ಶಿವಣ್ಣನ '666 ಆಪರೇಷನ್ ಡ್ರೀಮ್‌ ಥಿಯೇಟರ್'ನಲ್ಲಿ WWE ಸೂಪರ್ ಸ್ಟಾರ್ ಸುಖಿ; ಕನ್ನಡಕ್ಕೆ ಬಂದು ಏನ್ಮಾಡಿದ್ರು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಮತ್ತೆ ಆಕ್ಟಿವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಮತ್ತೆ ನಟಿಸುವುದಕ್ಕೆ ಶುರು ಮಾಡಿದ್ದಾರೆ. ಸದ್ಯಕ್ಕೀಗ ಶಿವಣ್ಣನ ಎರಡು ಸಿನಿಮಾಗಳ ಮೇಲೆ ಎಲ್ಲರ ಕಣ್ಣಿದೆ. ಒಂದು ಅರ್ಜುನ್ ಜನ್ಯ ನಿರ್ದೇಶಿಸಿದ '45'. ಇನ್ನೊಂದು ಹೇಮಂತ್ ರಾವ್ ನಿರ್ದೇಶಿಸುತ್ತಿರುವ '666 ಆಪರೇಷನ್ ಡ್ರೀಮ್‌ ಥಿಯೇಟರ್'.

ಹೇಮಂತ್ ರಾವ್ ನಿರ್ದೇಶಿಸುತ್ತಿರುವ '666 ಆಪರೇಷನ್ ಡ್ರೀಮ್‌ ಥಿಯೇಟರ್' ಸಿನಿಮಾದಲ್ಲಿ ಶಿವಣ್ಣನ ಜೊತೆ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇವರಿಬ್ಬರ ಕಾಂಬಿನೇಷನ್‌ ಮತ್ತೊಂದು ಮೆಗಾ ಹಿಟ್ ಸಿನಿಮಾ ಕೊಡಬಹುದೆಂಬ ನಿರೀಕ್ಷೆಯಿದೆ.

WWE Superstar Sukhwinder Singh Grewal Kannada debut with Shivarajkumar movie 666 Operation Dream Theater

ಶಿವಣ್ಣ ಹಾಗೂ ಡಾಲಿಗೆ ರೆಟ್ರೋ ಲುಕ್ ಕೊಟ್ಟು ಕೂತೂಹಲ ಕೆರಳಿಸಿದ್ದ ಹೇಮಂತ್ ತಮ್ಮ ತಂಡಕ್ಕೆ ಮತ್ತೊಬ್ಬ ದೈತ್ಯನನ್ನು ಕರೆದುಕೊಂಡು ಬಂದಿದ್ದಾರೆ. WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಅಲಿಯಾಸ್ ಗೈಂಟ್ ಜಂಜೀರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈ ದೈತ್ಯ ಸೆಟ್ಟಿನಲ್ಲಿರುವ ಫೋಟೊಗಳು ಕನ್ನಡ ಚಿತ್ರರಂಗದಲ್ಲಿ ಹಲ್‌ಚಲ್ ಎಬ್ಬಿಸಿವೆ. ಹಾಗಿದ್ದರೆ, ಸುಖ್ವಿಂದರ್ ಸಿಂಗ್ ಗ್ರೆವಾಲ್ ಸಾಧನೆ ಏನು? ಇವರ WWE ಜರ್ನಿ ಬಗ್ಗೆ ತಿಳಿಯುವುದಕ್ಕೆ ಮುಂದೆ ಓದಿ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ '666 ಆಪರೇಷನ್ ಡ್ರೀಮ್‌ ಥಿಯೇಟರ್' ಸಿನಿಮಾಗೆ ಅದ್ಧೂರಿ ಸೆಟ್ ಹಾಕಿ ಶೂಟಿಂಗ್ ನಡೆಸಲಾಗಿತ್ತಿದೆ. ನಿರ್ದೇಶಕ ಹೇಮಂತ್ ರಾವ್ ಈ ಸೆಟ್‌ನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಇದೀಗ '666 ಆಪರೇಷನ್ ಡ್ರೀಮ್ ಥಿಯೇಟರ್' ತಂಡದಿಂದ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯೊಂದು ರಿವೀಲ್ ಆಗಿದೆ. WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಶಾರುಖ್ ಖಾನ್ ನಟಿಸಿದ 'ಜವಾನ್', ಆರ್ಯನ್ ಖಾನ್ ನಿರ್ದೇಶನದ 'ಬ್ಯಾಡ್ಸ್ ಆಫ್ ಬಾಲಿವುಡ್'ನಲ್ಲಿ‌ಸುಖಿ ಗ್ರೆವಾಲ್ ಗಮನ ಸೆಳೆದಿದ್ದು, ಈಗ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

7.2 ಅಡಿ ಎತ್ತರದ ದೈತ್ಯ ಕುಸ್ತಿಪಟು ಸುಖ್ವಿಂದರ್ ಸಿಂಗ್ ಗ್ರೆವಾಲ್ ಪಂಜಾಬ್ ಮೂಲದವರು. ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿರುವ WWEನಲ್ಲಿ ಸುಖಿ ಪಾಲ್ಗೊಂಡಿದ್ದರು. WWEನಲ್ಲಿ ಇವರನ್ನು ಜಂಜೀರ್ ಹೆಸರಿನಲ್ಲಿ ಗುರುತಿಸುತ್ತಾರೆ. 2019ರಲ್ಲಿ ಇವರು WWEಗೆ ಎಂಟ್ರಿ ಕೊಟ್ಟಿದ್ದರು. ಮುಂಬೈಗೆ WWE ಬಂದಿದ್ದ ಸಂದರ್ಭದಲ್ಲಿ ಇವರನ್ನು ಗುರುತಿಸಿ ಅವಕಾಶವನ್ನು ನೀಡಲಾಗಿತ್ತು. ಈ ಮೆಗಾ ಇವೆಂಟ್‌ನಲ್ಲಿ ಭಾಗವಹಿಸುವುದಕ್ಕಾಗಿ WWEನ ಮತ್ತೊಬ್ಬ ಸೂಪರ್‌ಸ್ಟಾರ್ ಗ್ರೇಟ್ ಖಾಲಿಯಿಂದ ತರಬೇತಿಯನ್ನು ಪಡೆದುಕೊಂಡಿದ್ದರು.

WWE Superstar Sukhwinder Singh Grewal Kannada debut with Shivarajkumar movie 666 Operation Dream Theater

WWE ಬಳಿಕ ಸುಖ್ವಿಂದರ್ ಸಿಂಗ್ ಗ್ರೆವಾಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರುಮಾಡಿದ್ದರು. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ '666 ಆಪರೇಷನ್ ಡ್ರೀಮ್‌ ಥಿಯೇಟರ್' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಸಿನಿಮಾಗೆ WWE ಸೂಪರ್‌ಸ್ಟಾರ್ ಅನ್ನು ಕರೆದುಕೊಂಡು ಬಂದಿದ್ದರ ಬಗ್ಗೆ ನಿರ್ದೇಶಕ ಹೇಮಂತ್ ರಾವ್ ಮಾಹಿತಿ ಹಂಚಿಕೊಂಡಿದ್ದಾರೆ. "ನಮಗೆ ಭಯಾನಕವಾಗಿ ಕಾಣುವ ವ್ಯಕ್ತಿತ್ವದ ಪಾತ್ರಧಾರಿಯೊಬ್ಬರು ಬೇಕಿತ್ತು. ದೊಡ್ಡ ಪರದೆಯನ್ನೂ ಚಿಕ್ಕದಾಗಿ ಕಾಣುವಂತೆ ಮಾಡಿದ ವ್ಯಕ್ತಿ. ಸುಖಿ ಪಾತ್ರ ಇಂತಹದ್ದೊಂದು ಇಮೇಜ್‌ಗೆ ಸರಿಹೊಂದುತ್ತದೆ. ನಾನು ಸೆಟ್‌ನಲ್ಲಿ ಭೇಟಿಯಾದ ಅತ್ಯಂತ ಸೌಮ್ಯ ವ್ಯಕ್ತಿಗಳಲ್ಲಿ ಅವರು ಒಬ್ಬರು. ಇದು ಅವರ ದೈತ್ಯ ವ್ಯಕ್ತಿತ್ವಕ್ಕೆ ತದ್ವಿರುದ್ಧವಾದ ಪಾತ್ರ." ಎಂದು ಹೇಮಂತ್ ರಾವ್ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸುಖ್ವಿಂದರ್ ಸಿಂಗ್ ಗ್ರೆವಾಲ್ ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ದಕ್ಷಿಣ ಸಿನಿಮಾ ಇಂಡಸ್ಟ್ರಿ ಬಗ್ಗೆ ನಾನು ಬಹಳಷ್ಟು ಕೇಳಿದ್ದೆ. ಈಗ ಕನ್ನಡ ಚಿತ್ರರಂಗದ ಭಾಗವಾಗಿರುವುದು ಅದ್ಭುತ ಎನಿಸುತ್ತಿದೆ. ಡಾ.ಶಿವರಾಜ್ ಕುಮಾರ್ ಹಾಗೂ ಧನಂಜಯ ಅವರೊಂದಿಗೆ ಕೆಲಸ ಮಾಡುವುದು ಒಂದು ಗೌರವ. ಇಲ್ಲಿನ ಜನರು ತುಂಬಾ ಪ್ರೀತಿಯಿಂದ ಇದ್ದಾರೆ. ನನ್ನ ಅಭಿನಯಕ್ಕೆ ಕನ್ನಡ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಕನ್ನಡದಲ್ಲಿ ಇನ್ನೂ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ."ಎಂದು ಹೇಳಿದ್ದಾರೆ.

ಸುಖ್ವಿಂದ್ ಸಿಂಗ್ ಈ ಸಿನಿಮಾದಲ್ಲಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಈಗಾಗಲೇ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ವೈಶಾಕ್ ಜೆ. ಗೌಡ ಅವರ 'ವೈಶಾಕ್ ಜೆ. ಫಿಲ್ಮ್ಸ್' ಬ್ಯಾನರ್‌ನಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ನಿರ್ಮಿಸಲಾಗುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮಾಡುತ್ತಿದ್ದರೆ, ವಿಶ್ವಾಸ್ ಕಶ್ಯಪ್ ಸೆಟ್ ಹಾಕಿದ್ದಾರೆ.

More from Filmibeat

English summary
WWE Superstar Sukhwinder Singh Grewal Kannada debut with Shivarajkumar movie 666 Operation Dream Theater.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X