'ಶೋಧನೆ ನಡೆಸದ ವ್ಯಕ್ತಿ' ಎಂದು ನೋಟೀಸ್ ನೀಡಿದ್ದ ಐಟಿಗೆ ಹಿನ್ನಡೆ; ಯಶ್‌ಗೆ ಹೈಕೋರ್ಟ್ ರಿಲೀಫ್
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಕೆಲಸದಲ್ಲಿ ಯಶ್ ಮುಂಬೈ ಹಾಗೂ ಬೆಂಗಳೂರು ಅಂತ ಓಡಾಡಿಕೊಂಡಿದ್ದಾರೆ. ಈ ಮಧ್ಯೆ ಅವರಿಗೂ ಹಾಗೂ ಅಭಿಮಾನಿಗಳಿಗೂ ಒಂದು ಬಿಗ್ ರಿಲೀಫ್ ಸಿಕ್ಕಿದೆ. ಈ ಹಿಂದೆ ಅವರ ವ್ಯಾವಹಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿತ್ತು. ಈ ನೋಟೀಸ್ ಅನ್ನು ಪ್ರಶ್ನಿಸಿ ಯಶ್ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಆ ಕೇಸ್ ಇತ್ಯಾರ್ಥ ಆಗಿದೆ.
2019ರಲ್ಲಿ 'ಕೆಜಿಎಫ್' ಸಿನಿಮಾ ಬಿಡುಗಡೆಯಾದ ಸಮಯದಲ್ಲಿ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮನೆಯನ್ನು ಶೋಧಿಸಿದ ಬಳಿಕವೂ ಯಶ್‌ಗೆ 'ಶೋಧನೆ ನಡೆಸದ ವ್ಯಕ್ತಿ' ಎಂದು ಆದಾಯ ತೆರಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕಳೆದ ಕೆಲವು ವರ್ಷಗಳಿಂದ ಈ ಕೇಸ್ ನಡೆಯುತ್ತಿತ್ತು. ಈಗ ಯಶ್ ಪ್ರಶ್ನೆ ಮಾಡಿದ್ದ ಪ್ರಕರಣದಲ್ಲಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಆದಾಯ ಇಲಾಖೆ ನೀಡಿದ ನೋಟೀಸ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಯಶ್‌ಗೆ ಈ ನೋಟೀಸ್‌ನಿಂದ ರಿಲೀಫ್ ಸಿಕ್ಕಂತೆ ಆಗಿದೆ. ಯಶ್ ಹಾಗೂ ಐಟಿ ಇಲಾಖೆ ನಡುವಿನ ನೋಟೀಸ್ ಪ್ರಕರಣವೇನು? ತಿಳಿಯುವುದಕ್ಕೆ ಮುಂದೆ ಓದಿ.
ಏನಿದು ನೋಟೀಸ್ ಪ್ರಕರಣ?
2013-14 ರಿಂದ 2018-19ರ ವರೆಗೆ ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ಗೆ ಸಂಬಂಧಿಸಿದ ವ್ಯಾವಹಾರಗಳ ಬಗ್ಗೆ ಐಟಿ ಇಲಾಖೆ ತನಿಖೆ ಕೈಗೊಂಡಿತ್ತು. ಈ ವೇಳೆ ಯಶ್ ಅದರದ್ದೇ ಇನ್ನೊಂದು ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್ ಜೊತೆ ಗುರುತಿಸಿಕೊಂಡಿದ್ದರು. ಆ ವೇಳೆ ಯಶ್ ಹೊಂಬಾಳೆಗಾಗಿ 'ಕೆಜಿಎಫ್' ಸಿನಿಮಾ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಅಂದು ಯಶ್ ವಾಸಿಸುತ್ತಿದ್ದ ಹೊಸಕರೆಹಳ್ಳೀ ಮನೆ, ತಾಜ್ ವೆಸ್ಟ್ ಎಂಡ್ ರೂಮ್ ಅನ್ನು ಶೋಧಿಸಿದ್ದರು. ಈ ಸಂಬಂಧ 2021ರಲ್ಲಿ ಐಟಿ ಅಧಿಕಾರಿಗಳು ಮತ್ತೆ ನೋಟೀಸ್ ನೀಡಿದ್ದರು. ಇದನ್ನು ಪ್ರಶ್ನೆ ಮಾಡಿ ರಾಕಿಂಗ್ ಸ್ಟಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
'ಶೋಧನೆ ನಡೆಸದ ವ್ಯಕ್ತಿ'
ಐಟಿ ಅಧಿಕಾರಿಗಳು ಮನೆ ಹಾಗೂ ತಾಜ್ ವೆಸ್ಟ್ ಎಂಡ್ ರೂಮ್ ಮೇಲೆ ರೇಡ್ ಮಾಡಿದ ನಂತರವೂ 'ಶೋಧನೆ ನಡೆಸದ ವ್ಯಕ್ತಿ' ಎಂದು ಪರಿಗಣಿಸಿದ್ದರು. ಬಳಿಕ ಮತ್ತೆ ಯಶ್‌ಗೆ ನೋಟೀಸ್ ನೀಡಿದ್ದರು. ಇದನ್ನು ಪ್ರಶ್ನೆ ಮಾಡಿ ಯಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗಾಗಲೇ ತಮ್ಮ ನಿವಾಸವನ್ನು ಶೋಧನೆ ಮಾಡಲಾಗಿದೆ. ಹೀಗಿದ್ದರೂ 153ಸಿ ನೋಟಿಸ್ ನೀಡಿದ್ದು ಯಾಕೆ? ಎಂದು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ನ್ಯಾಯಾಧೀಶರು ಈಗ ರದ್ದುಗೊಳಿಸಿದ್ದಾರೆ.

ಐಟಿ ವಾದವೇನಾಗಿತ್ತು?
ಈ ಹಿಂದೆ ಶೋಧ ಮಾಡುವ ವೇಳೆ ಹೊಂಬಾಳೆ ಕನ್‌ಸ್ಟ್ರಕ್ಷನ್ಸ್‌ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತ ಯಶ್ ಮನೆ ಹಾಗೂ ಹೋಟೆಲ್ ರೂಮ್ ಅನ್ನು ಶೋಧ ಮಾಡಲಾಗಿತ್ತು. ಈ ಕಾರಣಕ್ಕೆ ಯಶ್ 'ಶೋಧನೆ ನಡೆಸದ ವ್ಯಕ್ತಿ' ಎಂದು ನೋಟೀಸ್ ನೀಡಿದ್ದಾಗಿ ಐಟಿ ಇಲಾಖೆ ಪ್ರತಿವಾದ ಮಾಡಿತ್ತು. ಎರಡೂ ಕಡೆಯ ವಾದ-ಪ್ರತಿವಾದವನ್ನು ಪರಿಗಣಿಸಿ, ಐಟಿ ಇಲಾಖೆ ನೀಡಿದ್ದ ನೋಟೀಸ್ ಅನ್ನು ರದ್ದು ಮಾಡಲಾಗಿದೆ.
'ಟಾಕ್ಸಿಕ್'-ರಾಮಾಯಣದಲ್ಲಿ ಬ್ಯುಸಿ
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಇನ್ನೊಂದು ಕಡೆ ದುಬಾರಿ ಸಿನಿಮಾ 'ರಾಮಾಯಣ'ದಲ್ಲಿ ರಾವಣನ ಪಾತ್ರ ಮಾಡುತ್ತಿದ್ದು, ಅದರಲ್ಲೂ ಬ್ಯುಸಿಯಾಗಿದ್ದಾರೆ. ಇನ್ನೊಂದು ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, 'ಟಾಕ್ಸಿಕ್' ಗ್ಲಿಂಪ್ಸ್ ಬಿಡುವ ಸಾಧ್ಯತೆಯಿದೆ.


Click it and Unblock the Notifications











