ದರ್ಶನ್ ಮುಂದೆ ಶರಣಾದ ಕಣ್ಸೆನ್ನೆಯ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್

By Bharath Kumar

ಕಳೆದ ಒಂದು ವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಈ ಹುಡುಗಿಯದ್ದೇ ಅಬ್ಬರ. ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್, ಇನ್ಸ್ಟಾಗ್ರ್ಯಾಮ್ ಎಲ್ಲೆಲ್ಲಿಯೂ ಈಕೆಯ ಕಣ್ಣಿನದ್ದೇ ಸದ್ದು. ನಾವ್ ಯಾರ್ ಬಗ್ಗೆ ಹೇಳ್ತಿದ್ದೀವಿ ಅಂತ ನಿಮಗೆ ಈಗಾಗಲೇ ಗೊತ್ತಿರಬಹುದು. ಪ್ರಿಯಾ ಪ್ರಕಾಶ್ ವಾರಿಯರ್.

ಒಂದೇ ದಿನದಲ್ಲಿ.. ಇಡೀ ಭಾರತದಲ್ಲಿ ಹೊಸ ಸಂಚಲನ ಹುಟ್ಟಿಸಿದಾಕೆ ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಣೋಟದಲ್ಲೇ ಕೋಟ್ಯಾಂತರ ಹುಡುಗರ ದಿಲ್ ಕದ್ದ ಈ ಚೋರಿ ಇಂದು ನ್ಯಾಷನಲ್ ಕ್ರಶ್ ಅಂತಲೇ ಜನಪ್ರಿಯ.

ಕಣ್ ಹೊಡೆದು ಎಲ್ಲರ ಕಣ್ಮನ ಸೆಳೆದ ಈ ಮಾಯಾಂಗನೆ ಅಭಿನಯದ ಚೊಚ್ಚಲ ಚಿತ್ರದ ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಕೆ ಬಗ್ಗೆ ಯಾವುದೇ ವಿಡಿಯೋ ಬಂದರೂ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಆಗ್ತಿದೆ. ಅಷ್ಟರ ಮಟ್ಟಿಗೆ ಮೋಡಿ ಮಾಡಿದ್ದಳು. ಆದ್ರೀಗ, ಪ್ರಿಯಾ ಪ್ರಕಾಶ್ ವಾರಿಯರ್ ದರ್ಶನ್ ಮುಂದೆ ಶರಾಣಗಿದ್ದಾರೆ. ಮುಂದೆ ಓದಿ......

No 1 ಸ್ಥಾನಕ್ಕೆ ಬಂದ ದರ್ಶನ್

No 1 ಸ್ಥಾನಕ್ಕೆ ಬಂದ ದರ್ಶನ್

ಕಳೆದ ಮೂರ್ನಾಲ್ಕು ದಿನಗಳಿಂದ ಯೂಟ್ಯೂಬ್ ನಲ್ಲಿ ಮೊದಲ ಸ್ಥಾನದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ದರ್ಶನ್ ಮುಂದೆ ಶರಣಾಗಿದ್ದಾರೆ. ದರ್ಶನ್ ಅಭಿನಯದ ಹೊಸ ಚಿತ್ರದ ಟೀಸರ್ ಈಗ ಮೊದಲ ಸ್ಥಾನದಲ್ಲಿದೆ.

ಯೂಟ್ಯೂಬ್ ನಲ್ಲಿ 'ಯಜಮಾನ'ನ ಹವಾ

ಯೂಟ್ಯೂಬ್ ನಲ್ಲಿ 'ಯಜಮಾನ'ನ ಹವಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 51ನೇ ಸಿನಿಮಾ 'ಯಜಮಾನ' ಚಿತ್ರದ ಟೈಟಲ್ ಟೀಸರ್ ನಿನ್ನೆ ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ಈ ಟೀಸರ್ ಈಗ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿದೆ.

5ನೇ ಸ್ಥಾನಕ್ಕೆ ಜಿಗಿದ ಪ್ರಿಯಾ ಟೀಸರ್

5ನೇ ಸ್ಥಾನಕ್ಕೆ ಜಿಗಿದ ಪ್ರಿಯಾ ಟೀಸರ್

ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಚೊಚ್ಚಲ ಮಲಯಾಳಂ ಸಿನಿಮಾ 'ಒರು ಅದಾರ್ ಲವ್' ಟೀಸರ್ ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆಯಾಗಿತ್ತು. ಮೂರ್ನಾಲ್ಕು ದಿನ ನಂಬರ್ ವನ್ ಟ್ರೆಂಡಿಂಗ್ ನಲ್ಲಿತ್ತು. ಇದೀಗ, 'ಯಜಮಾನ' ಟೀಸರ್ ಅಬ್ಬರ ಮಧ್ಯೆ 5ನೇ ಸ್ಥಾನಕ್ಕೆ ಜಿಗಿದಿದೆ.

ನ್ಯಾಷನಲ್ ಕ್ರಶ್' ಆಗಿರುವ ಪ್ರಿಯಾ ಆಡಿರುವ ಮಾತು ಮಿಸ್ ಮಾಡದೆ ಕೇಳಿ

2 ಲಕ್ಷ ವೀಕ್ಷಕರು

2 ಲಕ್ಷ ವೀಕ್ಷಕರು

'ಯಜಮಾನ' ಚಿತ್ರದ ಟೈಟಲ್ ಟೀಸರ್ ಗೆ ಡಿ ಬಾಸ್ ಭಕ್ತರು ಫಿದಾ ಆಗಿದ್ದು, ಸುಮಾರು 2 ಲಕ್ಷ ವೀಕ್ಷಕರನ್ನ ಈ ಟೀಸರ್ ಹೊಂದಿದೆ. ಪಿ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಧನಂಜಯ್, ರವಿಶಂಕರ್, ಠಾಕೂರ್ ಅನೂಪ್ ಸಿಂಗ್ ಮೂರು ಜನ ಖಳನಾಯಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
challenging star darshan starrer Yajamana movie title teaser no 1 trending in youtube. the movie directed by p kumar and produced by shilaja nag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X