ಮೇ ತಿಂಗಳ ಜನಪ್ರಿಯ ನಟ ದರ್ಶನ್: ಸೋಶಿಯಲ್ ಮೀಡಿಯದಲ್ಲಿ ದಾಸ ಬರೆದ ದಾಖಲೆ ಏನು?

ದರ್ಶನ್‌ಗೆ ವಿವಾದಗಳಿಗೇನು ಕಮ್ಮಿಯಿಲ್ಲ. ಇವರೇ ಹೋಗಿ ವಿವಾದದಲ್ಲಿ ಬೀಳುತ್ತಾರೋ? ಇಲ್ಲ ವಿವಾದವೇ ಇವರನ್ನು ಹುಡುಕಿಕೊಂಡು ಬರುತ್ತೋ ಗೊತ್ತಿಲ್ಲ. ಆದರೆ, ಸಿನಿಮಾ ಬಿಟ್ಟರೆ ದರ್ಶನ್ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಸದ್ಯಕ್ಕೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದಡಿ ಜೈಲು ಸೇರಿದ್ದಾರೆ.

ಎರಡನೇ ಬಾರಿ ಜೈಲು ಸೇರಿರುವ ದರ್ಶನ್ ಬಿಡುಗಡೆಗೆ ತೆರೆಮರೆಯಲ್ಲಿ ಶತಾಯಗತಾಯ ಪ್ರಯತ್ನಗಳು ನಡೆಯುತ್ತಿವೆ. ಜುಲೈ 4 ರಂದು ನ್ಯಾಯಾಂಗ ಬಂಧನ ಅವಧಿ ಮುಗಿಯುತ್ತಿರುವ ಬೆನ್ನಲ್ಲೇ ದರ್ಶನ್‌ಗೆ ಜಾಮೀನು ಸಿಗುತ್ತಾ? ಅಂತ ಅವರ ಅಭಿಮಾನಿಗಳು, ಸಿನಿಮಾ ಮಂದಿ ಸೇರಿದಂತೆ ಕುಟುಂಬ ಎದುರು ನೋಡುತ್ತಿದೆ. ಸದ್ಯ ಎಲ್ಲರ ಗಮನ ಜುಲೈ 4 ರ ಮೇಲಿದೆ.

X Internal Data 2024 May month Most Talked About Kannada Actor is Darshan

ಇನ್ನೊಂದು ಕಡೆ ಸಿನಿಮಾ ಮಂದಿಗೆ ದರ್ಶನ್ ಜನಪ್ರಿಯತೆ ಬಗ್ಗೆ ಚಿಂತೆ ಶುರುವಾಗಿದೆ. ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿರುವುದರಿಂದ ಈಗ ಇದ್ದ ಅವರ ಜನಪ್ರಿಯತೆ ಎಲ್ಲಿ ಕಡಿಮೆ ಆಗುತ್ತೋ ಅನ್ನೋ ಆತಂಕ ಎದುರಾಗಿತ್ತು. ಆದರೆ, ಸೋಶಿಯಲ್ ಮೀಡಿಯಾ 'ಎಕ್ಸ್' ಇದಕ್ಕೆ ವಿರುದ್ಧವಾದ ಫಲಿತಾಂಶವನ್ನು ನೀಡಿದೆ. ಮೇ ತಿಂಗಳ ಎಕ್ಸ್ ಫ್ಲಾಟ್‌ಫಾರ್ಮ್‌ನಲ್ಲಿ ಅತೀ ಹೆಚ್ಚು ಟ್ರೆಂಡಿಂಗ್‌ನಲ್ಲಿದ್ದ ಪಟ್ಟಿಯಲ್ಲಿ ದರ್ಶನ್ ಇದ್ದಾರೆ.

ಅಷ್ಟಕ್ಕೂ ಎಕ್ಸ್ ದರ್ಶನ್ ಬಗ್ಗೆ ಬಿಡುಗಡೆ ಮಾಡಿರುವ ಸಂಗತಿ ಏನು? ಅಂದರೆ, ಮೇ ತಿಂಗಳಲ್ಲಿ ಪುರುಷರ ವಿಭಾಗದಲ್ಲಿ ಅವರ 'ಎಕ್ಸ್' ಪ್ಲ್ಯಾಟ್‌ ಫಾರ್ಮ್‌ನಲ್ಲಿ ನೆಟ್ಟಿಗರು ಅತೀ ಬಾರಿ ಚರ್ಚೆ ಮಾಡಿದ್ದಾರೆ. ಹೀಗಾಗಿ ಎಕ್ಸ್‌ ಸಂಸ್ಥೆ ತನ್ನ ಇಂಟರ್‌ನಲ್‌ ಡಾಟಾ 2024ರ ಮೇ ತಿಂಗಳಲ್ಲಿ ಭಾರತದಲ್ಲಿ ಹೆಚ್ಚು ಚರ್ಚೆಯಾಗಿದ್ದು ಕನ್ನಡ ನಟ ದರ್ಶನ್ ಎಂದು ಅನೌನ್ಸ್ ಮಾಡಿದೆ. ಈ ವಿಷಯ ಅವರ ಅಭಿಮಾನಿಗಳಿಗೆ ಸಮಾಧಾನ ತಂದಿದೆ.

ಆದರೆ, ಎಕ್ಸ್‌ ಪ್ಲ್ಯಾಟ್‌ ಫಾರ್ಮ್ ಎಷ್ಟು ಮಂದಿ ದರ್ಶನ್ ಬಗ್ಗೆ ಚರ್ಚೆ ಮಾಡಿದ್ದಾರೆ ಅನ್ನುವ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ. ಇನ್ನು ಹಿಂದಿ ಚಿತ್ರರಂಗದಿಂದ ಸಲ್ಮಾನ್ ಖಾನ್ ಹೆಚ್ಚು ಚರ್ಚೆಯಲ್ಲಿದ್ದಾರೆ ಎಂದು ಹೇಳಿದೆ. ಇನ್ನು ಮೇ ತಿಂಗಳಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಪೊಲೀಸರ ತನಿಖೆ ವೇಳೆ ದರ್ಶನ್ ಮ್ಯಾಟರ್ ಹೆಚ್ಚು ಸುದ್ದಿಯಲ್ಲಿ ಇತ್ತು.

ಎಕ್ಸ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ದರ್ಶನ್ ಬಗ್ಗೆ ಎಂತಹ ಚರ್ಚೆ ನಡೆದಿದೆ. ಪಾಸಿಟಿವ್ ಆಗಿ ಚರ್ಚೆ ಮಾಡಲಾಗಿದೆಯಾ? ಅಥವಾ ನೆಗೆಟಿವ್ ಆಗಿ ಚರ್ಚೆ ಮಾಡಿದ್ದಾರಾ? ಅನ್ನೋದನ್ನುಮುಖ್ಯ ಆಗುತ್ತೆ. ಆದರೆ, ಈ ಬಗ್ಗೆ ವಿಸ್ತಾರವಾಗಿ ವರದಿಯನ್ನು ಕೊಟ್ಟಿಲ್ಲ. ಹಾಗಾಗಿ ಇದನ್ನು ದರ್ಶನ್ ಅವರ ಜನಪ್ರಿಯತೆ ಅಂದುಕೊಳ್ಳಬೇಕಾ? ಅಥವಾ ಡೌನ್ ಫಾಲ್ ಎಂದುಕೊಳ್ಳಬೇಕಾ? ಗೊಂದಲವಿದ್ದರು. ದರ್ಶನ್ ಅಭಿಮಾನಿಗಳು ಇದನ್ನು ಪಾಸಿಟಿವ್ ಆಗಿಯೇ ತೆಗೆದುಕೊಂಡಿದ್ದಾರೆ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದ ಮೇಲೆ ಪ್ರತಿದಿನ ಅಭಿಮಾನಿಗಳು ಬಂದು ಹೋಗುತ್ತಿದ್ದಾರೆ. ದರ್ಶನ್‌ ಬಿಡುಗಡೆಗೆ ರಾಜ್ಯದ ಹಲವೆಡೆ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇತ್ತ ದರ್ಶನ್ ಆಪ್ತರು ಜೈಲಿಗೆ ಬಂದು ಹೋಗುತ್ತಿದ್ದಾರೆ. ಕೆಲವರಿಗೆ ಮಾತಾಡಲು ಅವಕಾಶ ಸಿಗುತ್ತಿದೆ. ಮತ್ತೆ ಕೆಲವರಿಗೆ ಸಿಗುತ್ತಿಲ್ಲ. ಒಟ್ನಲ್ಲಿ ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ದರ್ಶನ್ ಜನಪ್ರಿಯ ನಟನಾಗಿದ್ದಾರೆ. ಇವರೊಂದಿಗೆ ತಮಿಳಿನಲ್ಲಿ ರಜನಿಕಾಂತ್, ತೆಲುಗಿನಲ್ಲಿ ಮಹೇಶ್ ಬಾಬು ಚರ್ಚೆಯಲ್ಲಿದ್ದ ನಟನಾಗಿದ್ದಾರೆ.

More from Filmibeat

English summary
Darshan is most talked about actor in twitter. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X