನಿಮಾದ ನಟರೊಂದಿಗೆ ಫೋಟೊ ತೆಗೆದುಕೊಳ್ಳುವುದಕ್ಕೆ ಅವಕಾಶ ಹಾಗೂ ತಾರೆಯರೊಂದಿಗೆ ನೇರ ಮಾತುಕತೆಗೆ ಅವಕಾಶ ನೀಡಲಾಗಿದೆ.

NFT ಬಗ್ಗೆ ಏನಂತಾರೆ ಸುದೀಪ್?

NFT ಬಗ್ಗೆ ಏನಂತಾರೆ ಸುದೀಪ್?

"ವಿಕ್ರಾಂತ್ ರೋಣ ದೊಡ್ಡ ಸಿನಿಮಾ. ನಾವು ಯಾವಾಗಲೂ ದೊಡ್ಡದಾಗಿಯೇ ಪ್ಯಾನ್ ಮಾಡಿದ್ದೆವು. ಈ ಸಿನಿಮಾಗೆ ವಿಶ್ವದ ಮೊದಲ NFT ಪ್ರೀಮಿಯರ್ ಸದಸ್ಯತ್ವ ನೀಡಿರುವುದು ಅಭಿಮಾನಿಗಳೊಂದಿಗೆ ಹೊಸ ರೀತಿಯ ಸಂವಹನ ಹಾಗೂ ಯಾವಾಗಲೂ ಎಂಗೇಜ್ ಆಗಲು ಅನುಕೂಲವಾಗಿದೆ. ಈ ಅನುಭವವನ್ನು ಅಭಿಮಾನಿಗಳು ಹೆಚ್ಚು ಸಮಯ ನೆನಪಿನಲ್ಲಿ ಇಟ್ಟಿಕೊಳ್ಳಬೇಕು ಎಂಬುವುದು ನನ್ನ ಬಯಕೆ. ಬ್ಲಾಕ್ ಟಿಕೆಟ್ಸ್ ಜೊತೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಸೇರಿಕೊಂಡಿದ್ದು ಖುಷಿ ಕೊಟ್ಟಿದೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಸುದೀಪ್ ಪತ್ನಿ ಪ್ರಿಯಾ ಹೇಳಿದ್ದೇನು?

ಸುದೀಪ್ ಪತ್ನಿ ಪ್ರಿಯಾ ಹೇಳಿದ್ದೇನು?

NFT ಮೆಂಬರ್‌ಶಿಪ್ ಬಿಡುಗಡೆ ಮಾಡುವ ವೇಳೆ ಪ್ರಿಯಾ ಸುದೀಪ್ ಕೂಡ ಭಾಗಿಯಾಗಿದ್ದರು. ಈ ವೇಳೆ "ಸಾಂಕ್ರಾಮಿಕವು ಮನರಂಜನೆಯ ಉದ್ಯಮಕ್ಕೆ ಹಾಗೂ ವಹಿವಾಟಿಗೆ ಬಹಳ ಕಷ್ಟಕರ ಎನಿಸಿತ್ತು. ಉದ್ಯಮವು ಮತ್ತೆ ಯಥಾಸ್ಥಿತಿಗೆ ಮರಳುತ್ತಿರುವಾಗ ಎನ್.ಎಫ್.ಟಿ ಟಿಕೆಟಿಂಗ್ ಅಭಿಮಾನಿಗಳನ್ನು ಆಕ್ಟಿವ್ ಮಾಡಿದೆ. ಮೆಟಾವರ್ಸ್ ಮತ್ತು ಎನ್.ಎಫ್.ಟಿಗಳ ಜಗತ್ತನ್ನು ಮತ್ತಷ್ಟು ಆವಿಷ್ಕಾರ ಮಾಡಲು ಖುಷಿಯಾಗಿದೆ." ಎಂದು ಪ್ರಿಯಾ ಸುದೀಪ್ ಹೇಳಿದ್ದಾರೆ.

Recommended Video

Vikrantrona | ರಕ್ಕಮ್ಮ ಐಟಂ ಸಾಂಗ್ ಅಲ್ಲ ಸಾಂಗ್ ಅಷ್ಟೇ | Filmibeat Kannada
'ವಿಕ್ರಾಂತ್ ರೋಣ' ಬಿಡುಗಡೆಗೆ ಕ್ಷಣಗಣನೆ

'ವಿಕ್ರಾಂತ್ ರೋಣ' ಬಿಡುಗಡೆಗೆ ಕ್ಷಣಗಣನೆ

ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಇದೇ ಜುಲೈ 28ಕ್ಕೆ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಹೀಗಾಗಿ ಈಗಾಗಲೇ ಸಿನಿಮಾದ ಭರ್ಜರಿ ಪ್ರಚಾರ ಆರಂಭ ಆಗಿದ್ದು, 'ವಿಕ್ರಾಂತ್ ರೋಣ' ಈಗ NFT ಪ್ರಪಂಚಕ್ಕೆ ಕಾಲಿಟ್ಟಿದೆ.

More from Filmibeat

English summary
World's First Limited Edition NFT Premiere Membership For Kichcha Sudeep Starrer Vikrant Rona, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X