'ಟಾಕ್ಸಿಕ್‌' ಶೂಟಿಂಗ್ ಬ್ರೇಕ್; ಪತ್ನಿ ರಾಧಿಕಾ ಪಂಡಿತ್, ಮಕ್ಕಳೊಂದಿಗೆ ಯಶ್ ಜಾಲಿ ಜಾಲಿ.. ಫೋಟೊ ನೋಡಿ

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಒಂದರ ಹಿಂದೊಂದು ಶೆಡ್ಯೂಲ್‌ ಇರುವುದರಿಂದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಈ ವರ್ಷ ತಮ್ಮ ಅಭಿಮಾನಿಗಳಿಗೆ 'ಟಾಕ್ಸಿಕ್' ಸಿನಿಮಾ ಕೊಡಲೇ ಬೇಕು ಅಂತ ನಿರ್ಧರಿಸಿರುವ ಯಶ್ ಬೇಗ ಬೇಗ ಶೂಟಿಂಗ್ ಮುಗಿಸುವತ್ತ ಗಮನ ಹರಿಸುತ್ತಿದ್ದಾರೆ. ಹಾಗಂತ ಫ್ಯಾಮಿಲಿ ಸಂಭ್ರಮದಿಂದ ದೂರವೇನು ಉಳಿದಿಲ್ಲ.

ಹೊಸ ವರ್ಷ ಬಂತು ಅಂದರೆ, ಸೆಲೆಬ್ರೆಟಿಗಳು ಫ್ಯಾಮಿಲಿ ಜೊತೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಒಂದು ವಾರ, 15 ದಿನ ಕೆಲಸಕ್ಕೆ ಬ್ರೇಕ್ ಕೊಟ್ಟು ಜಾಲಿ ಮೂಡ್‌ನಲ್ಲಿ ಇರುತ್ತಾರೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆದು, ರಿಲ್ಯಾಕ್ಸ್ ಆಗಿ ಮತ್ತೆ ಶೂಟಿಂಗ್‌ಗೆ ಎಂಟ್ರಿ ಕೊಡುತ್ತಾರೆ. ಹೀಗಾಗಿ ಸಿನಿಮಾ ಪ್ರಿಯರಿಗೆ ತಮ್ಮ ನೆಚ್ಚಿನ ನಟರು ಹೊಸ ವರ್ಷವನ್ನು ಹೇಗೆಲ್ಲ ಆಚರಿಸಿಕೊಂಡರು ಅನ್ನೋ ಕುತೂಹಲವಿದ್ದೇ ಇರುತ್ತೆ.

Yash and Radhika Pandit New Year 2025 celebration with kids share photos

ಅದರಲ್ಲೂ ರಾಕಿ ಭಾಯ್ ಹೊಸ ವರ್ಷ ಎಲ್ಲೆ ಆಚರಣೆ ಮಾಡಿದರು. ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರಾ? ಇಲ್ಲ ಫ್ಯಾಮಿಲಿ ಜೊತೆ ಎಲ್ಲಾದರೂ ವಿದೇಶಕ್ಕೆ ಹೋಗಿದ್ದಾರಾ ಅನ್ನೋ ಕುತೂಹಲವಿತ್ತು. ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಯೊಂದಿಗೆ ಹೊಸ ವರ್ಷವನ್ನು ಆಚರಿಸಿಕೊಂಡಿದ್ದಾರೆ. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಯಶ್, ರಾಧಿಕಾ ಪಂಡಿತ್ ಹಾಗೂ ಅವರ ಇಬ್ಬರು ಮಕ್ಕಳು ಹೊಸ ವರ್ಷವನ್ನು ತಮ್ಮ ಮನೆಯಲ್ಲಿಯೇ ಆಚರಿಸಿಕೊಂಡಿದ್ದಾರೆ. ಈ ಬಾರಿ ಶೂಟಿಂಗ್ ಇದ್ದಿದ್ದರಿಂದ ಬಹುಶ: ವಿದೇಶ ಪ್ರಯಾಣ ಮಾಡಿಲ್ಲ ಎನಿಸುತ್ತಿದೆ. ಹೊಸ ವರ್ಷಕ್ಕೆ ಯಶ್ 'ಟಾಕ್ಸಿಕ್' ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡಿದ್ದು, ಫ್ಯಾಮಿಲಿ ಜೊತೆ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ರಾಧಿಕಾ ಪಂಡಿತ್ ಶೇರ್ ಮಾಡಿರುವ ಫೋಟೊಗಳಲ್ಲೂ ರಾಕಿ ಭಾಯ್ ಫ್ಯಾಮಿಲಿ ಮ್ಯಾನ್ ಆಗಿದ್ದಾರೆ.

ಇನ್ನು ರಾಧಿಕಾ ಪಂಡಿತ್ ಹಾಗೂ ಯಶ್ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ. " ನಮ್ಮ ಸಣ್ಣ ಗುಂಪಿನಿಂದ ಫ್ರೆಂಡ್ಲಿ ವೈಬ್ಸ್ ಮತ್ತು ಹೊಸ ವರ್ಷದ ಶುಭಾಶಗಳು. ಈ ವರ್ಷ ನಿಮಗೆಲ್ಲರಿಗೂ ಖುಷಿ, ಪ್ರೀತಿ ಹಾಗೂ ನಗು ತುಂಬಿರಲಿ ಎಂದು ಕೋರುತ್ತೇವೆ. ನಮ್ಮಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು" ಎಂದು ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಹಂಚಿಕೊಂಡು ಬರೆದುಕೊಂಡಿದ್ದಾರೆ.

ಇನ್ನು ಯಶ್ 'ಟಾಕ್ಸಿಕ್' ಸಿನಿಮಾ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಈ ವರ್ಷದ ಕೊನೆಯಲ್ಲಿ ಯಶ್ ಸಿನಿಮಾ ರಿಲೀಸ್ ಆಗಲಿ ಅಂತ ಅಭಿಮಾನಿಗಳು ಬಯಸುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಯಶ್ ಎರಡು ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಆದರೆ, ಎಷ್ಟು ಹಂತದಲ್ಲಿ ಶೂಟಿಂಗ್ ನಡೆಯುತ್ತೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಮಲಯಾಳಂನ ಗೀತು ಮೋಹನ್‌ದಾಸ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗುತ್ತೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ 'ಟಾಕ್ಸಿಕ್' ಸಿನಿಮಾದ ಮೇಕಿಂಗ್ ದೃಶ್ಯವೊಂದು ಲೀಕ್ ಆಗಿತ್ತು. ಹೀಗಾಗಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಯಶ್ ಜೊತೆ ಬಾಲಿವುಡ್‌ನ ದೊಡ್ಡ ತಂಡವೇ ಇದೆ. ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ನಯನತಾರಾ ಸೇರಿದಂತೆ ಹಲವು ನಟಿಯರ ಹೆಸರು ಕೇಳಿ ಬರುತ್ತಿದೆ. ಇನ್ನುಇದೇ ಜನವರಿ 8ರಂದು ಯಶ್ ಹುಟ್ಟುಹಬ್ಬಕ್ಕೆ 'ಟಾಕ್ಸಿಕ್' ಲುಕ್ ಏನಾದರೂ ರಿವೀಲ್ ಆಗುತ್ತಾ? ಇಲ್ಲಾ ಮತ್ತೆ ನಿರಾಸೆ ಮೂಡಿಸುತ್ತಾರಾ ಅಂತ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

More from Filmibeat

English summary
Yash and Radhika Pandit New Year 2025 celebration with kids share photos;
Read more about: new year 2025 yash radhika pandit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X