ರಾಕಿ ಭಾಯ್ 19ನೇ ಸಿನಿಮಾದ ಪೋಸ್ಟರ್ ಲೀಕ್: ಮಾಡಿದ್ಯಾರು ಅನ್ನೋದೇ ಟ್ವಿಸ್ಟ್!

'ಕೆಜಿಎಫ್ ಚಾಪ್ಟರ್ 2' ರಿಲೀಸ್ ಆದಲ್ಲಿಂದ ರಾಕಿ ಭಾಯ್ ಹವಾ ಹೇಗಿದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಯಶ್ ಮುಂದಿನ ಸಿನಿಮಾ ಬಗ್ಗೆ ಕನ್ನಡಿಗರಷ್ಟೇ ಅಲ್ಲ. ಇಡೀ ಭಾರತವೇ ಎದುರು ನೋಡುತ್ತಿದೆ.

ಅದ್ಯಾಕೋ ರಾಕಿಂಗ್ ಸ್ಟಾರ್ ಯಶ್ ಮಾತ್ರ ಮುಂದಿನ ಸಿನಿಮಾ ಬಗ್ಗೆ ಸುಳಿವು ನೀಡುತ್ತಲೇ ಇಲ್ಲ. ಇನ್ನೇನು 'ಕೆಜಿಎಫ್ ಚಾಪ್ಟರ್ 2' ಬಳಿಕ ಮಫ್ತಿ ನಿರ್ದೇಶಕ ನರ್ತನ್ ಸಿನಿಮಾದಲ್ಲಿ ನಟಿಸುತ್ತಾರೆ ಅಂತ ಗುಲ್ಲೆದ್ದಿತ್ತು. ಆದರೆ, ಆ ಸಿನಿಮಾವನ್ನೂ ಪೋಸ್ಟ್‌ಪೋನ್ ಮಾಡಿದ್ದಾರೆ. ಹಾಗಿದ್ದರೆ ಮುಂದೇನು? ಯಾರ ಜೊತೆ ಸಿನಿಮಾ ಮಾಡುತ್ತಾರೆ? ಅನ್ನೋ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗಬೇಕಿದೆ. ಅಷ್ಟರಲ್ಲೇ ಒಂದು ಪೋಸ್ಟರ್ ವೈರಲ್ ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ರಾಕಿ ಭಾಯ್ 19ನೇ ಸಿನಿಮಾದ ಪೋಸ್ಟರ್ ವೈರಲ್ ಆಗುತ್ತಿದೆ. ಇಷ್ಟು ದಿನ ಕಾದು ಕೂತಿದ್ದ ಯಶ್ ಅಭಿಮಾನಿಗಳು ಕೊನೆಗೂ ಖುಷ್ ಆಗಿದ್ದಾರೆ. ಆದರೆ, ವೈರಲ್ ಆಗುತ್ತಿರೋ ಈ ಪೋಸ್ಟರ್ ಹಿಂದೊಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ಅದೇನು ಅಂತ ನೋಡಿ.

ಯಶ್ 19ನೇ ಸಿನಿಮಾ ಪೋಸ್ಟರ್ ಹೇಗಿದೆ?

ಯಶ್ 19ನೇ ಸಿನಿಮಾ ಪೋಸ್ಟರ್ ಹೇಗಿದೆ?

'ಕೆಜಿಎಫ್ ಚಾಪ್ಟರ್ 2' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿರೋ ಯಶ್ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಸಹಜ. ಇತ್ತ ಯಶ್ ಕೂಡ ಜಾಗರೂಕತೆಯಿಂದ ಸಿನಿಮಾ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆನೇ ಅಭಿಮಾನಿಗಳೇ ಯಶ್ 19ನೇ ಸಿನಿಮಾದ ಪೋಸ್ಟರ್ ರಚಿಸಿ, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಪೋಸ್ಟರ್‌ನಲ್ಲಿ ಯಶ್ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಶ್ ರಗಡ್ ಲುಕ್ ಫ್ಯಾನ್ಸ್‌ಗೆ ಕಿಕ್ ಮೇಲೆ ಕಿಕ್ ಕೊಡುತ್ತಿದೆ.

ಗಡ್ಡ ಬಿಟ್ಟ ಲುಕ್ ಸೂಪರ್

ಗಡ್ಡ ಬಿಟ್ಟ ಲುಕ್ ಸೂಪರ್

'ಕೆಜಿಎಫ್ ಚಾಪ್ಟರ್ 2' ಸಿನಿಮಾ ರಿಲೀಸ್ ಆಗಿ, ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದರೂ ಯಶ್ ಇನ್ನೂ ಗಡ್ಡ ತೆಗೆದಿಲ್ಲ. ಎಲ್ಲರಿಗೂ ಯಶ್ ಗಡ್ಡದ ಬಗ್ಗೆನೇ ಕುತೂಹಲ ಹೆಚ್ಚಾಗಿದೆ. ಫ್ಯಾನ್ ಮೇಡ್ ಪೋಸ್ಟರ್‌ನಲ್ಲಿಯೂ ಯಶ್ ಗಡ್ಡನೇ ಹೈಲೈಟ್. ಇನ್ನು ಉದ್ದ ಕೂದಲು ಬಿಟ್ಟು, ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್‌ ಕಂಡು ಯಶ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದು, " ಬಾಸ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ" ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕೇಶ ವಿನ್ಯಾಸದ ಬಗ್ಗೆ ಕುತೂಹಲ

ಕೇಶ ವಿನ್ಯಾಸದ ಬಗ್ಗೆ ಕುತೂಹಲ

ಇತ್ತೀಚೆಗೆಸ ರಾಕಿಂಗ್ ಸ್ಟಾರ್ ಯಶ್ ಮೈಸೂರಿಗೆ ತೆರಳಿದ್ದರು. ಮಹಾರಾಜ ಕಾಲೇಜಿನಲ್ಲಿ ಯುವಜನ ಮಹೋತ್ಸವದಲ್ಲಿ ಭಾಗವಹಿಸಿದ್ದ ಯಶ್ ಮುಂದಿನ ಸಿನಿಮಾದ ಬಗ್ಗೆ ಸಣ್ಣದೊಂದು ಸುಳಿವು ನೀಡಿದ್ದರು. ಮುಂದಿನ ಸಿನಿಮಾದಲ್ಲಿ ಯಶ್ ಕೇಶ ವಿನ್ಯಾಸ ಹೇಗಿರುತ್ತೆ ಅನ್ನೋದಕ್ಕೆ ಮತ್ತಷ್ಟು ಕುತೂಹಲ ಹೆಚ್ಚಾಗಿತ್ತು. ಮೈಸೂರಿನಲ್ಲಿ ಯಶ್ "ಹೊಸ ಕೇಶ ವಿನ್ಯಾಸದ ಬಗ್ಗೆ ಕುತೂಹಲವಿರಲಿ" ಎಂದು ಹೇಳಿದ್ದರು. ಈ ಪೋಸ್ಟರ್ ನೇರವಾಗಿ ಯಶ್ ಅಂದು ಕೊಟ್ಟ ಹೇಳಿಕೆಗೆ ಸಿಂಕ್ ಆಗುತ್ತಿದೆ.

ಯಶ್ 19ನೇ ಸಿನಿಮಾ ಕಥೆಯೇನು?

ಯಶ್ 19ನೇ ಸಿನಿಮಾ ಕಥೆಯೇನು?

ರಾಕಿ ಭಾಯ್ ಮುಂದಿನ ಸಿನಿಮಾ ಬಗ್ಗೆ ಸಹಜವಾಗಿಯೇ ಕ್ಯೂರಿಯಾಸಿಟಿ ಇದೆ. 19ನೇ ಸಿನಿಮಾ ಆದಷ್ಟು ಬೇಗ ಸೆಟ್ಟೇರಬೇಕು ಅನ್ನೋ ಒತ್ತಡನೂ ಇದೆ. ಆದರೆ, ರಾಕಿ ಭಾಯ್ ಮಾತ್ರ ಸರಿಯಾದ ಸಮಯಕ್ಕೆ ಸಿನಿಮಾ ಅನೌನ್ಸ್ ಮಾಡೋಕೆ ಕಾದು ಕೂತಂತೆ ಇದೆ. ಸದ್ಯ ಯಶ್ ಹೊಸ ಸಿನಿಮಾದ ಬಗ್ಗೆ ಚಿಕ್ಕದೊಂದು ಸುಳಿವೂ ಕೂಡ ಇಲ್ಲ. ಆದರೆ, ನಿರ್ದೇಶಕ ಶಂಕರ್‌ಗೆ ಡೇಟ್ ಕೊಟ್ಟಿದ್ದಾರೆ ಅನ್ನೋ ಗಾಳಿಸುದ್ದಿಯಿದೆ. ಆದರೆ ಇಬ್ಬರೂ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಕೊಟ್ಟಿಲ್ಲ.

More from Filmibeat

English summary
Yash 19th Movie: After KGF Chapter 2 New Movie Fan Made Poster Goes Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X