Toxic Teaser: 'ಟಾಕ್ಸಿಕ್' ಟೀಸರ್ ಹೇಗಿದೆ ಅಣ್ತಮ್ಮಾಸ್?
'ಕೆಜಿಎಫ್ ಚಾಪ್ಟರ್ 1' ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದರು. ಸುಮಾರು 4 ವರ್ಷಗಳ ಬಳಿಕ ರಾಕಿಂಗ್ ಸ್ಟಾರ್ ನಟಿಸುತ್ತಿರುವ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಇಷ್ಟು ದಿನ ಸಿನಿಮಾ ಟೈಟಲ್ ಹಾಗೂ ಪೋಸ್ಟರ್‌ನಿಂದ ಸದ್ದು ಮಾಡಿದ್ದ 'ಟಾಕ್ಸಿಕ್' ಟೀಸರ್ ರಿಲೀಸ್ ಆಗಿದೆ. ಈ ಘಳಿಗೆಗಾಗಿ ಯಶ್ ಅಭಿಮಾನಿಗಳು ಎದುರು ನೋಡುತ್ತಿದ್ದರು.
'ಟಾಕ್ಸಿಕ್' ಕನ್ನಡ ಚಿತ್ರರಂಗದ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಅದಲ್ಲೂ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ರೂಪುಗೊಂಡ ಬಳಿಕ ರಿಲೀಸ್ ಆಗುತ್ತಿರುವ ಸಿನಿಮಾ ಆಗಿದ್ದರಿಂದ ಇಡೀ ದೇಶದ ಕಣ್ಣು ಈ ಸಿನಿಮಾದ ಮೇಲಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿರುವ 'ಟಾಕ್ಸಿಕ್'ನಲ್ಲಿ ದೊಡ್ಡ ತಾರಾಗಣವೇ ಇದೆ. ನಿರೀಕ್ಷೆ ಮಾಡಿದಂತೆ ಇಂದು (ಜನವರಿ 8) ಯಶ್ ಬರ್ತ್‌ಡೇ ಆಗಿದ್ದರಿಂದ ಟಾಕ್ಸಿಕ್ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಅದಕ್ಕೆ ಎಕ್ಸ್‌ನಲ್ಲಿ (ಟ್ವಿಟರ್) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

"ಧುರಂಧರ್ ಅನ್ನು ತಿಂದು ಹಾಕುತ್ತೆ"
"ಟಾಕ್ಸಿಕ್ ಎಂಬ ಬಿರುಗಾಳಿ ಆಳುವುದಕ್ಕೆ ಬಂದಿದೆ. ಯಶ್ ಡೆಡ್ಲಿ ಲುಕ್, ರಗಡ್ ಸೆಳೆತ, ಪರಿಶುದ್ಧ ಪಾಬ್ರಲ್ಯ ಹೊಂದಿದೆ. ಈ ಬಿರುಗಾಳಿ ಬಾಕ್ಸಾಫೀಸ್‌ನಲ್ಲಿ 'ಧುರಂಧರ್' ಅನ್ನು ತಿಂದು ಹಾಕುತ್ತೆ. ಯಾಕಂದ್ರೆ ಡೆಡ್ಲಿ ಮನೆಗೆ ಬಂದಾಗಿದೆ. ಟಾಕ್ಸಿಕ್ ಯಾರಿಗೂ ಪೈಪೋಟಿ ಕೊಡುವುದಕ್ಕೆ ಬಂದಿಲ್ಲ. ರೂಲ್ ಮಾಡುವುದಕ್ಕೆ ಬಂದಿರುವ ಸಿನಿಮಾ. ಯಶ್ ಟ್ರೆಂಡ್ ಅನ್ನು ಫಾಲೋವಿಂಗ್ ಮಾಡುತ್ತಿಲ್ಲ. ಯಶ್ ಸ್ಟ್ಯಾಂಡರ್ಡ್ ಆಗಿದ್ದಾರೆ."
ಡೆಡಿಕೇಷನ್ ಮ್ಯಾಚ್ ಮಾಡೋಕಾಗಲ್ಲ
"ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಡೆಡಿಕೇಷನ್ ಅನ್ನು ಮ್ಯಾಚ್ ಮಾಡುವುದಕ್ಕೆ ಆಗುವುದಿಲ್ಲ. ಅವರೇ ಸ್ವತ: ಮೋಲ್ಡ್ ಮಾಡಿಕೊಳ್ಳಬಲ್ಲರು. ಹಾಗೇ ತನ್ನ ಪಾತ್ರವನ್ನು ಸಮರ್ಥಿಸಿಕೊಳ್ಳಲು ಏನು ಬೇಕಾದರೂ ಮಾಡಬಲ್ಲರು. ನಂಬಲು ಅಸಾಧ್ಯವಾದ ಎಫರ್ಟ್ ಇದು" ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಗಾಳಿ ಕೂಡ ಗೌರವ ಕೊಡಬೇಕು
ನಮ್ಮ ಪೀಳಿಗೆಯ ಸೆಳೆದ ಸಂಶೋಧಕರು. ನಿಜವಾಗಲೂ ರಾಕಿ ಭಾಯ್ ಸ್ವಾಗ್ ಅದ್ಭುತ. ಎಂಟ್ರಿ ಹೇಗಿದೆ ಅಂದರೆ, ಗಾಳಿ ಕೂಡ ಗೌರವ ಕೊಡಬೇಕು. ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ಡಾಮಿನೇಷನ್ ಶುರುವಾಗುತ್ತೆ. ಡ್ಯಾಡಿ ಇಸ್ ಹೋಮ್" ಎಂದು ಮತ್ತೊಬ್ಬ ನೆಟ್ಟಿಗರು ಟಾಕ್ಸಿಕ್ ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ.
ಮಾದಕ ಸಿನಿಮಾ
"ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಕ್ವಾಲಿಟಿ ಚೆನ್ನಾಗಿದೆ. ಆದರೆ, ಎಲ್ಲೋ ಒಂದು ಕಡೆ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಅವರು ಎ ಸರ್ಫಿಕೇಟ್ ಒಪ್ಪುವುದರಿಂದ ಆ ಕಾರ್ ಸೀನ್‌ಗೆ ಕತ್ತರಿ ಹಾಕುವುದಿಲ್ಲ ಎನಿಸುತ್ತದೆ. ಇದನ್ನು ಹೊರತು ಪಡಿಸಿ, ಯಶ್ ಅಭಿಮಾನಿಗಳಿಗೆ ಇದು ಒಳ್ಳೆಯ ಟೀಸರ್ ಎಂದು ಹೇಳಬಹುದು. ಇದನ್ನೊಂತರ ಮಾದಕ ಸಿನಿಮಾ ಎಂದು ಹೇಳಬಹುದು." ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.
ಇನ್ನು 'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಜೊತೆ ನಾಯಕಿಯರ ದಂಡೇ ಇದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಷ್ಮಿಣಿ ವಸಂತ್, ಅಮಿತ್ ತ್ರಿವೇದಿ, ಕೆಲಿ ಪೌಲ್, ಹಾಲಿವುಡ್ ನಟಿ ನತಾಲಿ ಬರ್ನ್ ಅಂತಹ ದಿಗ್ಗಜರು ನಟಿಸಿದ್ದಾರೆ. ಅಂದ್ಹಾಗೆ ಯಶ್ ಈ ಸಿನಿಮಾದಲ್ಲಿ ರಾಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇದೇ ಯುಗಾದಿ ಹಬ್ಬಕ್ಕೆ 'ಟಾಕ್ಸಿಕ್' ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ರಿಲೀಸ್ ಆಗುತ್ತಿದೆ.


Click it and Unblock the Notifications











