ಒಂದು ಕಿರುಚಿತ್ರ, 2 ಸಿನಿಮಾ ನಿರ್ದೇಶಿಸಿರೋ ಗೀತು ಮೋಹನ್‌ದಾಸ್ ರಾಕಿ ಭಾಯ್ ಅಡ್ಡಗೆ ಎಂಟ್ರಿ ಕೊಟ್ಟಿದ್ದೇಗೆ?

ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾದ ಟೈಟಲ್ ಕೊನೆಗೂ ರಿವೀಲ್ ಆಗಿದೆ. ಈ ಸಿನಿಮಾದ ನಿರ್ದೇಶಕರು ಯಾರು ಅನ್ನೋದು ಇದೇ ಶೀರ್ಷಿಕೆ ಅನಾವರಣ ಮಾಡುವಾಗಲೇ ಹೊರಬಿದ್ದಿದೆ. ಕಳೆದ ಕೆಲವು ದಿನಗಳಿಂದ ಯಶ್ 19ನೇ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಅದೀಗ ನಿಜವಾಗಿದೆ.

'ಕೆಜಿಎಫ್ 2' ತೆರೆಕಂಡು ಸುಮಾರು ಒಂದೂವರೆ ವರ್ಷದ ಬಳ ರಾಕಿ ಭಾಯ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾವನ್ನು ಮಲಯಾಳಂ ಚಿತ್ರರಂಗದ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಚ್ಚರಿ ಅಂದರೆ, ಯಶ್ ಮತ್ತೆ ಅನುಭವಿ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿಲ್ಲ. ಒಂದು ಕಿರುಚಿತ್ರ, ಎರಡು ಸಿನಿಮಾಗಳನ್ನು ನಿರ್ದೇಶಿಸಿದ ಡೈರೆಕ್ಟರ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Yash movie Toxic director Geetu Mohandas background how she got a chance

ಗೀತು ಮೋಹನ್‌ದಾಸ್ ಕಥೆಯನ್ನು ಯಶ್ ಒಪ್ಪಿದ್ದು ಯಾಕೆ? ಮಲಯಾಳಂ ನಿರ್ದೇಶಕಿಯರ ಹಿನ್ನೆಲೆ ಏನು? ಮಫ್ತಿ ನಿರ್ದೇಶಕ ನರ್ತನ್ ಅನ್ನು ಓವರ್ ಟೇಕ್ ಮಾಡಿದ ಈ ನಿರ್ದೇಶಕಿಯ ಹಿನ್ನೆಲೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಗೀತು ಮೋಹನ್‌ದಾಸ್ (ಗಾಯತ್ರಿ ದಾಸ್) ಮಲಯಾಳಂ ಚಿತ್ರರಂಗಕ್ಕೆ ಬಾಲ ನಟಿಯಾಗಿ ಎಂಟ್ರಿಕೊಟ್ಟವರು. ಹಲವು ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ ಅನುಭವಿದೆ. 2009ರಿಂದ ಗೀತು ಮೋಹನ್‌ದಾಸ್ ನಿರ್ದೇಶನದ ಕಡೆಗೆ ಒಲವು ತೋರಿಸಿದ್ದಾರೆ. 2009ರಲ್ಲಿ 'ಕೆಲ್‌ಕ್ಕುನ್ನುಂಡು' (Kelkkunnundo) ಅನ್ನೋ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಕಿರುಚಿತ್ರಕ್ಕೆ ಸಿನಿಪ್ರಿಯರ ಗಮನ ಸೆಳೆದಿತ್ತು. ಇಲ್ಲಿಂದ ಗೀತು ಮೋಹನ್‌ದಾಸ್ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿತ್ತು.

ಕಿರುಚಿತ್ರ ನಿರ್ದೇಶಿಸಿದ 5 ವರ್ಷಗಳ ಬಳಿಕ (2014) ಗೀತು ಮೋಹನ್‌ ದಾಸ್ 'ಲೈಯರ್ಸ್‌ ಡೈಸ್' ಸಿನಿಮಾ ನಿರ್ದೇಶನ ಮಾಡಿದ್ದರು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಇದು ನಗರಕ್ಕೆ ವಲಸೆ ಬಂದ ತನ್ನ ಗಂಡನನ್ನು ಹುಡುಕೊಂಡು ಬರುವ ಹಳ್ಳಿ ಮಹಿಳೆಯ ಕಥೆಯನ್ನು ತೆರೆಮೇಲೆ ತಂದಿದ್ದರು. ನಗರಕ್ಕೆ ವಲಸೆ ಬರುವವರ ಬದುಕಿನ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿತ್ತು. 'ಲೈಯರ್ಸ್‌ ಡೈಸ್'ಗೆ ಎರಡು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಹೆಸರು ಗಳಿಸಿತ್ತು.

Yash movie Toxic director Geetu Mohandas background how she got a chance

2019ರಲ್ಲಿ 'ಮೂತೊನ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಮಲಯಾಳಂ ನಟಿ ನಿವಿನ್ ಪೌಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಈ ಸಿನಿಮಾ ಕೂಡ ಲಕ್ಷದ್ವೀಪದಿಂದ ಮುಂಬೈಗೆ ತನ್ನ ಅಣ್ಣನ್ನು ಹುಡುಕಿಕೊಂಡು ಬರುವ 14 ವರ್ಷದ ಸೋದರಿಯ ಕಥೆ. ಇದು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸದ್ದು ಮಾಡಿತ್ತು.

ಯಶ್ 'ಟಾಕ್ಸಿಕ್' ಇವರ ಮೂರನೇ ಸಿನಿಮಾ. ಮತ್ತೆ ಐದು ವರ್ಷಗಳ ಬಳಿಕ ನಿರ್ದೇಶನಕ್ಕೆ ಧುಮುಕಿದ್ದಾರೆ. ಕೇವಲ ಒಂದು ಕಿರುಚಿತ್ರ, ಎರಡು ಸಿನಿಮಾ ನಿರ್ದೇಶಿಸಿರುವ ಗೀತು ಮೋಹನ್‌ದಾಸ್‌ಗೆ ರಾಕಿಂಗ್ ಸ್ಟಾರ್ ಸಿನಿಮಾ ಸಿಕ್ಕಿದ್ದು ಹೇಗೆ? ಅನ್ನೋದನ್ನು ಮಲಯಾಳಂ ಒಂದರಲ್ಲಿ ಹೇಳಿಕೊಂಡಿದ್ದಾರೆ.

"ನಾನು ನನ್ನ ನಿರೂಪಣಾ ಶೈಲಿಯಲ್ಲಿ ಪ್ರಯೋಗಗಳನ್ನು ಮಾಡುತ್ತಲೇ ಇದ್ದೇನೆ. ನನ್ನ 'ಲೈಯರ್ಸ್ ಡೈಸ್' ಹಾಗೂ 'ಮೂತೊನ್' ಎರಡೂ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟಿದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ನನ್ನ ದೇಶದಲ್ಲಿ ನನ್ನದೇ ಆದ ಪ್ರೇಕ್ಷಕರ ವರ್ಗವನ್ನು ಹುಡುಕಲು ನಾನು ಯಾವಾಗಲೂ ಹಂಬಲಿಸುತ್ತಿದ್ದೆ. ಆ ಆಲೋಚನೆಯಲ್ಲಿ ನನಗೆ ಹುಟ್ಟಿದ ಕಥೆಯಿದು." ಎಂದು ಮಾತೃಭೂಮಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಿನಿಮಾ ಎರಡು ವಿರುದ್ಧ ಪ್ರಪಂಚಗಳ ಕಾಲ್ಪನಿಕ ಕಥೆ. ಇಂತಹ ಕಥೆಗೆ ಯಶ್ ಸೂಕ್ತ ಎಂಬುದನ್ನು ನಾನು ಕಂಡುಕೊಂಡೆ ಎಂದು ಇದೇ ಸಂದರ್ಶದಲ್ಲಿ ಹೇಳಿಕೊಂಡಿದ್ದಾರೆ. "ಯಶ್ ನಾನು ನೋಡಿರುವ ಸ್ಮಾರ್ಟೆಸ್ಟ್ ಹೀರೊ. ನಾನು ಹಾಗೂ ನನ್ನ ತಂಡ ಅವರೊಂದಿಗೆ ಹೊಸ ಜರ್ನಿ ಮಾಡುವುದನ್ನು ಎದುರು ನೋಡುತ್ತಿದ್ದೇನೆ." ಎಂದು ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

More from Filmibeat

English summary
Yash 19th movie Taxic director Geetu Mohandas movie list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X