KGF 2: ಮಗನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ ಯಶ್ ತಂದೆ

'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಮಧ್ಯರಾತ್ರಿಯಿಂದಲೇ ದೇಶದ ಮೂಲೆ ಮೂಲೆಯಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. 'ಕೆಜಿಎಫ್ 2' ಸಿನಿಮಾ ಕೇಕೆ ಹಾಕುತ್ತಿದ್ದಾರೆ. ಶಿಳ್ಳೆ ಹೊಡೆಯುತ್ತಿದ್ದಾರೆ. ಬಿಡುಗಡೆಯಾದ ಬಹುತೇಕ ಕಡೆಗಳಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ ಎಂದು ವರದಿಯಾಗಿದೆ. ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದೇ ವೇಳೆ ಯಶ್ ತಂದೆ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

ಹಾಸನದಲ್ಲಿ ಸಿನಿಮಾ ವೀಕ್ಷಿಸಿದ ಯಶ್ ತಂದೆ

Recommended Video

KGF 2 | ಹಾಸನದ ಚಿತ್ರಮಂದಿರದಲ್ಲಿ KGF 2 ಸಿನಿಮಾ ನೋಡಿದ ಯಶ್ ತಂದೆ | Yash Father Arun Kumar

ಇಂದು (ಏಪ್ರಿಲ್ 14) ಬಹು ನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಚಿತ್ರಮಂದಿರಕ್ಕೆ ಅಪ್ಪಳಿಸಿದೆ. ಬೆಳ್ಳಂಬೆಳಗ್ಗೆಯಿಂದಲೇ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶೇಷ ಪ್ರದರ್ಶನ ಕಂಡಿದೆ. ಜಿಲ್ಲೆಗಳಲ್ಲೂ 'ಕೆಜಿಎಫ್ 2' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಕೂಡ ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ.

Yash Father Arun Kumar Visited SBG Theater In Hassan To Watch KGF 2 Movie

ಈ ವೇಳೆ ರಾಕಿಂಗ್ ಸ್ಟಾರ್ ಯಶ್ ತಂದೆ ಅರುಣ್ ಕುಮಾರ್ ಕೂಡ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಹಾಸನದಲ್ಲಿರುವ ಎಸ್‌ ಬಿಜಿ ಥಿಯೇಟರ್‌ಗೆ ಆತ್ಮೀಯರೊಂದಿಗೆ ವಿಸಿಟ್ ಮಾಡಿದ್ದರು. ಕೆಲ ಕಾಲ 'ಕೆಜಿಎಫ್ 2' ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಿ, ಬಳಿಕ ತೆರಳಿದ್ದಾರೆ.

Yash Father Arun Kumar Visited SBG Theater In Hassan To Watch KGF 2 Movie

ಚಿಕ್ಕಮಗಳೂರಿನಲ್ಲಿ 'ಕೆಜಿಎಫ್ 2' ಪ್ರದರ್ಶನ ಆರಂಭ

ನಿನ್ನೆಯಿಂದಲೂ ಚಿಕ್ಕಮಗಳೂರಿನ ನಾಗಲಕ್ಷ್ಮಿ ಥಿಯೇಟರ್‌ನಲ್ಲಿ 'ಕೆಜಿಎಫ್ 2' ಸಿನಿಮಾ ಪ್ರದರ್ಶನ ಮಾಡಬೇಕು ಎಂದು ಯಶ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ನಿನ್ನೆ (ಏಪ್ರಿಲ್ 13) 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಲ್ಲ ಎಂದು ಚಿತ್ರಮಂದಿರದ ಮಾಲೀಕರು ಹೇಳಿದ್ದರು. ಈ ಸಂಬಂಧ ಯಶ್ ಪ್ಯಾನ್ಸ್ ಪ್ರತಿಭಟನೆ ಮಾಡಿದ್ದರು.

ಚಿತ್ರಮಂದಿರದ ಮುಂಭಾಗ ಪ್ರತಿಭಟನೆ ನಡೆಯುತ್ತಿದ್ದಂತೆ, ಸಿ.ಟಿ.ರವಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಯಶ್ ಹಾಗೂ ವಿತರಕರೊಂದಿಗೆ ಜೊತೆ ಮಾತನಾಡುವ ಭರವಸೆ ನೀಡಿದ್ದರು. ಅದರಂತೆ ನಿನ್ನೆ (ಏಪ್ರಿಲ್ 13) ತಡರಾತ್ರಿ ಚಿತ್ರದ ರಿಲೀಸ್‌ಗೆ ಅನುಮತಿ ನೀಡಿದ್ದರು. ಬಳಿಕ ಚಿತ್ರಮಂದಿರವನ್ನು ಅಭಿಮಾನಿಗಳು ಸಿಂಗರಗೊಳಿಸಿದ್ದರು. ಬೆಳಗ್ಗೆಯಿಂದಲೇ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಸಿನಿಮಾ ನೋಡುತ್ತಿದ್ದಾರೆ.

More from Filmibeat

English summary
Yash Father Arun Kumar Visited SBG Theater In Hassan To Watch KGF 2 Movie. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X