"ಯಾರ್‍ಯಾರು ದರ್ಶನ್ ಬಗ್ಗೆ ಕಥೆ ಕಟ್ಟಿದ್ದಾರೋ.. ಅದಕ್ಕೆಲ್ಲ ವ್ಯತಿರಿಕ್ತವಾಗಿ ಅದ್ಭುತವಾದ ಮನುಷ್ಯ": ಬಿ ಸುರೇಶ್

ಕನ್ನಡ ಚಿತ್ರರಂಗದಲ್ಲಿ ಬಿ ಸುರೇಶ್ ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಹೆಚ್ಚಾಗಿ ನಿರ್ಮಾಪಕರಾಗಿ ಕಂಡಿದ್ದೇ ಹೆಚ್ಚು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಹಾಗೂ 'ಕ್ರಾಂತಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಬಿ. ಸುರೇಶ್ ನಿರ್ಮಾಣ ಸಂಸ್ಥೆಯಿಂದ ಧಾರಾವಾಹಿಗಳು ಹಾಗೂ ಸಾಕಷ್ಟು ಸಿನಿಮಾಗಳು ಬಂದಿವೆ. ರಂಗಭೂಮಿಯಿಂದ ಬಂದ ಕಲಾವಿದರ ಬಗ್ಗೆ ಪ್ರೀತಿ ಜಾಸ್ತಿ. ಇದೇ ಕಾರಣಕ್ಕೆ ದರ್ಶನ್ ಕಂಡರೆ ಬಲು ಪ್ರೀತಿ. ಇತ್ತೀಚೆಗೆ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Yajamana movie producer B Suresha says that Darshan is nice man

ದರ್ಶನ್ ಸಿನಿಮಾ ಮಾಡುತ್ತಿದ್ದೇನೆ ಅಂದಾಗ ಕೆಲವರು ಹೆದರಿಸಿಬಿಟ್ಟಿದ್ದರು. ಆದರೆ, ಅವರ ಕಾಮೆಂಟ್‌ಗಳಿಗೆ ವ್ಯತಿರಿಕ್ತವಾದ ವ್ಯಕ್ತಿತ್ವ ಅವರದ್ದು. ಯಾರ್‍ಯಾರು ಅವರ ಬಗ್ಗೆ ಕಥೆ ಕಟ್ಟಿದ್ದಾರೋ.. ಅದಕ್ಕೆಲ್ಲ ವ್ಯತಿರಿಕ್ತವಾಗಿ ಅದ್ಭುತವಾದ ಮನುಷ್ಯ." ಎಂದು ಬಿ ಸುರೇಶ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.

"ರಂಗಭೂಮಿಯಿಂದ ಬಂದ ಯಾವುದೇ ವ್ಯಕ್ತಿ ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ. ಹಾಗೇ ದರ್ಶನ್ ಕೂಡ ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ. ನಾವು ಕರೆದ ಸಮಯಕ್ಕೆ ಬರುತ್ತಾರೆ. ತೊಂದರೆ ಕೊಡುವುದಿಲ್ಲ. ಅವರು ಸಿಕ್ಕಾಪಟ್ಟೆ ಕೋ ಆಪರೇಟಿವ್. ನಿರ್ಮಾಪಕರನ್ನು ಹೇಗಾದರೂ ಮಾಡಿ ಉಳಿಸಬೇಕು ಅನ್ನುವ ನಿರಂತರವಾದ ಪ್ರಯತ್ನವನ್ನು ದರ್ಶನ್ ಅವರು ಮಾಡುತ್ತಾರೆ. ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಸ್ಟಾರ್‌ಗಿರಿ ಏನೂ ಇಲ್ಲ." ಎಂದು ಬಿ ಸುರೇಶ್ ಹೇಳಿದ್ದಾರೆ.

ದರ್ಶನ್‌ಗೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾಗ, ಕೆಲವರು ಹೆದರಿಸಿಬಿಟ್ಟಿದ್ದರಂತೆ. ಇಲ್ಲಿಗೆ ನಿನ್ನ ಕಥೆ ಮುಗೀತು ಎಂದು ಹೇಳಿದ್ದರಂತೆ. ಆ ಬಗ್ಗೆನೂ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಬೇರೆಯವರು ಇವರ ಸಿನಿಮಾ ಮಾಡುತ್ತೀನಿ ಅಂದಾಗ ಹೆದರಿಸಿಬಿಟ್ಟಿದ್ದರು. ಮುಳುಗಿ ಹೋಯ್ತು, ನಿನ್ನ ಮನೆ ಮಠವನ್ನೆಲ್ಲ ಮಾರಿಕೊಳ್ಳುತ್ತೀಯ ಅಂತ ಹೇಳಿದವರು ಇದ್ದರು. ಆದರೆ, ಅದಕ್ಕೆಲ್ಲ ವ್ಯತಿರಿಕ್ತವಾಗಿದ್ದಾರೆ. ಪಕ್ಕದಲ್ಲಿ ಇದ್ದವರಿಗೆ ಏನೋ ಆಯ್ತು ಅಂದರೆ, ಅವರೇ ಎತ್ತಿಕೊಂಡು ಓಡುತ್ತಾರೆ. ತಾವೇ ಕೈ ಹಿಡಿದು ಎತ್ತುತ್ತಾರೆ." ಎಂದಿದ್ದಾರೆ.

Yajamana movie producer B Suresha says that Darshan is nice man

ದರ್ಶನ್‌ಗಾಗಿ ಈಗಾಗಲೇ ಎರಡು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಮೊದಲನೇ ಸಿನಿಮಾ 'ಯಜಮಾನ' ಆಗಿದ್ದರೆ, ಎರಡನೇ ಸಿನಿಮಾ 'ಕ್ರಾಂತಿ'. ಈ ಎರಡೂ ಸಿನಿಮಾಗಳಿಂದ ಹಣ ಬಂದಿದೆ ಎಂದು ಹೇಳಿದ್ದಾರೆ. ಹಾಗೇ ಮೂರನೇ ಸಿನಿಮಾದ ನಿರ್ಮಾಣಕ್ಕೂ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

"ಮೊದಲನೇ ಸಿನಿಮಾ ಯಜಮಾನದಲ್ಲೂ ಹಾಕಿದ ಹಣಕ್ಕಿಂತ ಹೆಚ್ಚಿಗೆ ಹಣವನ್ನು ಸಂಪಾದನೆ ಮಾಡಿದ್ವಿ. ಕ್ರಾಂತಿಯಲ್ಲೂ ಕೂಡ ಲಾಭವನ್ನೇ ಮಾಡಿದ್ವಿ. ಇದು ದರ್ಶನ್ ಅವರಿಂದ ಮಾತ್ರ ಸಾಧ್ಯ." ಎಂದು ಬಿ ಸುರೇಶ್ ಹೇಳಿಕೊಂಡಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ದರ್ಶನ್ ಬಗ್ಗೆ ನೆಗೆಟಿವ್ ಆಗಿ ಮಾತಾಡುವವರ ಬಗ್ಗೆನೂ ದರ್ಶನ್ ಕಿಡಿಕಾರಿದ್ದಾರೆ. "ಯಾರ್‍ಯಾರು ಅವರ ಬಗ್ಗೆ ಕಥೆ ಕಟ್ಟಿದ್ದಾರೋ.. ಅದಕ್ಕೆಲ್ಲ ವ್ಯತಿರಿಕ್ತವಾಗಿ ಅದ್ಭುತವಾದ ಮನುಷ್ಯ. ಯಶಸ್ಸು ಇರುವ ವ್ಯಕ್ತಿಗೆ ಗಾಳಿ ಸುದ್ದಿಗೂ ಹಾಗೇ ಇರುತ್ತವೆ. ಯಶಸ್ಸು ಇರುವ ವ್ಯಕ್ತಿಗೆ ಗಾಳಿ ಸುದ್ದಿಗಳೂ ಅಷ್ಟೇ ಇರುತ್ತವೆ." ಎಂದಿದ್ದಾರೆ.

More from Filmibeat

English summary
B Suresh about Challenging star Darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X