ರಾಧಿಕಾ, ಮಕ್ಕಳೊಂದಿಗೆ ಮುಂಬೈ ಬೀದಿ ಸುತ್ತಿದ ಯಶ್; ಇನ್ಮುಂದೆ ಮುಂಬೈನಲ್ಲಿ ಇರುತ್ತಾರಾ ರಾಕಿ ಭಾಯ್?
ರಾಕಿ ಭಾಯ್ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. 'ಕೆಜಿಎಫ್ 2' ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್‌ನಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಯಶ್ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿದ್ದು. ಸದ್ಯ ಮುಂಬೈನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಂಬೈನ ಪಾಪರಾಜಿಗಳ ಕ್ಯಾಮರಾ ಕಣ್ಣುಗಳಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ.
'ಟಾಕ್ಸಿಕ್' ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ. 'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಮೇಲೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕ್ರೇಜ್ ದುಪ್ಪಟ್ಟಾಗಿದೆ. ಹೀಗಾಗಿ 'ಟಾಕ್ಸಿಕ್' ಕನ್ನಡಕ್ಕಷ್ಟೇ ಅಲ್ಲ. ಐದು ಪ್ರಮುಖ ಭಾಷೆಗಳಿಗೂ ಪ್ರಮುಖ ಎನಿಸಿದೆ. ಸದ್ಯಕ್ಕೆ ಇದೇ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ವೇಗವಾಗಿ ನಡೆಯುತ್ತಿದೆ.

ಶೂಟಿಂಗ್ ಸಮಯದಲ್ಲಿಯೇ ಫ್ಯಾಮಿಲಿ ಜೊತೆನೂ ಸಮಯ ಕಳೆದಿದ್ದಾರೆ. ಮುಂಬೈನಲ್ಲಿ ಬೀದಿಗಳಲ್ಲಿ ಸಾಮಾನ್ಯನಂತೆ ಪತ್ನಿ ಹಾಗೂ ಮಕ್ಕಳೊಂದಿಗೆ ಯಶ್ ಸುತ್ತಾಡಿದ್ದಾರೆ. ಯಶ್ ಜೊತೆ ಪತ್ನಿ ರಾಧಿಕಾ ಪಂಡಿತ್ ಹಾಗೂ ಇಬ್ಬರು ಮಕ್ಕಳು ಸುತ್ತಾಡಿದ್ದಾರೆ. ಇದು ಮುಂಬೈನ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು ರಾಕಿ ಭಾಯ್ ಅನ್ನು ಹಾಡಿ ಹೊಗಳಿವೆ.
'ಕೆಜಿಎಫ್ 2' ಸಿನಿಮಾ ಬಂದ್ಮೇಲೆ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನು 'ಟಾಕ್ಸಿಕ್' ಸಿನಿಮಾ ಅದ್ಯಾವ ಮಟ್ಟಿಗೆ ಹೇಗಿರುತ್ತೋ? ಅದ್ಯಾವ ಮಟ್ಟಿಗೆ ಸದ್ದು ಮಾಡುತ್ತೋ ಅನ್ನುವುದನ್ನು ಅವರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಈ ಕಾರಣಕ್ಕೆ ಅದ್ಧೂರಿಯಾಗಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ.
ಶೂಟಿಂಗ್‌ನಿಂದ ಬಿಡುವು ಸಿಕ್ಕಾಗಲೆಲ್ಲಾ ಯಶ್ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಆದರೆ, ಕೆಲವು ದಿನಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದರಿಂದ ಯಶ್ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಮುಂಬೈಗೆ ಕರೆಸಿಕೊಂಡಿದ್ದಾರೆ. ಎಂದೂ ಮಲಗದ ನಗರ ಮುಂಬೈನ ಬೀದಿಗಳಲ್ಲಿ ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳು ಆಯ್ರಾ ಹಾಗೂ ಯಥರ್ವ್ ಅವರನ್ನು ಸುತ್ತಾಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಧಿಕಾ ಪಂಡಿತ್ ಹಾಗೂ ಯಶ್ ಮುಂಬೈನ ಬೀದಿಯಲ್ಲಿ ಸುತ್ತಾಡುತ್ತಿದ್ದರೆ, ಅಭಿಮಾನಿಗಳು ಅವರನ್ನು ಮುತ್ತಿಕೊಂಡಿದ್ದರು. ಇದೇ ವೇಳೆ ಅಭಿಮಾನಿಯೊಬ್ಬರ ಯಶ್ ಕಾಲಿಗೆ ನಮಸ್ಕಾರ ಮಾಡುವುದಕ್ಕೆ ಮುಂದಿದ್ದಾಗಿದ್ದ. ಆ ವೇಳೆ ಯಶ್ ಅದನ್ನು ತಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದಾರೆ.
ಯಶ್- ರಾಧಿಕಾ ಪಂಡಿತ್ ವಿಡಿಯೋ ನೋಡಿ ಅಭಿಮಾನಿಗಳು 'ಕೆಜಿಎಫ್ 3' ಯಾವಾಗ ಅಂತಾನೂ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು 'ಟಾಕ್ಸಿಕ್' ಸಿನಿಮಾವನ್ನು ಮಲಯಾಳಂ ನಟಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿದ ಬಳಿಕ ಮುಂಬೈನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಬಾಲಿವುಡ್ ನಟಿಯರು ಸೇರಿದಂತೆ ಹಾಲಿವುಡ್ ತಂತ್ರಜ್ಷರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. 'ಟಾಕ್ಸಿಕ್' ಜೊತೆಗೆ 'ರಾಮಾಯಣ' ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ ಮುಂಬೈನಲ್ಲೇ ಹೆಚ್ಚು ದಿನ ಇರುವ ಸಾಧ್ಯತೆಯಿದೆ.


Click it and Unblock the Notifications











