Exclusive: 'ಟಾಕ್ಸಿಕ್' ಫಸ್ಟ್ ಲುಕ್ ಟೀಸರ್‌ಗೆ ಯಶ್ ಮಾಸ್ಟರ್ ಪ್ಲ್ಯಾನ್, ಕೆಲವೇ ದಿನಗಳಲ್ಲಿ ರಿಲೀಸ್!
ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ಕೊನೆಗೂ ಅನೌನ್ಸ್ ಆಗಿದೆ. ಸಿನಿಮಾದ ಟೈಟಲ್ 'ಟಾಕ್ಸಿಕ್' (Toxic) ಅಂತ ಹೇಳಿ ಫ್ಯಾನ್ಸ್ ಕಳೆದೇ ಹೋಗಿದ್ದಾರೆ. ಸಿನಿಮಾ, ಟೈಟಲ್ ಏನೋ ಅನೌನ್ಸ್ ಆಯ್ತು. ಆದರೆ, ಯಶ್ ಲುಕ್ ಹೇಗಿರುತ್ತೆ? ಈ ಸಿನಿಮಾದಲ್ಲಿ ಹೇಗೆ ಕಾಣಿಸಬಹುದು ಅನ್ನೋದು ಚಿಕ್ಕ ಸುಳಿವನ್ನೂ ಬಿಟ್ಟಿಕೊಟ್ಟಿಲ್ಲ.
ಸುಮಾರು 599 ದಿನಗಳ ಬಳಿಕ ಯಶ್ ಸಿನಿಮಾ ಬಗ್ಗೆ ಸಿಕ್ಕ ಅಪ್‌ಡೇಟ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದೇನೋ ನಿಜ. ಆದರೆ, ಯಶ್ ಲುಕ್ ಕೂಡ ರಿವೀಲ್ ಆಗಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ ಕೂಡ ಆಗಿತ್ತು. 'ಟಾಕ್ಸಿಕ್' ಟೈಟಲ್ ಅನೌನ್ಸ್ ಮಾಡಿ, ಅಲ್ಲಿಗೆ ಯಶ್ ಸುಮ್ಮನಾಗಿಲ್ಲ. ತಮ್ಮ ಲುಕ್ ರಿವೀಲ್ ಮಾಡುವುದಕ್ಕಂತಾನೇ ಮೊದಲ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು.

ಯಶ್ ಸಂಪೂರ್ಣ ಪ್ಲ್ಯಾನ್ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. 'ಟಾಕ್ಸಿಕ್' ಟೈಟಲ್ ಅನೌನ್ಸ್‌ಮೆಂಟ್ ಅನ್ನೋದು ಕೇವಲ ಆರಂಭ ಅಷ್ಟೇ. ಅಭಿಮಾನಿಗಳಿಗೆ ಶೀಘ್ರದಲ್ಲಿಯೇ ದೊಡ್ಡ ಸರ್ಪ್ರೈಸ್ ಸಿಗಲಿದೆ. ಅದುವೇ 'ಟಾಕ್ಸಿಕ್' ಫಸ್ಟ್ ಲುಕ್ ಟೀಸರ್. ಇದಕ್ಕಾಗಿ ತೆರೆ ಮರೆಯಲ್ಲಿ ಕಸರತ್ತು ನಡೆಯುತ್ತಿದೆ.
'ಟಾಕ್ಸಿಕ್' ಟೈಟಲ್ ಅನೌನ್ಸ್‌ಮೆಂಟ್ ಮಾಡುವುದಕ್ಕೂ ಮುನ್ನವೇ ಯಶ್ ಈ ಸಿನಿಮಾದ ಶೂಟಿಂಗ್ ಶುರು ಮಾಡಿದ್ದಾರೆ. ನವೆಂಬರ್ ತಿಂಗಳಿಂದಲೇ ಲಂಡನ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ ಅನ್ನೋದು ಬಲ್ಲ ಮೂಲಗಳೇ ಮಾಹಿತಿ ನೀಡಿದ್ವವು. ಇದು ಯಶ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಅಸಲಿಗೆ ಇದು ಸಿನಿಮಾಗಾಗಿ ಮಾಡುತ್ತಿರುವ ಶೂಟಿಂಗ್ ಅಲ್ಲವೇ ಅಲ್ಲ ಅನ್ನೋದು ಸದ್ಯಕ್ಕೆ ಸಿಕ್ಕಿರೋ ಮಾಹಿತಿ.

ಯಶ್ ತಮ್ಮ ಅಭಿಮಾನಿಗಳಿಗಾಗಿ ಟೀಸರ್ ತೋರಿಸುವುದಕ್ಕಂತಲೇ ಪ್ರತ್ಯೇಕವಾಗಿ ಶೂಟಿಂಗ್ ಮಾಡುತ್ತಿದ್ದಾರೆ. ಇದು ಸಿನಿಮಾಗಾಗಿ ಮಾಡಿದ ಶೂಟಿಂಗ್ ಅಲ್ಲ. ಜನವರಿ 8ರಂದು ಯಶ್ 38ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅಂದು ಫ್ಯಾನ್ಸ್‌ಗೆ 'ಟಾಕ್ಸಿಕ್' ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿಯೇ ಮಾಹಿತಿ ನೀಡಬೇಕಿದೆ.
ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದೇ ಸಂದರ್ಭದಲ್ಲಿ ಟೆಕ್ನಿಕಲ್ ಟೀಮ್ ಅನ್ನು ರಿವೀಲ್ ಮಾಡುವ ಎಲ್ಲಾ ಸಾಧ್ಯತೆಗಳು ಕೂಡ ಇದೆ. ಹೀಗಾಗಿ ಯಶ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಟೀಸರ್ ಬರೋದು ಬಹುತೇಕ ಕನ್ಫರ್ಮ್ಸ್ ಅನ್ನೋದನ್ನು ಆಪ್ತ ಮೂಲಗಳು ಹೇಳಿವೆ. ಹೀಗಾಗಿ ಇನ್ನು ಒಂದು ತಿಂಗಳಲ್ಲಿ 'ಟಾಕ್ಸಿಕ್' ಟೀಸರ್ ಯಾವ ಮಟ್ಟಿಗೆ ಸದ್ದು ಮಾಡಬಹುದು? ಅನ್ನೋದನ್ನು ಈಗಿಂದಲೇ ಲೆಕ್ಕ ಹಾಕಬಹುದು.
ಯಶ್ ಬರ್ತ್‌ಡೇ ಬಳಿಕ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಆರಂಭ ಆಗಲಿದೆ. ಸುಮಾರು 170 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಅಲ್ಲದೆ ಈ ಸಿನಿಮಾ ನಿರ್ಮಾಪಕರಲ್ಲಿ ಯಶ್ ಕೂಡ ಒಬ್ಬರಾಗಿರುವುದರಿಂದ 'ಟಾಕ್ಸಿಕ್' ಹೆಸರಿಗೆ ತಕ್ಕಂತೆ ಸಿನಿಪ್ರೇಮಿಗಳಿಗೆ ಕಿಕ್ ಕೊಡುವುದು ಗ್ಯಾರಂಟಿ.


Click it and Unblock the Notifications











