For Quick Alerts
  ALLOW NOTIFICATIONS  
  For Daily Alerts

  'ಶಂಕ್ರಣ್ಣನ ಮಂಡೆ ಬಿಸಿ ಮಾಡ್ಕೊಬೇಡಿ': ಯಕ್ಷಗಾನದಲ್ಲೂ ಕಾಫಿ ನಾಡು ಚಂದು ಹವಾ:

  |

  ಒಂದ್ಕಡೆ ಬಿಗ್ ಬಾಸ್‌.. ಇನ್ನೊಂದ್ಕಡೆ ಕಾಫಿ ನಾಡು ಚಂದು.. ಇವರಿಬ್ಬರೂ ಕನ್ನಡಿಗರಿಗೆ ಮಸ್ತ್ ಮನರಂಜನೆ ಕೊಡ್ತಿರೋದಂತೂ ನಿಜ. ಅದರಲ್ಲೂ ಕಾಫಿ ನಾಡು ಚಂದು ಅದ್ಯಾವ ಮಟ್ಟಿಗೆ ಫೇಮಸ್ ಆಗಿದ್ದಾರೆ ಅಂದ್ರೆ, ಚಿಕ್ಕ ಹುಡುಗರಿಂದ ಹಿಡಿದು, ದೊಡ್ಡೋರು ವರೆಗೂ ಚಂದು ಸ್ಟೈಲ್‌ನಲ್ಲೇ ಹಾಡೋಕೆ ಶುರು ಮಾಡಿದ್ದಾರೆ.

  ಕಾಫಿನಾಡು ಚಂದು ಈಗ ಸೋಶಿಯಲ್ ಮೀಡಿಯಾ ಸ್ಟಾರ್. ಶಿವಣ್ಣ ಹಾಗೂ ಪುನೀತ್ ಅಭಿಮಾನಿ ಅಂತಲೇ ತನ್ನದೇ ಸ್ಟೈಲ್‌ನಲ್ಲಿ ಹಾಡೋ ಚಂದು ಬಹುತೇಕ ಕನ್ನಡಿಗರಿಗೆ ಚಿರಪರಿಚಿತ. ಹಾಸ್ಯಕ್ಕಾದರೂ ಚಂದು ಅನುಕರಿಸಿ ಹಾಡುವ ಮಂದಿಗೇನು ಕಮ್ಮಿಯಿಲ್ಲ. ಈಗ ಚಂದು ಪ್ರಭಾವ ಯಕ್ಷಗಾನದವರೆಗೂ ಕಾಲಿಟ್ಟಿದೆ.

  ತುಳು ಯಕ್ಷಗಾನದಲ್ಲಿ ಚಂದು ಸಾಂಗ್

  ಇನ್‌ಸ್ಟಾಗ್ರಾಂನಲ್ಲಿ ಕಾಫಿ ನಾಡು ಚಂದು ಹಾಡಿಗೆ ಬಾರೀ ಬೇಡಿಕೆಯಿದೆ. ಇತ್ತೀಚೆಗೆ ಸೆಲೆಬ್ರೆಟಿಗಳಿಗೆ ವಿಶ್ ಮಾಡಿ ಕಾಫಿ ನಾಡು ಚಂದು ಫೇಮಸ್ ಆಗಿದ್ದರು. ಅಮೃತಾ ಅಯ್ಯಂಗಾರ್, ಮಾಜಿ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಬರ್ತ್‌ಡೇ ವಿಶ್ ಮಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ವೈರಲ್ ಆಗಿತ್ತು.

  ಈಗ ತುಳು ಯಕ್ಷಗಾನದಲ್ಲಿ ಕಾಫಿ ನಾಡು ಚಂದು ಶೈಲಿಯಲ್ಲಿ ಚುಟುಕಾದ ಹಾಡನ್ನು ಸನ್ನಿವೇಶಕ್ಕೆ ತಕ್ಕಂತ ಪ್ರಸ್ತುತ ಪಡಿಸಲಾಗಿತ್ತು. ಇದೇ ಸನ್ನಿವೇಶ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಫೇಮಸ್ ಆಗುತ್ತಿದೆ.

  Yakshagana Artist Sung A Song In Coffee Nadu Chandu Style Video Goes Viral

  'ಶಂಕ್ರಣ್ಣನ ಮಂಡೆ ಬಿಸಿ ಮಾಡ್ಕೊಬೇಡಿ'

  ಸನ್ನಿವೇಶಕ್ಕೆ ತಕ್ಕಂತೆ ಡೈಲಾಗ್ ಬಿಡೋದು ಯಕ್ಷಗಾನದಲ್ಲಿ ಕಾಮನ್. ಅದಕ್ಕೆ ಯಕ್ಷಗಾನ ನೋಡುಗರಿಗೆ ಸಖತ್ ಕಿಕ್ ಕೊಡುತ್ತೆ. ಈ ಬಾರಿ ಕೂಡ ತುಳು ಯಕ್ಷಗಾನದಲ್ಲಿ ಕಲಾವಿದರೊಬ್ಬರು ಜೋಷ್‌ನಲ್ಲಿ ಕಾಫಿ ನಾಡು ಚಂದು ಶೈಲಿಯಲ್ಲಿ ಸಾಂಗ್ ಹಾಡಿದ್ದಾರೆ. "ಶಂಕ್ರಣ್ಣ.. ಶಂಕ್ರಣ್ಣ.. ಬೆಚ್ಚ ಮಲ್ಪಡೆ.." ಅಂದರೆ, ಕನ್ನಡದಲ್ಲಿ "ಶಂಕ್ರಣ್ಣ ಶಂಕ್ರಣ್ಣ ಮಂಡೆ ಬಿಸಿ ಮಾಡ್ಕೊಬೇಡಿ" ಅಂತ ಅರ್ಥ. ಹೀಗೆ ಹೇಳುತ್ತಿದ್ದಂತೆ ನೆರೆದಿದ್ದವರ ಮುಖದಲ್ಲಿ ಮಂದಹಾಸ ಮೂಡಿದೆ.

  ಕಾಫಿ ನಾಡು ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಕನ್ನಡ ಓಟಿಟಿಗೆ ಹೋಗುತ್ತಾರೆ ಅಂತ ಗುಲ್ಲೆದ್ದಿತ್ತು. ಆದರೆ, ಬಿಗ್ ಬಾಸ್ ಓಟಿಟಿಯಲ್ಲಿ ಮಿಸ್ ಆಗಿದ್ದರು. ದಿನದಿಂದ ದಿನಕ್ಕೆ ಕಾಫಿ ನಾಡು ಚಂದು ಫೇಮಸ್ ಆಗ್ತಿರೋದು ನೋಡಿದ್ರೆ, ಮುಂದಿನ ಬಿಗ್ ಬಾಸ್‌ಗೆ ಎಂಟ್ರಿ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಒಟ್ನಲ್ಲಿ ಎಲ್ಲಾ ಕಾಫಿ ನಾಡು ಚಂದು ಗಾಳಿನೇ ಬೀಸುತ್ತಿದೆ.

  English summary
  Yakshagana Artist Sung A Song In Coffee Nadu Chandu Style Video Goes Viral

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X