'ಗಂಧದ ಗುಡಿ' ನಿರ್ದೇಶಕನ ಜೊತೆ ಡಬ್ಬಿಂಗ್ ಸ್ಟುಡಿಯೋದಲ್ಲಿ ಯಶ್: ಅಸಲಿ ಕಾರಣವೇನು?

'ಕೆಜಿಎಫ್ 2' ಸೂಪರ್‌ ಸಕ್ಸಸ್ ಬಳಿಕ ರಾಕಿಂಗ್‌ ಸ್ಟಾರ್ ಯಶ್ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ಗೆಟಪ್ ಹಾಗೂ ಹೊಸ ಲುಕ್ ಕೊಟ್ಟು ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲೂ ಕಾಣಿಸಿಕೊಂಡಿದ್ದರು.

ಯಶ್ ಮುಂದಿನ ಸಿನಿಮಾ ಅನೌನ್ಸ್ ಯಾವಾಗ ಮಾಡುತ್ತಾರೋ? ನಾವು ಯಾವಾಗ ಸಂಭ್ರಮಿಸೋದೋ? ಅವರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಇತ್ತ ಯಶ್ ತಮ್ಮ 19ನೇ ಸಿನಿಮಾವನ್ನು ಘೋಷಣೆ ಮಾಡುವ ಆತುರದಲ್ಲಿಲ್ಲ ಅನ್ನೋದನ್ನು ಸಾರಿ ಸಾರಿ ಹೇಳುತ್ತಿದ್ದಾರೆ. ಈ ಗ್ಯಾಪ್‌ನಲ್ಲೇ ಒಂದು ಫೋಟೊ ವೈರಲ್ ಆಗುತ್ತಿದೆ.

ಎರಡು ದಿನಗಳಿಂದ ಯಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೊ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಗಂಧದ ಗುಡಿ ನಿರ್ದೇಶಕರ ಜೊತೆ ಯಾಕಿದ್ದಾರೆ? ಅನ್ನೋ ಕುತೂಹಲ ಸಿನಿಪ್ರಿಯರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ.

ಯಶ್-ಅಮೋಘವರ್ಷ ಫೋಟೊ ವೈರಲ್

ಯಶ್-ಅಮೋಘವರ್ಷ ಫೋಟೊ ವೈರಲ್

'ಕೆಜಿಎಫ್ 2' ಬಳಿಕ ಹೊಸ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮುಂದಿನ ಸಿನಿಮಾ ಯಾರೊಂದಿಗೆ ಮಾಡುತ್ತಾರೆ? ನಿರ್ದೇಶಕರು ಯಾರು ಅನ್ನೋ ಕುತೂಹಲವಂತೂ ಇದ್ದೇ ಇದೆ. ಇತ್ತ ಯಶ್ ಕೂಡ 19ನೇ ಸಿನಿಮಾ ಬಗ್ಗೆನೇ ತಲೆಕೆಡಿಸಿಕೊಂಡಿದ್ದಾರೆ. ಈ ಗ್ಯಾಪ್‌ನಲ್ಲಿ ಆಗಾಗ ಅಭಿಮಾನಿಗಳ ಮುಂದೆ ಪ್ರತ್ಯಕ್ಷರಾಗಿ ಕಣ್ಮರೆಯಾಗುತ್ತಾರೆ. ಸದ್ಯ ಯಶ್ ಹಾಗೂ ಅಮೋಘವರ್ಷ ಡಬ್ಬಿಂಗ್ ಸ್ಟುಡಿಯೋದಲ್ಲಿರೋ ಫೋಟೊವೊಂದು ಕಳೆದ ಎರಡು ದಿನಗಳಿಂದ ಸದ್ದು ಮಾಡುತ್ತಿದೆ. ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಯಶ್-ಅಮೋಘವರ್ಷ ಕಥೆಯೇನು?

ಯಶ್-ಅಮೋಘವರ್ಷ ಕಥೆಯೇನು?

ಯಶ್ ಹಾಗೂ ಅಮೋಘವರ್ಷ ಇಬ್ಬರೂ ಡಬ್ಬಿಂಗ್ ಸ್ಟುಡಿಯೋದಲ್ಲಿರೋ ಫೋಟೊ ಸಂಚಲ ಸೃಷ್ಟಿಸುತ್ತಿದ್ದಂತೆ ಹಲವಾರು ಕಥೆಗಳು ಹುಟ್ಟಿಕೊಂಡಿದ್ದರು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಗಂಧದ ಗುಡಿ' ಸಿನಿಮಾಗೆ ರಾಕಿಂಗ್‌ ಸ್ಟಾರ್ ಯಶ್ ಧ್ವನಿ ನೀಡುತ್ತಿದ್ದಾರೆ. ಮಕ್ಕಳಿಗೆ ಸಿನಿಮಾ ನೋಡಿ ಅಂತ ಹೇಳಲು ಅಮೋಘವರ್ಷ ಸ್ಪೆಷಲ್ ವಿಡಿಯೋ ಮಾಡುತ್ತಿದ್ದಾರೆ. ಅದಕ್ಕೆ ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಗಾಳಿ ಸುದ್ದಿಗಳು ಓಡಾಡುತ್ತಿದ್ದವು.

ಅಸಲಿ ಕಾರಣವೇನು?

ಅಸಲಿ ಕಾರಣವೇನು?

ಅಸಲಿಗೆ ಯಶ್ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಾರಣ ಬೇರೆನೇ ಇದೆ ಎನ್ನಲಾಗಿದೆ. ನವೆಂಬರ್‌ 11 ರಂದು ನಾಡಪ್ರಭು ಕೆಂಪೇಗೌಡ ಬೃಹತ್ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದ್ದೆ. ಅದಕ್ಕೆ ಕೆಲವು ದಿನಗಳ ಹಿಂದಿನಿಂದಲೇ ಸಿದ್ಧತೆಗಳು ಆರಂಭ ಆಗಿವೆ. ಈ ವೇಳೆ ವಿಶೇಷ ವಿಡಿಯೋದನ್ನು ನಿರ್ಮಾಣ ಮಾಡಲಾಗಿದ್ದು, ಆ ವಿಡಿಯೋಗೆ ಯಶ್ ಧ್ವನಿ ನೀಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಕಾರಣಕ್ಕೆ ಯಶ್ ಹಾಗೂ ಅಮೋಘವರ್ಷ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಆದರೆ, ಯಾವುದೇ ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಪ್ರಧಾನಿ ಮೋದಿಯಿಂದ ಉದ್ಘಾಟನೆ

ಪ್ರಧಾನಿ ಮೋದಿಯಿಂದ ಉದ್ಘಾಟನೆ

ದೇವನಹಳ್ಳಿಯ ಸಮೀಪವಿರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಈ ಪ್ರತಿಮೆಯ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ರಾಜ್ಯ ಪ್ರವಾಸದ ವೇಳೆ ಮಾಡಿದ್ದಾರೆ. ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನಾಡಿನ ಸಮೃದ್ದಿಯ ಸಂಕೇತವಾಗಿ ನಿರ್ಮಾಣ ಮಾಡಲಾಗುತ್ತಿದೆ.

More from Filmibeat

English summary
Yash Amoghavarsha In Dubbing Studio For Kempegowda Statue Inauguration Voice Over, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X