Yash Birthday:ಮಧ್ಯರಾತ್ರಿ ಯಶ್ 'ಟಾಕ್ಸಿಕ್' ಬರ್ತ್‌ಡೇ; ಗೋವಾ ಬೀಚ್‌ನಲ್ಲಿ ಕೇಕ್ ಕತ್ತರಿಸಿ ಸಂಭ್ರಮ
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮ ಮಧ್ಯರಾತ್ರಿಯಿಂದಲೇ ಶುರುವಾಗಿದೆ. 39ನೇ ಹುಟ್ಟುಹಬ್ಬವನ್ನು ಯಶ್ ಆಚರಿಸಿಕೊಂಡಿದ್ದು, ಗೋವಾದ ಬೀಚ್‌ನಲ್ಲಿ ಮಧ್ಯರಾತ್ರಿ ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಕಿ ಭಾಯ್ ಬರ್ತ್‌ಡೇ ಸಂಭ್ರಮದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ಈ ಮೊದಲೇ ಹುಟ್ಟುಹಬ್ಬದಂದು ಯಶ್ ಊರಿನಲ್ಲಿ ಇರುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. ಸಿನಿಮಾ ಕೆಲಸದ ಹಿನ್ನೆಲೆಯಲ್ಲಿ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೆಷನ್ ಮಾಡಿಕೊಳ್ಳುವುದಿಲ್ಲ ಎಂದೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬ ಹಾಗೂ ಆಪ್ತರೊಂದಿಗೆ ಬರ್ತ್‌ಡೇ ಸೆಲೆಬ್ರೆಷನ್ ಮಾಡಿಕೊಂಡಿದ್ದಾರೆ.

ಯಶ್ ಹುಟ್ಟುಹಬ್ಬದಂದು ತಮ್ಮ ಅಭಿಮಾನಿಗಳಿಗೆ 'ಟಾಕ್ಸಿಕ್' ಸರ್ಪ್ರೈಸ್ ಕೊಡಲಿದ್ದು, ಅಭಿಮಾನಿಗಳು ಅದನ್ನು ಕಣ್ತುಂಬಿ ಕೊಳ್ಳುವುದಕ್ಕೆ ಎದುರು ನೋಡುತ್ತಿದ್ದಾರೆ. ಇಂದು (ಜನವರಿ 8) ಬೆಳಗ್ಗೆ 10.25 ನಿಮಿಷಕ್ಕೆ ಯಶ್ ನಟಿಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಫಸ್ಟ್ ಲುಕ್ ಅಥವಾ ಟೀಸರ್ ರಿಲೀಸ್ ಆಗುವ ಸಾಧ್ಯತೆಯಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಅದೇನು ಅನ್ನೋದು ರಿವೀಲ್ ಆಗಿಲಿದೆ.
ಇಂದು (ಜನವರಿ 8) ಇಂದು ಯಶ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಒಂದ್ಕಡೆ ರಾಕಿ ಭಾಯ್ ಹುಟ್ಟುಹಬ್ಬದ ಸಂಭ್ರಮ ಆಗಿದ್ದರೆ, ಇನ್ನೊಂದು ಕಡೆ ಕಾತುರದಿಂದ ಕಾಯುತ್ತಿರುವ 'ಟಾಕ್ಸಿಕ್' ಸಿನಿಮಾದ ಅಪ್‌ಡೇಟ್. ಈ ಎರಡು ಕ್ಷಣಗಳು ರಾಕಿ ಭಾಯ್ ಅಭಿಮಾನಿಗಳನ್ನು ಸಂಭ್ರಮದಲ್ಲಿ ತೇಲಿಸುವಂತೆ ಮಾಡಿದೆ. ಇನ್ನು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರೆ ಅದರ ಖದರ್ ಬೇರೆನೇ ಇರುತ್ತಿತ್ತು.
'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ನಟ ಯಶ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಹುಟ್ಟುಹಬ್ಬದ ಸೆಲೆಬ್ರೆಷನ್ ಅನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಯಶ್ ಹೇಳಿದ್ದರು. ಕಳೆದ ಬಾರಿ ಕೂಡ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಣೆ ಮಾಡಿಕೊಂಡಿರಲಿಲ್ಲ. ಸೆಲೆಬ್ರೆಷನ್‌ನಿಂದ ದೂರವೇ ಉಳಿದಿದ್ದರು. ಫ್ಯಾಮಿಲಿ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದರು.
ಈ ಬಾರಿ ಮಧ್ಯರಾತ್ರಿ ಗೋವಾದ ಬೀಚ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ಪತಿ ರಾಧಿಕಾ ಪಂಡಿತ್, ಯಶ್ ಮಕ್ಕಳು, ಅವರ ಆಪ್ತ ಸಹಾಯಕರು ಹಾಗೂ 'ಟಾಕ್ಸಿಕ್' ಸಿನಿಮಾ ನಿರ್ಮಾಪಕ ವೆಂಕಟ್ ಕೆ ನಾರಾಯಣ ಭಾಗವಹಿಸಿದ್ದಾರೆ. ಸದ್ಯ ಯಶ್ ಬರ್ತ್‌ಡೇ ಸಂಭ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಇನ್ನೂ ಯಶ್‌ಗೂ ಗೋವಾಗೂ ಬಿಡಲಾರದ ನಂಟು. ಪತ್ನಿ ರಾಧಿಕಾ ಪಂಡಿತ್ ಅಜ್ಜಿ ಮನೆ ಗೋವಾ ಆಗಿದ್ದರಿಂದ ಹಲವು ಕಾರ್ಯಕ್ರಮಗಳನ್ನು ಗೋವಾದಲ್ಲಿಯೇ ನಡೆದಿದೆ. ಯಶ್, ರಾಧಿಕಾ ಪಂಡಿತ್ ಎಂಗೇಜ್ಮೆಂಟ್ ಹಾಗೂ ಮದುವೆ ಕೂಡ ಗೋವಾದಲ್ಲಿಯೇ ನಡೆದಿತ್ತು. 39ನೇ ಹುಟ್ಟುಹಬ್ಬವನ್ನು ಕೂಡ ಗೋವಾದಲ್ಲಿಯೇ ಆಚರಿಸಿಕೊಂಡಿದ್ದಾರೆ. ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಇನ್ನು ಕೆಜಿಎಫ್ ಬಳಿಕ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ ಕರ್ನಾಟಕ ಅಷ್ಟೇ ಅಲ್ಲ. ದೇಶಾದ್ಯಂತ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ನಟ ಯಶ್ 39ನೇ ಹುಟ್ಟುಹಬ್ಬಕ್ಕೆ ವಿಶ್ವದ ಮೂಲೆ ಮೂಲೆಯಿಂದ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಇದರೊಂದಿಗೆ 'ಟಾಕ್ಸಿಕ್' ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದಾರೆ. ಯಶ್ ಬರ್ತ್‌ಡೇ ಗಿಫ್ಟ್ ಆಗಿ ಏನು ಕೊಟ್ಟಿರಬಹುದು ಎಂದು ಎದುರು ನೋಡುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಯಶ್ ನಟನೆಯ ಬಹು ನಿರೀಕ್ಷೆಯ 'ಟಾಕ್ಸಿಕ್' ಸಿನಿಮಾದ ಅಪ್‌ಡೇಟ್ ಹೊರಬೀಳಲಿದೆ.


Click it and Unblock the Notifications











