ಹಾಸನದಲ್ಲಿ ಯಶ್ ತಾಯಿ ನಿವೇಶನ ಕಿತ್ತಾಟ;ಯಾರಿಗೆ ಸೇರಿದ್ದು ಪ್ರಾಪರ್ಟಿ? ಪುಷ್ಪ-ದೇವರಾಜ್ ದಾಖಲೆ ಸೇಮ್‌ ಟು ಸೇಮ್!

ಕಳೆದ ಕೆಲವು ದಿನಗಳಿಂದ ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಸುದ್ದಿಯಲ್ಲಿದ್ದಾರೆ. ಹಾಸನದಲ್ಲಿ ಖರೀದಿಸಿದ್ದ ನಿವೇಶನದ ವಿಚಾರವಾಗಿ ಪುಷ್ಪ ಹಾಗೂ ಸ್ಥಳೀಯರಾಗಿರುವ ದೇವರಾಜ್ ಎಂಬುವವರ ಮಧ್ಯೆ ಕಿತ್ತಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ಕೋರ್ಟ್ ಆದೇಶದ ಮೇರೆಗೆ ದೇವರಾಜ್‌ ಅವರು ನಿವೇಶನಕ್ಕೆ ಪುಷ್ಪ ಹಾಕಿದ್ದ ಕಾಂಪೌಂಡ್ ಅನ್ನು ಉರುಳಿಸಿದಿದ್ದರು. ಇಲ್ಲಿಂದ ಈ ನಿವೇಶನದ ವಿವಾದ ಮತ್ತಷ್ಟು ಹೆಚ್ಚಾಗಿದೆ.

ಇತ್ತೀಚೆಗೆ ಪುಷ್ಪ ಅರುಣ್ ಕುಮಾರ್ ಹಾಗೂ ದೇವರಾಜ್ ನಡುವೆ ಮತ್ತೆ ಕಿತ್ತಾಟ ನಡೆದಿದೆ. ಕಾಂಪೌಂಟ್ ಉರಿಳಿಸಿದ ಮೇಲಂತೂ ಪುಷ್ಪ ಅವರ ಕಣ್ಣುಗಳು ಕೆಂಪಗಾಗಿವೆ. ಸ್ಥಳೀಯರಾಗಿರುವ ದೇವರಾಜ್ ವಿವಾದಲ್ಲಿ ಇರುವ ಪ್ರಾಪರ್ಟಿ ತನ್ನದು ಎಂದರೆ, ಪುಪ್ಪ ಈ ಪಾಪರ್ಟಿ ತನ್ನದು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ, ಇಬ್ಬರಲ್ಲಿ ಯಾರು ಹೇಳುತ್ತಿರೋದು ಸರಿ? ಇಲ್ಲಿ ಯಾರದ್ದು ತಪ್ಪು?

Yash Mother Pushpa and Devaraj property dispute in Hassan did official made mistake

ಸದ್ಯ ಈ ಪ್ರಾಪರ್ಟಿ ವಿಚಾರವೀಗ ಕೋರ್ಟ್ ಮೆಟ್ಟಿಲೇರಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ನಿವೇಶನದ ವಿಚಾರವೀಗ ಬೀದಿಗೆ ಬಂದಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಟಿವಿ9 ವರದಿಯೊಂದನ್ನು ಪ್ರಸಾರ ಮಾಡಿದೆ. ಅದರ ಪ್ರಕಾರ ಒಂದೇ ಸೈಟ್ ಅನ್ನು ಅಧಿಕಾರಿಗಳು ಪುಷ್ಪ ಅರುಣ್ ಕುಮಾರ್ ಹಾಗೂ ದೇವರಾಜ್ ಇಬ್ಬರಿಗೂ ರಿಜಿಸ್ಟರ್ ಮಾಡಿ ಕೊಟ್ಟಿದ್ದಾರಾ? ಎಂಬ ಪ್ರಶ್ನೆ ಮೂಡುತ್ತಿದೆ. ಅಸಲಿಗೆ ಟ್ವಿಸ್ ಏನು ಎಂದು ನೋಡುವುದಾರೇ,

ಹಾಸನದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಿದ್ಯಾನಗರದಲ್ಲಿ ಪುಷ್ಪ ಅರುಣ್ ಕುಮಾರ್ ನಿವೇಶನವನ್ನು ಖರೀದಿ ಮಾಡಿದ್ದರು. ಆ ನಿವೇಶನ ತನ್ನದು ಎಂದು ಅಲ್ಲಿನ ಸ್ಥಳೀಯರೇ ಆದ ದೇವರಾಜ್ ತನ್ನದು ಎಂದು ಹೇಳುತ್ತಿದ್ದಾರೆ. ಇಬ್ಬರ ನಡುವೆ ಕಿತ್ತಾಟಗಳು ಶುರುವಾಗುತ್ತಿದ್ದಂತೆ, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಆದರೆ, ಈ ಟ್ವಿಸ್ಟ್ ಏನಪ್ಪಾ ಅಂದರೆ, ಒಂದೇ ಸೈಟ್ ಅನ್ನು ಅಧಿಕಾರಿಗಳು ಇಬ್ಬರಿಗೆ ರಿಜಿಸ್ಟರ್ ಮಾಡಿಕೊಟ್ಟರೇ? ಈ ಅನುಮಾನ ಹುಟ್ಟಿಕೊಳ್ಳುವುದಕ್ಕೆ ಕಾರಣಗಳು ಹೀಗಿವೆ.

Yash Mother Pushpa and Devaraj property dispute in Hassan did official made mistake

ಒಂದೇ ಸೈಟ್ ಇಬ್ಬರ ಹೆಸರಿಗೆ ದಾಖಲಾಯ್ತಾ?

ಈ ಪ್ರಶ್ನೆ ಮೂಡುವುದಕ್ಕೆ ಕಾರಣ ಇಬ್ಬರ ಬಳಿ ಇರುವ ದಾಖಲೆಗಳು. ಹಾಸನದ ಮಹಾನಗರ ಪಾಲಿಕೆ ವ್ಯಾಪ್ತಿಯ ವಿದ್ಯಾನಗರದ ಈ ವಿವಾದಿತ ನಿವೇಶನದ ಮಾಲೀಕತ್ವ ಇಬ್ಬರ ಹೆಸರಿನಲ್ಲಿದೆ. ಪುಷ್ಪ ಅರುಣ್ ಕುಮಾರ್ ತನ್ನದು ಎಂದು ಹೇಳುತ್ತಿರುವ ಈ ನಿವೇಶನ ಸರ್ವೆ ನಂ 97/27ರ ಎ 1 ಬಿ 1. ಇವರ ಬಳಿ ಇರುವ ದಾಖಲೆಗಳ ಪ್ರಕಾರ, 1972ರಲ್ಲಿ ಕೆಪಿ ಶ್ರೀಮತಿ ಎಂಬುವವರ ಹೆಸರಿನಲ್ಲಿ ಇತ್ತು. ಅದು ನಂತರ ಗಿರೀಶ್ ಎನ್ನುವವರಿಗೆ ಹೋಗಿತ್ತು. ಆ ಬಳಿಕ ಗಿರೀಶ್‌ ಅವರಿಂದ 2020ರಲ್ಲಿ ಗಿರೀಶ್ ಅವರಿಂದ ಪುಷ್ಪ ಅರುಣ್ ಕುಮಾರ್ ಖರೀದಿ ಮಾಡಿದ್ದರು.

ದೇವರಾಜ್ ಹೆಸರಿನಲ್ಲೂ ಇವೇ ದಾಖಲೆ?

ಇನ್ನು ಈ ನಿವೇಶನ ತನ್ನದು ಎನ್ನುತ್ತಿರುವ ದೇವರಾಜ್ ಕೂಡ ದಾಖಲೆಗಳನ್ನು ತೋರಿಸುತ್ತಾರೆ. ಅವರ ಬಳಿ ಇರುವ ಸರ್ವೆ ನಂ ಕೂಡ 97/27 ಎ 1 ಬಿ 1. 1965ರಲ್ಲಿ ಲಕ್ಷ್ಮಮ್ಮ ಅವರಿಂದ ಖರೀದಿ ಮಾಡಿದ್ದರು. ಅಲ್ಲಿಂದ ಇವರ ಕುಟುಂಬದ ಬಳಿಯೇ ಈ ನಿವೇಶನವಿದೆ. ಆದರೆ, ಪುಷ್ಪ ಹಾಗೂ ದೇವರಾಜ್ ಅವರ ಸರ್ವೆ ನಂಬರ್ ಮಾತ್ರ ಬೇರೆಯಿದೆ. ಪುಷ್ಪ ಅವರ ಬಳಿ ಇರುವ ಖಾತೆ ನಂಬರ್ 450 ಆಗಿದ್ದರೆ, ದೇವರಾಜ್ ಬಳಿ ಇರುವ ಸರ್ವೆ ನಂ 1272. ಇದೊಂದು ವಿಭಿನ್ನವಾಗಿದೆ ಅಷ್ಟೇ.

ಅಧಿಕಾರಿಗಳೇ ಗೋಲ್‌ಮಾಲ್ ಮಾಡಿದರೇ?

ಈ ಎರಡೂ ಕಡೆಯ ದಾಖಲೆಗಳನ್ನು ನೋಡಿದರೆ, ಇಬ್ಬರ ಬಳಿ ಇರುವ ದಾಖಲೆಗಳು ಸೇಮ್ ಟು ಸೇಮ್. ಹೀಗಾಗಿ ಪುಷ್ಪ ಅರುಣ್‌ ಕುಮಾರ್ ಹಾಗೂ ದೇವರಾಜ್‌ ಇಬ್ಬರೂ ದಾಖಲೆ ಮಾಡಿಕೊಟ್ಟ ಅಧಿಕಾರಿಗಳೇ ತಪ್ಪು ಮಾಡಿರಬಹುದು. ಇಲ್ಲಾ ಗೋಲ್ಮಾಲ್ ಮಾಡಬಹುದೆಂದು ವರದಿಯಾಗಿದೆ. ಹೀಗಾಗಿ ಈ ನಿವೇಶನ ವಿವಾದವೀಗ ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

More from Filmibeat

English summary
Yash Mother Pushpa and Devaraj property dispute in Hassan. Both documents are same. Did official made mistake?
Read more about: yash dispute
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X