ಆಪ್ತ ಸಹಾಯಕ ಚೇತನ್ ಮನೆಗೆ ರಾಕಿಂಗ್ ಜೋಡಿ ಭೇಟಿ; ಸಹಾಯಕನ ಮಗುವಿಗೆ ಚಿನ್ನದ ಸರ ಉಡುಗೊರೆ

ರಾಕಿಂಗ್ ಸ್ಟಾರ್ ಯಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 'ಕೆಜಿಎಫ್ 2' ಬಳಿಕ ರಾಕಿಂಗ್ ಸ್ಟಾರ್ ಹೊಸ ಸಿನಿಮಾ 'ಟಾಕ್ಸಿಕ್' ಸೆಟ್ಟೇರಿದೆ. ಸದ್ದಿಲ್ಲದೆ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಆದಷ್ಟು ಬೇಗ ಶೂಟಿಂಗ್ ಮುಗಿಸಿ ತಮ್ಮ ಅಭಿಮಾನಿಗಳಿಗೆ ಸಿನಿಮಾ ತೋರಿಸಬೇಕು ಅನ್ನುವ ಹಂಬಲ ಯಶ್ ಅವರದ್ದು. ಆದರೆ, ಈ ಮಧ್ಯೆ ತಮ್ಮ ಜೊತೆಗಿರುವವರ ಖುಷಿಯಲ್ಲಿ ಭಾಗಿಯಾಗಿದ್ದಾರೆ.

ಯಶ್ ಈಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸ್ಟಾರ್ ಆಗಿ ಬೆಳೆದಿದ್ದಾರೆ. 'ಕೆಜಿಎಫ್ 2' ಬಳಿಕ ಯಶ್ ರೇಂಜ್ ಬದಲಾಗಿರುವುದು ನಿಜ. ಆದರೂ, ತಮ್ಮ ಜೊತೆಗೆ ಇದ್ದವರನ್ನು ಯಶ್ ಮರೆತಿಲ್ಲ. ಅವರ ಜೊತೆಯಲ್ಲಿ ಇರುವವವರ ಸಂಭ್ರಮದೊಂದಿಗೆ ಫ್ಯಾಮಿಲಿ ಸಮೇತ ಭಾಗಿಯಾಗುತ್ತಾರೆ. ಈಗ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ, ತಮ್ಮೊಂದಿಗೆ ಕೆಲಸ ಮಾಡುತ್ತಿರುವ ಸಹಾಯಕನ ಮನೆಗೆ ಭೇಟಿ ನೀಡಿ, ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

Yash and Radhika Pandit visited assistant Chetan house bless his new born baby

ಹೌದು, ಯಶ್ ಆಪ್ತ ಸಹಾಯಕ ಚೇತನ್ ಸುಮಾರು 12 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇದೇ ಚೇತನ್ 2021ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸ್ವತ: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಜೊತೆ ನಿಂತು ಮದುವೆಯನ್ನು ನೆರೆವೇರಿಸಿಕೊಟ್ಟಿದ್ದರು.

ಇಂದು (ಫೆಬ್ರವರಿ 12) ಸಹಾಯಕ ಚೇತನ್ ಮನೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಭೇಟಿ ಕೊಟ್ಟಿದ್ದಾರೆ. ಚೇತನ್ ಅವರ ಮಗುವನ್ನು ನೋಡಿ, ಚಿನ್ನದ ಸರವನ್ನು ಉಡುಗೊರೆ ನೀಡಿ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಫ್ಯಾನ್ ಪೇಜ್‌ನಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ರಾಕಿ ಭಾಯಿಯ ಈ ಸರಳತೆಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

Yash and Radhika Pandit visited assistant Chetan house bless his new born baby

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾದ ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡಿದ್ದಾರೆ. ಸದ್ಯ ಬೆಂಗಳೂರಿನಲ್ಲೇ ಇರುವ ಯಶ್ ಪತ್ನಿ ಜೊತೆ ಪ್ರತ್ಯಕ್ಷ ಆಗಿದ್ದಾರೆ. ಸದ್ಯ 'ಟಾಕ್ಸಿಕ್' ಜಪ ಮಾಡುತ್ತಿರುವ ರಾಕಿಂಗ್ ಅಭಿಮಾನಿಗಳು ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಕೊಡುತ್ತಾರಾ? ಅನ್ನೋದನ್ನು ಎದುರು ನೋಡುತ್ತಿದ್ದಾರೆ. ಆದರೆ, ಯಶ್ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ನೀಡಿಲ್ಲ.

More from Filmibeat

English summary
Yash and Radhika Pandit visited assistant Chetan house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X