ಪ್ರಜ್ವಲ್ ದೇವರಾಜ್‌ಗೆ ದೆವ್ವಯಿದೆ ಎಂದು ಎಚ್ಚರಿಕೆ ಕೊಟ್ಟಿದ್ದ ಯಶ್; 'ರಾಕ್ಷಸ' ಹೇಳಿದ ಘಟನೆಯೇನು?
ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸಿರುವ 'ರಾಕ್ಷಸ' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂಬಂಧ ಫಿಲ್ಮಿಬೀಟ್ ಕನ್ನಡ ತಂಡದ ಜೊತೆ ಗೋವಾಗೆ ದೆವ್ವ ಹುಡುಕುವುದಕ್ಕೆ ಹೋಗಿದ್ದರು. ಗೋವಾದಲ್ಲಿ ದೆವ್ವಗಳು ಇರುವ ಜಾಗವೊಂದಕ್ಕೆ ಕರೆದುಕೊಂಡಿ ಹೋಗಿದ್ದರು. ಅಲ್ಲಿನ ತ್ರೀ ಕಿಂಗ್ಸ್ ಚಾಪೆಲ್ ಚರ್ಚೆ ಇರುವ ಸ್ಥಳಕ್ಕೆ ಮಧ್ಯರಾತ್ರಿ ಎಂಟ್ರಿ ಕೊಟ್ಟಿದ್ದಾರೆ.
ಅಷ್ಟಕ್ಕೂ ದೆವ್ವಗಳನ್ನು ಹುಡುಕಲು ಹೋಗಿದ್ದಕ್ಕೆ ಕಾರಣವಿದೆ. ಪ್ರಜ್ವಲ್ ನಟಿಸಿರುವ ಸಿನಿಮಾ 'ರಾಕ್ಷಸ' ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾ ಕೂಡ ದೆವ್ವ, ಸಸ್ಪೆನ್ಸ್, ಥ್ರಿಲ್ಲರ್ ಹಿನ್ನೆಲೆಯನ್ನು ಹೊಂದಿದೆ. ಹೀಗಾಗಿ ಗೋವಾದಲ್ಲಿ ದೆವ್ವಗಳನ್ನು ಹುಡುಕಾಡುವುದಕ್ಕೆ ಮುಂದಾಗಿದ್ದರು. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ದೆವ್ವದ ಬಗ್ಗೆ ಎಚ್ಚರಿಸಿದ್ದ ಘಟನೆಯೊಂದನ್ನು ಪ್ರಜ್ವಲ್ ದೇವರಾಜ್ ನೆನಪಿಸಿಕೊಂಡಿದ್ದಾರೆ.

ಪ್ರಜ್ವಲ್ ದೇವರಾಜ್ ಒಮ್ಮೆ 'ಭುಜಂಗ' ಅನ್ನುವ ಸಿನಿಮಾದ ಶೂಟಿಂಗ್ ಮಾಡುತ್ತಿದ್ದರು. ಗಗನ ಚುಕ್ಕಿ ಭರ ಚುಕ್ಕಿ ಎಂಬಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಹೀಗಾಗಿ ಅಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಈ ವೇಳೆ ಅಲ್ಲಿ ಅವರಿಗೆ ದೆವ್ವದ ಅನುಭವ ಆಗಿತ್ತು. ಆದರೆ, ಅದಕ್ಕೂ ಮುನ್ನ ಪ್ರಜ್ವಲ್ ದೇವರಾಜ್‌ಗೆ ರಾಕಿಂಗ್ ಸ್ಟಾರ್ ಯಶ್ ಈ ಬಗ್ಗೆ ಎಚ್ಚರಿಕೆ ನೀಡಿದ್ದರಂತೆ. ದೆವ್ವದ ಬಗ್ಗೆ ಯಶ್ ಏನು ಹೇಳಿದ್ದರು? ಆ ಘಟನೆ ಏನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ..
"ಭುಜಂಗಗೆ ಗಗನ ಚುಕ್ಕಿ ಭರ ಚುಕ್ಕಿಯಲ್ಲಿ ಶೂಟಿಂಗ್ ಮಾಡುತ್ತಿದ್ವಿ. ಅಲ್ಲಿ ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದೆ. ಆಗ ಯಶ್ ಅವರು ಯಾವುದೋ ಸಿನಿಮಾವನ್ನು ಆಗಷ್ಟೇ ಮಾಡಿದ್ದರು. ನಾನು ಅವರಿಗೆ ಫೋನ್ ಮಾಡಿದೆ. ಮಗ ಹೇಗಿದೆ? ಇಲ್ಲಿ ಆರಾಮಾಗಿ ಇರಬಹುದಾ? ಅಂತ ಹೇಳಿದ್ದೆ. ಹೂ ಕಣೀ ಯಾರಾದರೂ ಒಬ್ಬರನ್ನು ಜೊತೆ ಮಲಗಿಸಿಕೋ ಅಂತ ಹೇಳಿದ್ದರು. ನಾನು ಯಾಕೆ ಹೀಗೆ ಹೇಳಿದ್ರು. ಸರಿ ಆಯ್ತು ನೋಡೋಣ ಅಂತ ಸುಮ್ಮನಾದೆ." ಎಂದು ಪ್ರಜ್ವಲ್ ದೇವರಾಜ್ ಫಿಲ್ಮಿಬೀಟ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಯಶ್ ನೇರವಾಗಿ ದೆವ್ವದ ಇದೆ ಎಂದು ಹೇಳಿರಲಿಲ್ಲ. ನಿಮ್ಮ ಹುಡುಗರನ್ನು ಕರೆದು ಮಲಗು. ಒಮ್ಮನೇ ಮಲಗಬೇಡ ಎಂದು ಹೇಳಿದ್ದರು. ಬಹುಶ: ಯಶ್‌ಗೂ ಅದೇ ಅನುಭವ ಆಗಿರಬಹುದು. ಅವರು ಹೇಳಿದಂತೆ ಮಾಡಿದ್ದರು. ಆದರೂ ಅವರಿಗೆ ದೆವ್ವದ ಅನುಭವ ಆಗಿತ್ತು. ಗಗನ ಚುಕ್ಕಿ ಭರ ಚುಕ್ಕಿ ಜಲಪಾತದ ಸಮೀಪದ ಗೆಸ್ಟ್ ಹೌಸ್‌ನಲ್ಲಿ ಅಂತಹದ್ದೇನಾಯ್ತು? ಅಂತ ಪ್ರಜ್ವಲ್ ಅವರೇ ವಿವರಿಸಿದ್ದಾರೆ.
"ನಮ್ಮ ಹುಡುಗ ಇನ್ನೊಂದು ಬೆಡ್‌ನಲ್ಲಿ ಮಲಗಿದ್ದ. ಬೆಡ್‌ಶೀಟ್ ಹೊದ್ದುಕೊಂಡು ಮಲಗಿದ್ದೀನಿ, ಯಾರೋ ಬೆಡ್‌ಶೀಟ್ ಅನ್ನು ಎಳೆಯುತ್ತಿದ್ದಾರೆ. ನಾನು ನಮ್ಮ ಹುಡುಗನಿಗೆ ಕರೆಯುತ್ತಿದ್ದೇನೆ. ಅವನು ಎದ್ದೇಳುತ್ತಿಲ್ಲ. ಜೋರಾಗಿ ಕರೆದ ಮೇಲೆ ಎದ್ದು ಏನಾಯ್ತು ಅಂದ? ಏನಿಲ್ಲ ಮಲ್ಕೋ ಅಂತ ಹೇಳಿ ಮಲಗಿದೆ. ಮತ್ತೆ ಬೆಡ್‌ಶೀಟ್ ಎಳೀತಾ ಇದೆ. ಮತ್ತೆ ಏಯ್ ಅಂತ ಕೂಗಿದೆ. ನಮ್ಮ ಹುಡುಗ ಮತ್ತೆ ಏನಾಯ್ತು? ಅಂತ ಕೇಳಿದ. ಏನಿಲ್ಲ ಮಗ ಮಲ್ಕೋ ಕೆಟ್ಟ ಕನಸು ಅಂತ ಮಲಗಿಕೊಂಡೆ." ಎಂದು ಪ್ರಜ್ವಲ್ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
ಹಾಗೇ ದೆವ್ವದ ಅನುಭವ ಆದವರಿಗೆ ಗೊತ್ತಿರುತ್ತೆ ಎಂದು ಹೇಳಿದ್ದಾರೆ. "ಕೆಲವರಿಗೆ ಎಕ್ಸ್‌ಪೀರಿಯನ್ಸ್ ಆದವರಿಗೆ ಗೊತ್ತಾಗುತ್ತೆ. ಕೆಲವರು ನಗುತ್ತಾರೆ. ಕೆಲವರು ನಂಬುತ್ತಾರೆ. ಕೆಲವರು ನಂಬಲ್ಲ. ಈ ವಿಷಯವನ್ನು ನಾನು ಎಲ್ಲೂ ಹೇಳಿರಲಿಲ್ಲ. ಇದೇ ಮೊದಲ ಬಾರಿ ಹೇಳುತ್ತಿದ್ದೇನೆ." ಎಂದಿದ್ದಾರೆ.


Click it and Unblock the Notifications











