Toxic-Tabaahi: ಯಶ್-ಕಿಯಾರಾ ಅಡ್ವಾಣಿಯ 'ತಬಾಹಿ' ಸಾಂಗ್ ರಿಲೀಸ್; ಕೇಳಿದವ್ರು ಏನಂದ್ರು?
ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ಜೋಡಿಯ ತಬಾಹಿ ಹಾಡಿನ ಫಸ್ಟ್ ಲುಕ್ ರಿಲೀಸ್ ಆಗುತ್ತಿದ್ದಂತೆ ರಾಕಿ ಭಾಯ್ ಫ್ಯಾನ್ಸ್ ಥ್ರಿಲ್ ಆಗಿದ್ದರು. ಈ ರೊಮ್ಯಾಂಟಿಕ್ ಹಾಡನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ನಿರೀಕ್ಷೆಯಂತೆ ಸಾಂಗ್ ರಿಲೀಸ್ ಅಯ್ತು. ಆದರೆ, ಅದು ಕೆಲವರಿಗೆ ಬೇಸರ ತರಿಸಿದೆ.
'ಟಾಕ್ಸಿಕ್'ನ "ತಬಾಹಿ.." ಸಾಂಗ್‌ಗೆ ಬಾಲಿವುಡ್‌ನ ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಟ್ಯೂನ್ ಹಾಕಿದ್ದಾರೆ. ಐದು ಭಾಷೆಗಳಲ್ಲಿ ಹಾಡು ರಿಲೀಸ್ ಆಗಿದ್ದು, ಹಾಡು ಇಷ್ಟ ಆಗಿದೆ. ಕನ್ನಡದಲ್ಲಿ ಈ ರೋಮ್ಯಾಂಟಿಕ್ ಸಾಂಗ್‌ಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಗೀತು ಮೋಹನ್‌ದಾಸ್ ನಟನೆಯ ಈ ಸಿನಿಮಾದ ಮೊದಲ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಹಿಂದಿ, ತಮಿಳು, ಕನ್ನಡದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಇನ್ನು ಹಾಡು ಸಂಗೀತ ಪ್ರಿಯರ ಕಿವಿಗಳಿಗೆ ಇಂಪು ಅನಿಸುತ್ತೆ. ಆದರೆ, ಇದರೊಂದಿಗೆ ವಿಡಿಯೋನೂ ಇದ್ದಿದ್ದರೆ ಚೆನ್ನಾಗಿರುತ್ತೆ ಅನ್ನೋದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಿದ್ದರೆ, ಎಕ್ಸ್ (ಟ್ವಿಟರ್)ನಲ್ಲಿ 'ಟಾಕ್ಸಿಕ್'ನ ಮೊದಲ ಹಾಡಿನ ಬಗ್ಗೆ ಪ್ರತಿಕ್ರಿಯೆ ಹೇಗಿದೆ? ತಬಾಹಿ ಸಾಂಗ್ ನೋಡಿದವರು ಏನಂತಾರೆ? ತಿಳಿಯುವುದಕ್ಕೆ ಮುಂದೆ ಓದಿ.
ಹೆಡ್‌ಫೋನ್ ಹಾಕೊಂಡು ಕೇಳಿ
"ಮೊದಲನೇ ಬಾರಿ ನಾನು ಕೇಳಿದಾಗ ಸಾಮಾನ್ಯವಾದ ಹಾಡನ್ನು ಕೇಳಿದ ಅನುಭವ ಆಯ್ತು. ಎರಡನೇ ಬಾರಿ ಹೆಡ್‌ಫೋನ್ ಹಾಕಿಕೊಂಡು ತಬಾಹಿ ಹಾಡನ್ನು ಕೇಳಿದಾಗ ಅದ್ಭುತ ಸಾಲುಗಳನ್ನು ಕೇಳಿದೆ. ಕಮೆಂಟ್ ಮಾಡುವುದಕ್ಕೂ ಮುನ್ನ ಹೆಡ್‌ಫೋನ್ ಹಾಕಿಕೊಂಡು ಹೇಳಿ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ತಬಾಹಿ ಸಾಂಗ್ ಬೆಂಕಿ
"ಯೂಟ್ಯೂಬ್ ಪ್ರಕಾರ ಕಳೆದ ಒಂದು ಗಂಟೆಯಲ್ಲಿ ಟಾಕ್ಸಿಕ್ ಸಿನಿಮಾದ ತಬಾಹಿ ಸಾಂಗ್ ವೀವ್ಸ್ ಹೀಗಿದೆ. ಹಿಂದಿ ವರ್ಷನ್ ಬೆಂಕಿ, ತಮಿಳು ವರ್ಷನ್ ಕೂಡ ಬೆಂಕಿ, ಮಲಯಾಳಂ, ತೆಲುಗು ಹಾಗೂ ಕನ್ನಡ ವರ್ಷನ್ ಕೂಡ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಉತ್ತರ ಭಾರತದಲ್ಲಿ ಯಶ್ ಕ್ರೇಜ್ ಅಂದರೆ ಇದು. ಕಳೆದ 8 ವರ್ಷಗಳಲ್ಲಿ ಯಶ್ ಅಲ್ಲಿನ ಜನರಿಂದ ಪ್ರೀತಿ ಹಾಗೂ ನಂಬಿಕೆಯನ್ನು ಗಳಿಸಿದ್ದಕ್ಕೆ ಸಾಕ್ಷಿ" ಎಂದು ಇನ್ನೊಬ್ಬರ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಮೆಲೋಡಿ ಕೇಳಿ ಎಂಜಾಯ್ ಮಾಡಿ
"ಲಿರಿಕಲ್ ಸಾಂಗ್ ಅಥವಾ ವಿಡಿಯೋ ಸಾಂಗ್ ಬಿಡುಗಡೆ ಮಾಡದೇ ಇರುವುದಕ್ಕೆ ನೀವು ನಿರಾಶರಾಗಿದ್ದೀರಿ ಅನ್ನೋದು ನನಗೆ ಗೊತ್ತಿದೆ. ಜನರು ಈ ಹಾಡಿನ ವಿಜ್ಯೂವಲ್ ಅನ್ನು ಡಿಕೋಡ್ ಮಾಡಲಿ, ಅಭಿಮಾನಿಗಳೇ ಥಿಯೇರಿಗಳನ್ನು ಸೃಷ್ಟಿಸಿಕೊಳ್ಳಲಿ ಅಂತಾನೇ ಅವರು ಸಾಂಗ್ ಅನ್ನು ಅಷ್ಟೇ ಬಿಟ್ಟಿರುವ ಸಾಧ್ಯತೆಯಿದೆ. ಈಗ ಈ ಮೆಲೋಡಿ ಹಾಡನ್ನು ಕೇಳಿ ಎಂಜಾಯ್ ಮಾಡಿ" ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.
ಎಂತಹ ಅದ್ಭುತ ಸಾಂಗ್
"ಮೊದಲ ಬಾರಿ ಕೇಳಿದಾಗ ಉತ್ತಮ ಅನಿಸಿತು. 2ನೇ ಬಾರಿ ಕೇಳಿದಾಗ ಅತ್ಯುತ್ತಮ ಅನಿಸಿತು. 3ನೇ ಬಾರಿ ಕೇಳಿದಾಗ ಅಡಿಕ್ಟ್ ಆಗಿ ಹೋದೆ. ವಿಶಾಲ್ ಮಿಶ್ರಾ ಅವರಿಂದ ಎಂತಹ ಅದ್ಭುತ ಸಾಂಗ್ ಬಂದಿದೆ. ನಿಜವಾಗಲೂ ಸಖತ್ ಆಗಿದೆ. ತಬಾಹಿ ವಿಡಿಯೋ ಸಾಂಗ್ ಸಂಜೆ ಹೊರ ಬೀಳಲಿದೆ" ಎಂದು ಮತ್ತೊಬ್ಬರ ನೆಟ್ಟಿಗರು ಟಾಕ್ಸಿಕ್ ತಂಡದ ಬೆಂಬಲಕ್ಕೆ ನಿಂತಿದ್ದಾರೆ.
ದ್ವೇಷ್ ಮಾಡೋರೆ ಇಷ್ಟ ಪಡ್ತಾರೆ
"ದ್ವೇಷ ಮಾಡುವವರಿಗಿಂತ ಹೆಚ್ಚು ನೆಗೆಟಿವ್ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ನಾಚಿಕೆ ಆಗ್ಬೇಕು ಕಣ್ರೋ. ವಿಡಿಯೋ ಸಾಂಗ್ ಬಂದ್ಮೇಲೆ ಇವರೇ ಇಷ್ಟ ಪಡುವುದಕ್ಕೆ ಶುರುಮಾಡುತ್ತಾರೆ. ಮತ್ತೊಮ್ಮೆ ಆಡಿಯೋವನ್ನು ಸಾಂಗ್ ಅನ್ನು ಕೇಳಿ." ಎಂದು ನೆಗೆಟಿವ್ ಕಮೆಂಟ್ ಮಾಡುತ್ತಿರುವವರಿಗೆ ತಿರಗೇಟು ಕೊಟ್ಟಿದ್ದಾರೆ.


Click it and Unblock the Notifications











