ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳಿಂದ ಹುಟ್ಟುಹಬ್ಬ: ಫ್ಯಾನ್ ಮಾಡಿದ ಟ್ವೀಟ್ ಎಷ್ಟು?

ಪ್ರತಿ ವರ್ಷ ಆರಂಭದಲ್ಲೇ ಅದ್ಧೂರಿ ಬರ್ತ್‌ಡೇಗೆ ಚಾಲನೆ ಸಿಗುತ್ತಿತ್ತು. ಜನವರಿ 08ರಂದು ಯಶ್‌ ಬರ್ತ್‌ಡೇಯಿಂದ ಅಭಿಮಾನಿ ಹಬ್ಬ ಆರಂಭ ಆಗುತ್ತಿತ್ತು. ಯಶ್ ಹುಟ್ಟುಹಬ್ಬದಿಂದ ಶುರುವಾದರೆ, ದರ್ಶನ್, ಪುನೀತ್ ರಾಜ್‌ಕುಮಾರ್, ಹೀಗೆ ಸೂಪರ್‌ಸ್ಟಾರ್‌ಗಳ ಬರ್ತ್‌ಡೇ ಸಂಭ್ರಮ ಮುಂದುವರೆಯುತ್ತಿತ್ತು. ಆದ್ರೀಗ ಕೊರೊನಾ ಅಭಿಮಾನಿಗಳ ಎಲ್ಲಾ ಸಂಭ್ರಮಕ್ಕೂ ಬ್ರೇಕ್ ಹಾಕಿದೆ. ಹೀಗಾಗಿ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡಿರಲಿಲ್ಲ.

Recommended Video

ಯಶ್ ನೋಡಲು ಬಂದು ಲಾಠಿ ಏಟು ತಿಂದಿದ್ದ ಅಭಿಮಾನಿಗಳು

ಸಿಂಪಲ್ ಆಗಿ ಕೇವಲ ತನ್ನ ಕುಟುಂಬದೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಯಶ್ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದರು. ಹಾಗಂತ ಅಭಿಮಾನಿಗಳು ಸುಮ್ಮನೆ ಇರುತ್ತಾರಾ? ಎಲ್ಲಾದರೂ, ಹೇಗಾದರೂ ಹುಟ್ಟುಹಬ್ಬ ಆಚರಣೆ ಮಾಡೇ ಮಾಡುತ್ತಾರೆ. ಈ ಬಾರಿ ಕೂಡ ಜನವರಿ 7ನೇ ತಾರೀಕಿನ ರಾತ್ರಿ 7 ಗಂಟೆಯಿಂದ ಜನವರಿ 8ನೇ ತಾರೀಕಿನ ರಾತ್ರಿ ವರೆಗೂ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಟ್ವೀಟ್‌ಗಳನ್ನೇ ಇಟ್ಟುಕೊಂಡು ಯಶ್ ಫ್ಯಾನ್ ಈಗ ಸಂಭ್ರಮ ಪಡುತ್ತಿದ್ದಾರೆ.

ಯಶ್ ಬರ್ತ್‌ಡೇ ಟ್ರೆಂಡ್ ಮಾಡಿದ ಫ್ಯಾನ್ಸ್

ಯಶ್ ಬರ್ತ್‌ಡೇ ಟ್ರೆಂಡ್ ಮಾಡಿದ ಫ್ಯಾನ್ಸ್

ಕೆಜಿಎಫ್ ಸಿನಿಮಾ ಬಿಡುಗಡೆಗೊಂಡ ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಪಾಲಿಗೆ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ದಕ್ಷಿಣದಿಂದ ಉತ್ತರ ಭಾರತದವರೆಗೂ ಯಶ್ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಯಶ್ ಅಭಿಮಾನಿಗಳು ಟ್ವಿಟರ್ ಮೂಲಕವೇ ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. 24 ಗಂಟೆಯಲ್ಲಿ ಯಶ್ ಫ್ಯಾನ್ಸ್ ನಿರಂತರವಾಗಿ ಟ್ವೀಟ್ ಮಾಡಿ ಶುಭಕೋರಿದ್ದರು.

2.24 ಮಿಲಿಯನ್ ಲೆಕ್ಕ ಕೊಟ್ಟ ಫ್ಯಾನ್ಸ್

2.24 ಮಿಲಿಯನ್ ಲೆಕ್ಕ ಕೊಟ್ಟ ಫ್ಯಾನ್ಸ್

ಯಶ್ ಹುಟ್ಟುಹಬ್ಬದ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಮ್ಮಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಯಶ್ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಿ, ದಾಖಲೆ ಮಾಡಬೇಕು ಅನ್ನುವುದ ಅವರ ಆಸೆಯಾಗಿತ್ತು. ಅದರಂತೆ, ಟ್ವಿಟರ್‌ನಲ್ಲಿ ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಿದ್ದಾರೆ. 24 ಗಂಟೆಗಳ ಈ ಅಭಿಯಾನದಲ್ಲಿ ಸುಮಾರು 2.24 ಮಿಲಿಯನ್‌ನಷ್ಟು ಬರ್ತ್‌ಡೇ ಟ್ವೀಟ್ ಆಗಿದೆ ಎಂದು ಅಭಿಮಾನಿಗಳೇ ಹೇಳಿಕೊಂಡಿದ್ದಾರೆ.

2 ವರ್ಷದ ಹಿಂದೆ ಬೃಹತ್ ಕಟೌಟ್

2 ವರ್ಷದ ಹಿಂದೆ ಬೃಹತ್ ಕಟೌಟ್

ಕೊರೊನಾ ಕಾರಣದಿಂದ ಯಶ್ ಎರಡು ವರ್ಷ ಬರ್ತ್‌ಡೇ ಆಚರಿಸಿಕೊಂಡಿಲ್ಲ. ಕೆಜಿಎಫ್ ರಿಲೀಸ್ ಆದ ಬಳಿಕ ಅಭಿಮಾನಿಗಳು ಥ್ರಿಲ್ ಆಗಿದ್ದರು. ತಮ್ಮ ಫೇವರಿಟ್ ನಟನಿಗೆ ಗೌರವ ಸೂಚಿಸಲು ಸುಮಾರು 236 ಅಡಿ ಎತ್ತರದ ಕಟೌಟ್ ಅನ್ನು ಹಾಕಿದ್ದರು. ಯಾವುದೇ ನಟನಿಗೆ ಇಷ್ಟೊಂದು ಎತ್ತರದ ಕಟೌಟ್ ಅನ್ನು ನಿಲ್ಲಿಸಿದ ಉದಾಹರಣೆಗಳೇ ಇಲ್ಲ. ಆದರೆ, ಅಭಿಮಾನಿಗಳ ಜೊತೆ ಯಶ್ ಆಚರಿಸಿಕೊಂಡಿದ್ದು ಇದೇ ಕೊನೆಯ ಬರ್ತ್‌ಡೇ. ಆ ಬಳಿಕ ಕೊರೊನಾದಿಂದ ಮತ್ತೆ ಹುಟ್ಟುಹಬ್ಬವನ್ನೇ ಆಚರಿಸಿಕೊಂಡಿಲ್ಲ.

ನರ್ತನ್ ಜೊತೆ ಯಶ್ ಸಿನಿಮಾ

ನರ್ತನ್ ಜೊತೆ ಯಶ್ ಸಿನಿಮಾ

'ಕೆಜಿಎಫ್ 2' ಸಿನಿಮಾ ಗ್ರ್ಯಾಂಡ್ ರಿಲೀಸ್‌ಗೆ ವೇದಿಕೆ ಸಜ್ಜಾಗುತ್ತಿದೆ. ಏಪ್ರಿಲ್ 14ರಂದು ಸಿನಿಮಾ ರಿಲೀಸ್‌ಗೆ ಸಕಲ ಸಿದ್ಧತೆಗಳನ್ನೂ ಚಿತ್ರತಂಡ ಮಾಡಿಕೊಂಡಿದೆ, ಈ ಮಧ್ಯೆ ಯಶ್ ಹೊಸ ಸಿನಿಮಾ ಕೂಡ ರೆಡಿಯಾಗುತ್ತಿದೆ. 2023 ಜನವರಿ ಅಂದರೆ, ಮುಂದಿನ ಹುಟ್ಟುಹಬ್ಬಕ್ಕೆ ನರ್ತನ್ ನಿರ್ದೇಶನದ ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಹೀಗಾಗಿ ನಿರಾಸೆಯಲ್ಲಿದ್ದ ಯಶ್ ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.

More from Filmibeat

English summary
Yash fans tweeted Rocking star Birthday tweet on 2.24 millions times. Fans celebrated his birthay online and planning to make big while KGF2 release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X