ಯಶ್ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ ಬಾಲಿವುಡ್ ತಾರೆ ರವೀನಾ ಟಂಡನ್
ಇತ್ತೀಚೆಗಷ್ಟೇ ಕೆಜಿಎಫ್ 2 ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ತಾರೆ ರವೀನಾ ಟಂಡನ್, ನಟ ಯಶ್ ಅವರನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಅವರೊಬ್ಬ ಅದ್ಭುತ ವ್ಯಕ್ತಿ ಎಂದು ಕೊಂಡಾಡಿದ್ದಾರೆ.
Recommended Video
ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ ಚಾಪ್ಟರ್ 2'ರಲ್ಲಿ ಸಂಜಯ್ ದತ್ ಜತೆಗೂಡಿ ಮತ್ತೆ ಅಭಿನಯಿಸಿದ್ದು ಮತ್ತು ಯಶ್ ಜತೆ ಕೆಲಸ ಮಾಡಿದ ಅನುಭವಗಳನ್ನು ರವೀನಾ ಟಂಡನ್ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ನಟಿಸಿದ್ದು ತಮ್ಮ ಅಪೂರ್ವ ಅವಕಾಶಗಳಲ್ಲಿ ಒಂದು. ಆ ಅನುಭವ ಬಹಳ ಹಿತಕರವಾಗಿತ್ತು ಎಂದು ತಿಳಿಸಿದ್ದಾರೆ. ರವೀನಾ ಟಂಡನ್ 1999ರಲ್ಲಿ 'ಉಪೇಂದ್ರ' ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಬಂದಿದ್ದರು. ಈಗ 21 ವರ್ಷದ ಬಳಿಕ ಕೆಜಿಎಫ್ 2 ಮೂಲಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ.

ಯಶ್ ಅದ್ಭುತ ವ್ಯಕ್ತಿ
'ಯಶ್ ಒಬ್ಬ ಅದ್ಭುತ ವ್ಯಕ್ತಿ. ಅವರು ಸೆಟ್‌ನಲ್ಲಿ ಪ್ರತಿಯೊಬ್ಬರೊಂದಿಗೂ ಬಹಳ ಆತ್ಮೀಯವಾಗಿ ವರ್ತಿಸುತ್ತಾರೆ. ಅವರೊಂದಿಗೆ ನಟಿಸಿದ್ದು ಬಹಳ ವಿಶಿಷ್ಟ ಅನುಭವ ನೀಡಿದೆ. ಇಡೀ ಚಿತ್ರತಂಡ ಹಿತಕರ ಅನುಭವ ನೀಡಿತು' ರವೀನಾ ಮೆಚ್ಚಿಕೊಂಡಿದ್ದಾರೆ.

ನನ್ನ ಶೂಟಿಂಗ್ ಬೇಗನೆ ಮುಗಿಯಿತು
'ಅದೃಷ್ಟವಶಾತ್ ಕೆಜಿಎಫ್ ಚಿತ್ರದಲ್ಲಿನ ನನ್ನ ಭಾಗದ ಚಿತ್ರೀಕರಣವು ಕೊರೊನಾ ವೈರಸ್ ಸಂಕಷ್ಟ ಎದುರಾಗುವ ಹಾಗೂ ಲಾಕ್‌ಡೌನ್‌ಗೂ ಮುನ್ನ ಫೆಬ್ರವರಿಯಲ್ಲಿಯೇ ಮುಗಿದು ಹೋಯಿತು. ನಾವು ಸಿನಿಮಾ ಚಿತ್ರೀಕರಣವನ್ನು ಮುಗಿಸಿದ್ದೇವೆ' ಎಂದು ರವೀನಾ, ಬೇಗನೆ ಚಿತ್ರೀಕರಣ ಮುಗಿಸಿದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಬಹಳ ಸಸ್ಪೆನ್ಸ್ ಇದೆ
'ಕೆಜಿಎಫ್ 2' ಚಿತ್ರೀಕರಣ ಚೆನ್ನಾಗಿತ್ತು. ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ. ಅದು ಗ್ರೇ ಶೇಡ್ (ನೆಗೆಟಿವ್) ಹೊಂದಿದೆ. ಚಿತ್ರದಲ್ಲಿ ಬಹಳಷ್ಟು ಸಸ್ಪೆನ್ಸ್‌ಗಳಿವೆ. ನಾನು ಅದನ್ನು ನಿಭಾಯಿಸಬಲ್ಲೆನೆ ಎಂಬುದೇ ನನಗೆ ಖಾತರಿ ಇರಲಿಲ್ಲ. ಆದರೆ ಅದು ನಿಜಕ್ಕೂ ವಿಸ್ಮಯಕಾರಿ ಹಾಗೂ ಖುಷಿ ಕೊಡುವ ಪಾತ್ರವಾಗಿತ್ತು' ಎಂದಿದ್ದಾರೆ.

ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆ
ತಮ್ಮ ಪಾತ್ರಕ್ಕೆ ನೆಗೆಟಿವ್ ಛಾಯೆ ಇದೆ ಎಂದರೂ ರವೀನಾ ತಮ್ಮ ಪಾತ್ರದ ಕುರಿತಾದ ಇತರೆ ಮಾಹಿತಿಯನ್ನು ಹಂಚಿಕೊಂಡಿಲ್ಲ. ಅವರು ಚಿತ್ರದಲ್ಲಿ ಪ್ರಧಾನಿ ರಮಿಕಾ ಸೇನ್ ಎಂಬ ಹೆಸರಿನಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಬಹು ನಿರೀಕ್ಷೆಯ ಕೆಜಿಎಫ್ 2 ಅಕ್ಟೋಬರ್ 23ಕ್ಕೆ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.


Click it and Unblock the Notifications











