ಗಾಳಿ ಸುದ್ದಿಗೆ ಬಿತ್ತು ಬ್ರೇಕ್;ಅಸಮಾಧಾನವೂ ಇಲ್ಲ..ರೀಶೂಟ್ ಆಗ್ತಿಲ್ಲ..'ಟಾಕ್ಸಿಕ್' ಬಗ್ಗೆ ಕೆವಿಎನ್ ಹೇಳಿದ್ದೇನು?
'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್‌ನಲ್ಲಿ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿ, ವರ್ಲ್ಡ್‌ವೈಡ್ ಸದ್ದು ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಇದರ ಹಿಂದೇನೆ ಇನ್ನೊಂದು ಕನ್ನಡದ ನೇರವಾಗಿ ಗ್ಲೋಬಲ್ ಬಾಕ್ಸಾಫೀಸ್‌ಗೆ ಲಗ್ಗೆ ಇಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದೆ. ಅದುವೇ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ 'ಟಾಕ್ಸಿಕ್'. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಕೆಜಿಎಫ್ 2' ಬಳಿಕ ಯಶ್ ಅಳೆದು ತೂಗಿ 'ಟಾಕ್ಸಿಕ್' ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿಯುವ ಹಂತಕ್ಕೆ ಬಂದಿದೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿತ್ತು. ಯಶ್ ನಟಿಸುತ್ತಿರುವ 'ಟಾಕ್ಸಿಕ್' ಸಿನಿಮಾ ಈಗಾಗಲೇ ಅನೌನ್ಸ್ ಮಾಡಿದ ಡೇಟ್‌ಗೆ ಬರೋದಿಲ್ಲ. ಯಶ್‌ಗೆ ಸಿನಿಮಾದ ಮೇಕಿಂಗ್ ಇಷ್ಟ ಆಗಿಲ್ಲ. ಹೀಗಾಗಿ 2026ಕ್ಕೆ ರಿಲೀಸ್ ಆಗೋದು ಅನುಮಾನ ಎಂಬ ಸುದ್ದಿ ಓಡಾಡಿತ್ತು.

'ಕೆಜಿಎಫ್ 2' ಅಂತ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಮೂರುವರೆ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಇಷ್ಟೊಂದು ತಡ ಮಾಡಿದ್ದಕ್ಕೆ ಯಶ್ ಅಭಿಮಾನಿಗಳು ಕಾದು ಕಾದೂ ಸುಸ್ತಾಗಿದ್ದಾರೆ. ಈ ಮಧ್ಯೆ 'ಟಾಕ್ಸಿಕ್' ಮುಂದಿನ ವರ್ಷವೂ ರಿಲೀಸ್ ಆಗೋದಿಲ್ಲ ಅನ್ನೋ ಸುದ್ದಿ ಅವರ ನಿದ್ದೆಗೆಡಿಸಿತ್ತು. ಈ ಬಗ್ಗೆ ಕೆವಿಎನ್ ಸಂಸ್ಥೆ ಕ್ಲಾರಿಟಿ ಕೊಟ್ಟಿದೆ. ಗಾಳಿ ಸುದ್ದಿಗಳಿಗೆಲ್ಲ ಬ್ರೇಕ್ ಹಾಕಿದೆ. ಯಶ್ ಹಾಗೂ ಕೆವಿಎನ್ ಇಬ್ಬರೂ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಬಗ್ಗೆ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
'ಟಾಕ್ಸಿಕ್' ರಿಲೀಸ್ ಬಗ್ಗೆ ಸುಳ್ಳು ಸುದ್ದಿ
ಕನ್ನಡ ಚಿತ್ರರಂಗದಿಂದ ಮತ್ತೊಂದು ಅಸ್ತ್ರ ರೆಡಿಯಾಗುತ್ತಿದೆ. ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ. ನೇರವಾಗಿ ಗ್ಲೋಬಲ್ ಬಾಕ್ಸಾಫೀಸ್‌ಗೆ ಲಗ್ಗೆ ಇಡುವುದಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಫಿಲ್ಮ್ ಮೇಕರ್ಸ್ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹೀಗಿರುವಾಗ ಇತ್ತೀಚೆಗೆ ಯಶ್ ಸಿನಿಮಾದ ಮೇಕಿಂಗ್ ನೋಡಿದ್ದು, ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ತೆಗೆದ ದೃಶ್ಯಗಳು ಅವರಿಗೆ ಇಷ್ಟ ಆಗಿಲ್ಲ. ಹೀಗಾಗಿ 'ಟಾಕ್ಸಿಕ್' ರೀ-ಶೂಟ್ ಮಾಡುವುದಕ್ಕೆ ಯಶ್ ನಿರ್ಧಾರ ಮಾಡಿದ್ದಾರೆಂಬ ಸುದ್ದಿ ಹಬ್ಬಿತ್ತು.
ವದಂತಿಗಳಿಗೆ ಕೆವಿಎನ್ ರಿಯಾಕ್ಷನ್ ಏನು?
ಬಾಲಿವುಡ್‌ನ ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ ತನ್ನ ಎಕ್ಸ್ ಖಾತೆಯಲ್ಲಿ 'ಟಾಕ್ಸಿಕ್' ರಿಲೀಸ್ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಟಾಕ್ಸಿಕ್' ಬಗ್ಗೆ ರೂಮರ್ ಹರಿದಾಡುತ್ತಿದ್ದಂತೆ ಕೆವಿಎನ್ ಪ್ರೊಡಕ್ಷನ್ ಜೊತೆ ಕ್ಲಾರಿಟಿ ತೆಗೆದುಕೊಂಡು ಮಾಹಿತಿ ಹಂಚಿಕೊಂಡಿದ್ದಾರೆ. ಕೆವಿಎನ್ ಈಗಾಗಲೇ ಮಾರ್ಚ್ 19, 2026ಕ್ಕೆ ಸಿನಿಮಾ ರಿಲೀಸ್ ಎಂದು ಹೇಳಿಕೊಂಡಿತ್ತು. ಅದೇ ದಿನ ಬಿಡುಗಡೆಯಾಗುತ್ತಿದ್ದು, ಸಿನಿಮಾ ಮುಂದೂಡುತ್ತಾರೆಂಬ ವದಂತಿಗಳಲ್ಲ ಸುಳ್ಳು ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟ ಪಡಿಸಿದ್ದಾಗಿ ತರಾನ್ ಆದರ್ಶ್ ಹೇಳಿದ್ದಾರೆ.

'ಟಾಕ್ಸಿಕ್'ಗೆ 140 ದಿನಗಳು ಬಾಕಿ
ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್' ಗ್ಲೋಬಲ್ ಬಾಕ್ಸಾಫೀಸ್‌ಗೆ ಲಗ್ಗೆ ಇಡುವುದಕ್ಕೆ 140 ದಿನಗಳು ಬಾಕಿ ಉಳಿದಿವೆ. ಮಾರ್ಚ್ 19, 2026ಕ್ಕೆ 'ಟಾಕ್ಸಿಕ್' ರಿಲೀಸ್ ಆಗೋದು ಫಿಕ್ಸ್. ಯುಗಾದಿ ಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹಾಗೇ ಈದ್ ಕೂಡ ಇರುವುದರಿಂದ ರಜೆಯ ದಿನಗಳನ್ನು ಸದುಪಯೋಗ ಪಡೆದುಕೊಳ್ಳುವುದಕ್ಕೆ ನಿರ್ಧರಿಸಿದೆ. ಹೀಗಾಗಿ 'ಟಾಕ್ಸಿಕ್' ರಿಲೀಸ್ ಡೇಸ್ ಬದಲಾವಣೆ ಇಲ್ಲಾ ಎನ್ನಲಾಗಿದೆ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಏಕಾಕಾಲಕ್ಕೆ ಶೂಟಿಂಗ್ ನಡೆದಿದ್ದು, ಭಾರತದ ಪ್ರಮುಖ ಐದು ಭಾಷೆಗಳು ಸೇರಿ, ಹಲವು ವಿದೇಶಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ರಾಮಾಯಣದಲ್ಲಿ ಯಶ್ ಬ್ಯುಸಿ
ಇನ್ನು 'ಟಾಕ್ಸಿಕ್' ಸಿನಿಮಾ ಬಹುತೇಕ ಶೂಟಿಂಗ್ ಮುಗಿದಿದೆ. ಕೆಲವು ಪ್ಯಾಚ್ ವರ್ಕ್‌ಗಳು ಬಾಕಿ ಇದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇನ್ನು ಯಶ್ ಮುಂಬೈನಲ್ಲಿ ಬೀಡು ಬಿಟ್ಟಿದ್ದು, 'ರಾಮಾಯಣ' ಸಿನಿಮಾದ ಚಿತ್ರೀಕರಣದಲ್ಲಿ ಯಶ್ ಭಾಗಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಸಿ, 'ಟಾಕ್ಸಿಕ್' ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.


Click it and Unblock the Notifications











