»   » 'ಅನಿಲ್-ಉದಯ್' ಕುಟುಂಬಕ್ಕೆ ನೆರವಾದ 'ಯಶೋಮಾರ್ಗ'

'ಅನಿಲ್-ಉದಯ್' ಕುಟುಂಬಕ್ಕೆ ನೆರವಾದ 'ಯಶೋಮಾರ್ಗ'

Posted By:
Subscribe to Filmibeat Kannada

'ಮಾಸ್ತಿಗುಡಿ' ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುರಂತ ಸಾವುಗೀಡಾಗಿದ್ದ ಖಳನಟ ಅನಿಲ್ ಹಾಗೂ ಉದಯ್ ಕುಟುಂಬಕ್ಕೆ, ಈಗ ರಾಕಿಂಗ್ ಸ್ಟಾರ್ ಯಶ್ ನೆರವಾಗಿದ್ದಾರೆ.

'ಯಶೋಮಾರ್ಗ ಫೌಂಡೇಶನ್' ಮೂಲಕ ರೈತರ, ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ನಟ ಯಶ್, ಈಗ ತಮ್ಮ ಸಿನಿಮಾಗಳಲ್ಲಿ ಸಹಕಲಾವಿದರಾಗಿ ಅಭಿನಯಿಸಿದ್ದ ಅನಿಲ್ ಹಾಗೂ ಉದಯ್ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಿದ್ದಾರೆ.

ನವೆಂಬರ್ 7ರಂದು, ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ, ಚಾಪರ್ ನಿಂದ ನೀರಿಗೆ ಹಾರಿದ್ದ ಅನಿಲ್ ಹಾಗೂ ಉದಯ್ ವಿಧಿವಶರಾಗಿದ್ದರು. ಮುಂದೆ ಓದಿ....['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]

'ಅನಿಲ್'-'ಉದಯ್' ಕುಟುಂಬಕ್ಕೆ ಯಶ್ ಸಹಾಯ

ದುನಿಯಾ ವಿಜಯ್ ಅಭಿನಯದ 'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಅನಿಲ್-ಉದಯ್ ಸಾವುಗೀಡಾಗಿದ್ದರು. ತದ ನಂತರ ಕನ್ನಡ ಚಿತ್ರರಂಗದ ಹಲವರು ಈ ಎರಡು ಕುಟುಂಬಗಳಿಗೆ ನೆರವಾಗಿದ್ದರು. ಈಗ ರಾಕಿಂಗ್ ಸ್ಟಾರ್ ಯಶ್ ಕೂಡ 'ಮಾಸ್ತಿಗುಡಿ' ಚಿತ್ರದ ಖಳನಟರ ಕುಟುಂಬಗಳ ಬೆನ್ನಿಗೆ ನಿಂತಿದ್ದಾರೆ.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

'ಯಶೋಮಾರ್ಗ'ದಿಂದ ನೆರವು

ರಾಕಿಂಗ್ ಸ್ಟಾರ್ ಯಶ್ ಸಾರಥ್ಯದಲ್ಲಿ ಸ್ಥಾಪನೆಯಾಗಿರುವ 'ಯಶೋಮಾರ್ಗ ಫೌಂಡೇಶನ್' ಮೂಲಕ ಅನಿಲ್ ಹಾಗೂ ಉದಯ್ ಅವರ ಕುಟುಂಬಗಳಿಗೆ ಒಟ್ಟು 6.5 ಲಕ್ಷ ರೂಪಾಯಿಯ ಸಹಾಯ ಧನ ನೀಡಿದ್ದಾರೆ.

ಅನಿಲ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ

ದಿವಂಗತ ಅನಿಲ್ ಅವರಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಹೀಗಾಗಿ, 'ಯಶೋಮಾರ್ಗ ಫೌಂಡೇಶನ್' ಮೂಲಕ, ಅನಿಲ್ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 5 ಲಕ್ಷ ರೂಪಾಯಿಯ ಬಾಂಡ್ ನೀಡಿದ್ದಾರೆ.[ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

ಉದಯ್ ತಾಯಿಗಾಗಿ 1.5 ಲಕ್ಷ

ಉದಯ್ ಅವರ ತಾಯಿಗೆ 'ಯಶೋಮಾರ್ಗ ಫೌಂಡೇಶನ್' ಮೂಲಕ 1.5 ಲಕ್ಷ ರೂಪಾಯಿಯ ಚೆಕ್ ನೀಡಲಾಗಿದೆ.[ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]

ಯಶ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಅನಿಲ್

ಯಶ್ ಅವರ ಸಿನಿಮಾಗಳಲ್ಲಿ ಖಳನಟ ಅನಿಲ್ ಕಾಣಿಸಿಕೊಂಡಿದ್ದರು. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರಗಳಲ್ಲಿ ಅನಿಲ್ ಅಭಿನಯಿಸಿದ್ದರು.

English summary
kannada Actor Yash help to anil and uday family who was dead during Mastigudi shooting. Yash Deposits 5lac in d Name of 2 Children of Late Anil towards their Education & 1.5lac to Uday's Mother Through his YashoMarga Foundation

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada