'ರಾಮಾಯಣ'ದಲ್ಲಿ ರಾವಣನಿಗೆ ಸಿಕ್ಸ್ ಪ್ಯಾಕ್ ಇಲ್ಲ; ಹೇಗೆ ಕಾಣಿಸಬಹುದು ಯಶ್?

'ಕೆಜಿಎಫ್ ಚಾಪ್ಟರ್ 2' ಬಳಿಕ ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳು ಬೇಜಾನ್ ಸದ್ದು ಮಾಡುವುದಕ್ಕೆ ಶುರು ಮಾಡಿವೆ. ಆರಂಭದಲ್ಲಿ 'ಟಾಕ್ಸಿಕ್'ನಿಂದ ಶುರುವಾಗಿದ್ದು, ಈಗ 'ರಾಮಾಯಣ' ಸಿನಿಮಾವರೆಗೂ ಬಂದು ನಿಂತಿದೆ. ಬಾಲಿವುಡ್ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ 'ರಾಮಾಯಣ'ಗೆ ಸಾಕಷ್ಟು ಸುದ್ದಿಗಳು ಹೊರಬಂದಿದ್ದವು. ಅದು ನಿಜನೋ.. ಸುಳ್ಳೋ ಅನ್ನೋ ಗೊಂದಲದಲ್ಲಿರುವಾಗಲೇ ಯಶ್ ಸರ್ಪ್ರೈಸ್ ಕೊಟ್ಟಿದ್ದರು.

ರಾಕಿಂಗ್ ಸ್ಟಾರ್ ಯಶ್ 'ರಾಮಾಯಣ'ದಲ್ಲಿ ರಾವಣನಾಗಿ ನಟಿಸುವ ಬಗ್ಗೆ ಚರ್ಚೆಯಾಗಿತ್ತು. ಆ ಬಗ್ಗೆ ಕ್ಲಾರಿಟಿ ಸಿಗದೇ ಹೋದರೂ, ಯಶ್ ನಿರ್ಮಾಪಕರಲ್ಲಿ ಒಬ್ಬರಾಗಿರುವುದು ಕನ್ಫರ್ಮ್ ಆಗಿದೆ. ಹಾಗಂತ 'ರಾಮಾಯಣ' ಸಿನಿಮಾದಲ್ಲಿ ಯಶ್ ನಟಿಸುವ ಬಗ್ಗೆ ಸ್ಪಷ್ಟನೆ ಸಿಗದೇ ಹೋದರೂ, ರಾವಣ ಪಾತ್ರದ ಬಗ್ಗೆ ಚರ್ಚೆ ಆಗುವುದಂತೂ ನಿಂತಿಲ್ಲ.

Yash may not have a six-pack look in the Ravana role in Ramayana he will gain 15 kg

'ರಾಮಾಯಣ' ಬಾಲಿವುಡ್‌ನ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾ. ಈಗಾಗಲೇ ಶ್ರೀರಾಮನ ಪಾತ್ರಕ್ಕೆ ರಣ್‌ಬೀರ್ ಕಪೂರ್, ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ನಟಿಸುವುದು ಪಕ್ಕ ಅಂತಲೇ ಮಾತಾಡುತ್ತಿದ್ದಾರೆ. ಆದರೆ, ರಾವಣನ ಪಾತ್ರವೇ ಗೊಂದಲದ ಗೂಡಾಗಿದೆ. ಕೆಲವು ದಿನಗಳ ಹಿಂದಷ್ಟೇ ಯಶ್ ಈ ಸಿನಿಮಾದಲ್ಲಿ ಕೇವಲ ನಿರ್ಮಾಪಕನಾಗಿ ಉಳಿದುಕೊಳ್ಳುತ್ತಾರೆ ಎನ್ನಲಾಗಿತ್ತು. ಆದ್ರೀಗ ರಾವಣನ ಪಾತ್ರಕ್ಕೆ ಯಶ್ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಅಸಲಿಗೆ ರಾವಣ ಪಾತ್ರದ ಬಗ್ಗೆ ಹೊಸ ಸುದ್ದಿ ಏನಂದ್ರೆ...

'ರಾಮಾಯಣ'ದಂತಹ ಮೆಗಾ ಸಿನಿಮಾಗೆ ಯಶ್ ಹೂಡಿಕೆ ಮಾಡಿರುವ ಸುದ್ದಿ ಖಚಿತಗೊಳ್ಳುತ್ತಿದ್ದಂತೆ, ಮತ್ತೆ ರಾವಣನ ಬಗ್ಗೆ ಚರ್ಚೆ ಆರಂಭ ಆಗಿದೆ. ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ರಾವಣನ ದೃಷ್ಟಿಕೋನದಿಂದ ಚಿತ್ರೀಕರಿಸಲಾಗುತ್ತಿದೆ ಅನ್ನೋ ಮಾತು ಹೇಳಿ ಬರುತ್ತಿದೆ. ಹೀಗಾಗಿ ರಾವಣನ ಪಾತ್ರದಲ್ಲಿ ಯಶ್ ನಟಿಸುವುದಕ್ಕೆ ಪಕ್ಕಾ ಅಂತ ಗುಲ್ಲೆದ್ದಿದೆ. ಆದರೆ, ಯಶ್ ಹೇಳುವವರೆಗೂ ಇದು ಅಧಿಕೃತ ಅಂತ ಹೇಳುವುದಕ್ಕೆ ಅಸಾಧ್ಯ.

'ರಾಮಾಯಣ'ದ ರಾವಣನ ಪಾತ್ರದ ಬಗ್ಗೆ ಟೈಮ್ಸ್ ನೌ ಮಾಡಿದ ವರದಿ ಮಾಡಿದ್ದು, ಇದರಲ್ಲಿ ಯಶ್ ಸುಮಾರು 15 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳಲಿರುವ ಬಗ್ಗೆ ಮೂಲಗಳು ತಿಳಿಸಿದ್ದಾರೆ ಹೇಳಲಾಗಿದೆ. ಈಗಾಗಲೇ ಯಶ್ ಸಿಕ್ಸ್ ಪ್ಯಾಕ್‌ನಲ್ಲಿ ರಾವಣನ ಅವತಾರ ತಾಳಿರುವ ಫೋಟೊಗಳು (AI ಫೋಟೊ) ವೈರಲ್ ಆಗುತ್ತಿವೆ. ಆದರೆ, ರಾವಣನಿಗೆ ಸಿಕ್ಸ್ ಪ್ಯಾಕ್ ಇರುವುದಿಲ್ಲ. ಹೀಗಾಗಿ ಯಶ್ ತೂಕ ಹೆಚ್ಚಿಸಿಕೊಳ್ಳಲಿದ್ದಾರೆ ಅಂತ ಸುದ್ದಿ ಹಬ್ಬಿದೆ.

Yash may not have a six-pack look in the Ravana role in Ramayana he will gain 15 kg

ಸದ್ಯ ಯಶ್ ಈಗ 'ಟಾಕ್ಸಿಕ್' ಸಿನಿಮಾದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಾಕಿ ಭಾಯ್ ಫಿಟ್ ಆಗಿ ಕಾಣಿಸಿಕೊಳ್ಳಬೇಕಿದೆ. ಈ ಕಾರಣಕ್ಕೆ ಏಕ ಕಾಲಕ್ಕೆ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಎರಡೂ ಸಿನಿಮಾಗಳಲ್ಲಿ ನಟಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಮೊದಲು 'ಟಾಕ್ಸಿಕ್' ಸಿನಿಮಾ ಮುಗಿಸಿ, ಬಳಿಕ 'ರಾಮಾಯಣ' ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗಿದೆ.

ರಾವಣ ಪಾತ್ರಕ್ಕೆ ದಪ್ಪಗಾಗಿರುವ ಯಶ್ ಮತ್ತೆ 'ಕೆಜಿಎಫ್ ಚಾಪ್ಟರ್ 3'ಗಾಗಿ ಸಣ್ಣಗಾಗುತ್ತಾರೆ ಎನ್ನಲಾಗಿದೆ. ಹೀಗಾಗಿ ಯಶ್ ಬ್ಯಾಕ್ ಟು ಬ್ಯಾಕ್ ಮೂರು ಮೆಗಾ ಬಜೆಟ್ ಸಿನಿಮಾಗಳಲ್ಲಿ ನಟಿಸಲಿದ್ದು, ಒಂದೊಂದು ಸಿನಿಮಾದಲ್ಲೂ ಒಂದೊಂದು ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಎಲ್ಲಾ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿಗಳು. ಯಶ್ ಇದೂವರೆಗೂ ಅಧಿಕೃತವಾಗಿ ಮಾಹಿತಿಯನ್ನು ಎಲ್ಲೂ ಹಂಚಿಕೊಂಡಿಲ್ಲ.

More from Filmibeat

English summary
Buzz is that Yash will increase 15 kgs for Ravana Role:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X