ಈ ಬಾರಿನೂ ಫ್ಯಾನ್ಸ್‌ಗೆ ದರ್ಶನ ಭಾಗ್ಯವಿಲ್ಲ; ಬರ್ತ್‌ಡೇ ದಿನ ಯಶ್ ಭೇಟಿಯಿಲ್ಲ.. ಎಲ್ಲದಕ್ಕೂ ಕಾರಣ 'ಟಾಕ್ಸಿಕ್'

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಹಲವು ವರ್ಷಗಳಾಗಿವೆ. 'ಕೆಜಿಎಫ್' ಸಿನಿಮಾದ ಬಳಿಕ ಯಶ್ ಬರ್ತ್‌ಡೇ ದಿನ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದು ವಿರಳ. ಹೀಗಾಗಿ ಈ ಬಾರಿಯಾದರೂ ರಾಕಿ ಭಾಯ್ ತಮ್ಮ ಫ್ಯಾನ್ಸ್ ಅನ್ನು ಮೀಟ್‌ ಮಾಡಬಹುದು. ಅದರು ತಂದಿದ್ದ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಬಹುದೆಂಬ ನಿರೀಕ್ಷೆಯಿತ್ತು.

ಯಾಕಂದ್ರೆ, ಯಶ್ ನಟಿಸುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಬಿಡುಗಡೆಗೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿವೆ. ಹೀಗಾಗಿ ಅವರ ಅಭಿಮಾನಿಗಳನ್ನು ಭೇಟಿ ಆಗಿಯೇ ಆಗುತ್ತಾರೆಂದು ಎದುರು ನೋಡಲಾಗುತ್ತಿತ್ತು. ಇನ್ನೊಂದು ಕಡೆ ಬರ್ತ್‌ಡೇಗೂ ಮುನ್ನ 'ಟಾಕ್ಸಿಕ್' ಸಿನಿಮಾದ ನಾಯಕಿಯರ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿತ್ತು.

Yash has informed fans that he will not be available on his birthday due to occupied with of Toxic

ಇಷ್ಟೆಲ್ಲ ಸಂಭ್ರಮ ನಡೆಯುತ್ತಿರುವಾಗ ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಅನ್ನು ಭೇಟಿ ಮಾಡಿಯೇ ಮಾಡುತ್ತೇವೆಂದು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ, ಯಶ್ ತಮ್ಮ ಅಭಿಮಾನಿಗಳಿಗೆ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಬಾರಿ ಹುಟ್ಟುಹಬ್ಬದಂದೂ ತಮ್ಮನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲವೆಂದು ಮೆಸೇಜ್ ತಲುಪಿಸಿದ್ದಾರೆ. ಅಷ್ಟಕ್ಕೂ ಯಶ್ ಈ ನಿರ್ಧಾರಕ್ಕೆ ಕಾರಣವೇನು? ತಿಳಿಯುವುದಕ್ಕೆ ಮುಂದೆ ಓದಿ.

ಯಶ್ ಇನ್‌ಸ್ಟಾಗ್ರಾಂ ಸಂದೇಶ

ನಾಳೆ (ಜನವರಿ 8) ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 40ನೇ ವರ್ಷಕ್ಕೆ ಕಾಲಿಡುತ್ತಿರುವ ರಾಕಿ ಭಾಯ್ ಬರ್ತ್‌ಡೇ ಸಂಭ್ರಮದಲ್ಲಿ ಇದ್ದಾರೆ. ಒಂದ್ಕಡೆ 40ನೇ ಹುಟ್ಟುಹಬ್ಬ. ಇನ್ನೊಂದು ಕಡೆ 'ಟಾಕ್ಸಿಕ್' ರಿಲೀಸ್ ಈ ಎರಡೂ ಸಂಭ್ರಮಗಳ ಹಿನ್ನೆಲೆಯಲ್ಲಿ ಹಲವು ವರ್ಷಗಳ ಬಳಿಕ ಯಶ್ ಹಾಗೂ ಅಭಿಮಾನಿಗಳ ಮಹಾಸಂಗಮ ಆಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಆ ಲೆಕ್ಕಾಚಾರವೆಲ್ಲವೂ ತಲೆ ಕೆಳಗಾಗಿದೆ. ಯಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿ ಮೂಲಕ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲವೆಂದು ಹೇಳಿ ನಿರಾಸೆ ಮೂಡಿಸಿದ್ದಾರೆ.

ಇನ್‌ಸ್ಟಾ ಸ್ಟೋರಿಯಲ್ಲಿ ಏನಿದೆ?

"ಆತ್ಮೀಯ ಸ್ನೇಹಿತರೇ, ನೀವು ನನ್ನನ್ನು ಭೇಟಿ ಮಾಡುವುದಕ್ಕೆ ಹಲವು ವರ್ಷಗಳಿಂದ ಕಾಯುತ್ತಿರೋದು ನನಗೆ ಗೊತ್ತಿದೆ. ದಯವಿಟ್ಟು ನನ್ನನ್ನು ನಂಬಿ. ನಿಮ್ಮಷ್ಟೇ ನಾನು ಕೂಡ ಹಲವು ವರ್ಷಗಳಿಂದ ಇದಕ್ಕಾಗಿಯೇ ಕಾಯುತ್ತಿದ್ದೇನೆ. ಈ ವರ್ಷದ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಬೇಕೆಂದು ಬಯಸಿದ್ದೆ. ಆದರೆ, ನಾನು ಟಾಕ್ಸಿಕ್ ಸಿನಿಮಾವನ್ನು ಸರಿಯಾದ ಸಮಯಕ್ಕೆ ಅಂದರೆ ಮಾರ್ಚ್ 19, 2026ಕ್ಕೆ ಥಿಯೇಟರ್‌ಗೆ ತರಬೇಕಿದೆ. ಅದಕ್ಕಾಗಿ ಸಿನಿಮಾದ ಕೆಲಸವನ್ನು ಮುಗಿಸಲೇಬೇಕಿದೆ. ಅದಕ್ಕಾಗಿ ನಾನು ಈ ಬಾರಿ ನಿಮ್ಮನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ." ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಹೇಳಿಕೊಂಡಿದ್ದಾರೆ.

ಕೊಟ್ಟ ಭರವಸೆ ಏನು?

ಈ ಹುಟ್ಟುಹಬ್ಬದಂದೂ ಯಶ್ ಅವರ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಮಾತು ಕೊಟ್ಟಿದ್ದು, ಆದಷ್ಟು ಬೇಗ ಇನ್ನೂ ದೊಡ್ಡ ಮಟ್ಟದಲ್ಲಿ ಭೇಟಿಯಾಗೋಣ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಹುಟ್ಟುಹಬ್ಬದಂದು ನಿಮ್ಮೆಲ್ಲರ ವಿಶ್‌ಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಯಶ್ ಹೇಳಿದ್ದಾರೆ.

ಬರ್ತ್‌ಡೇಗೆ 'ಟಾಕ್ಸಿಕ್' ಟೀಸರ್?

ರಾಕಿಂಗ್ ಸ್ಟಾರ್ ಯಶ್ ಬರ್ತ್‌ಡೇ ಅಭಿಮಾನಿಗಳಿಗೆ ಸರ್ಪ್ರೈಸ್ ಕಾದಿದೆ. ಮೂಲಗಳ ಪ್ರಕಾರ ನಾಳೆ (ಜನವರಿ 8)ರಂದು ರಾಕಿ ಭಾಯ್ ಅವತಾರದಿಂದ ಹೊರಬರುತ್ತಿದ್ದಾರೆ. ಟಾಕ್ಸಿಕ್ ಲುಕ್‌ನಲ್ಲಿ ಯಶ್‌ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಅಭಿಮಾನಿಗಳಿಗಾಗಿ ಯಶ್ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಟೀಸರ್ ರಿಲೀಸ್ ಮಾಡಲಾಗುತ್ತಿದೆ ಎನ್ನಲಾಗಿದೆ.

More from Filmibeat

English summary
Yash has informed fans that he will not be available on his birthday due to occupied with of Toxic.
Read more about: yash toxic birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X