Video:ಮುಂಬೈ ಕಬ್ಜ ಮಾಡೋಕೆ ಹೊರಟ ರಾಕಿ ಭಾಯ್; ಮುಂಬೈ ರಿಜಿಸ್ಟ್ರೇಷನ್ ಹೊಸ ಕಾರಿನ ನಂಬರ್ ಪ್ಲೇಟ್ ಮೇಲೆ '8055'
ರಾಕಿ ಭಾಯ್ ಈಗ ನ್ಯಾಷನಲ್ ಸ್ಟಾರ್. ಮೆಗಾ ಬ್ಲಾಕ್ ಬಸ್ಟರ್ 'ಕೆಜಿಎಫ್ 2' ಬಳಿಕ ಯಶ್ ಕನ್ನಡಕ್ಕಷ್ಟೇ ಅಲ್ಲ ನ್ಯಾಷನಲ್ ಸ್ಟಾರ್ ಹೊರ ಹೊಮ್ಮಿದ್ದಾರೆ. ಈ ಬೆನ್ನಲ್ಲೇ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಪೌರಾಣಿಕ ಸಿನಿಮಾದಲ್ಲಿ ರಾವಣನಾಗಿ ನಟಿಸುತ್ತಿರುವ ಯಶ್ ಲುಕ್ ನೋಡುವುದಕ್ಕೆ ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಜುಲೈ 3 ರಂದು ಯಶ್ ನಟಿಸಿದ ಮೊದಲ ಬಾಲಿವುಡ್ ಸಿನಿಮಾದ ಗ್ಲಿಂಪ್ಸ್ ಅನಾವರಣ ಆಗಲಿದೆ.
ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾವನ್ನು ಒಟ್ಟೊಟ್ಟಿಗೆ ಶೂಟಿಂಗ್ ಮಾಡುತ್ತಿದ್ದಾರೆ. ಒಂದ್ಕಡೆ 'ಟಾಕ್ಸಿಕ್' ಶೂಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ 'ರಾಮಾಯಣ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಈ ಎರಡೂ ಸಿನಿಮಾಗಳ ಶೂಟಿಂಗ್ ಮುಗಿಸಿ ರಾಕಿ ಭಾಯ್ ವಿದೇಶಿ ಪ್ರಯಾಣಕ್ಕೆ ತೆರಳಿದ್ದಾರೆ. ಈ ಮಧ್ಯೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಯಶ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕನ್ನಡ ಚಿತ್ರರಂಗದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿ ಭಾಯ್ ಮುಂಬೈ ಕಬ್ಜ ಮಾಡುವುದಕ್ಕೆ ಹೊರಟಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಎರಡೂ ಸಿನಿಮಾಗಳು ಯಶ್ ಅವರನ್ನು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪಟ್ಟಕ್ಕೆ ಏರಿಸುತ್ತೆ ಎಂದು ಭವಿಷ್ಯ ನುಡಿಯಲಾಗುತ್ತಿದೆ. ಇದೇ ವೇಳೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಯಶ್ ಹೊಸ ಕಾರ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅದ್ಯಾಕೆ ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಮುಂಬೈನಲ್ಲಿ ಯಶ್ ಹೊಸ ಕಾರು
ಜುಲೈ 3 ರಂದು ಯಶ್ ನಟಿಸಿ, ನಿರ್ಮಿಸುತ್ತಿರುವ 'ರಾಮಾಯಣ' ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಯಶ್ ಮುಂಬೈನ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನೆಟ್ಟಿಗರ ಕಣ್ಣು ಯಶ್ ಖರೀದಿಸಿರುವ ಹೊಸ ಕಾರಿನ ಮೇಲೆ ಬಿದ್ದಿದೆ. ಇತ್ತೀಚೆಗೆ ಮುಂಬೈನಲ್ಲಿ ಬೀಡು ಬಿಟ್ಟಿರುವ ಯಶ್ ಅಲ್ಲಿ ಓಡಾಡುವುದಕ್ಕೆ ಹೊಸ ಕಾರು ಖರೀದಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ನೆಟ್ಟಿಗರೇ ಸಾಕ್ಷಿಯನ್ನು ಕೊಟ್ಟಿದ್ದಾರೆ. ಅದು ಯಶ್ ಕಾರಿನ ನಂಬರ್ ಪ್ಲೇಟ್.
ಹೊಸ ಕಾರಿನ ನಂಬರ್ ಪ್ಲೇಟ್ ಮೇಲೆ ಬಾಸ್
ಯಶ್ ಮುಂಬೈನಲ್ಲಿ ಖರೀದಿಸಿದ ಹೊಸ ಕಾರಿನಲ್ಲಿಯೇ ಏರ್‌ಪೋರ್ಟ್‌ಗೆ ಬಂದು ಇಳಿಸಿದ್ದರು. ಈ ವೇಳೆ ನೆಟ್ಟಿಗರ ಕಣ್ಣು ಯಶ್ ಕಾರಿನ ನಂಬರ್ ಪ್ಲೇಟ್ ಮೇಲೆ ಹೋಗಿದೆ. ಮುಂಬೈ ರಿಜಿಸ್ಟ್ರೇಷನ್ ಯಶ್ ಹೊಸ ಕಾರ್ ಮೇಲೆ ಬಾಸ್ (8055) ನಂಬರ್ ಪ್ಲೇಟ್ ಇರುವುದನ್ನು ಗಮನಿಸಿದ್ದಾರೆ. ಇದೂವರೆಗೂ ಯಶ್ ಖರೀದಿಸಿರುವ ಎಲ್ಲಾ ಕಾರುಗಳ ನಂಬರ್ ಪ್ಲೇಟ್‌ನ ಸಂಖ್ಯೆ 8055 ಎಂದಿದೆ. ಹೀಗಾಗಿ ಮುಂಬೈನಲ್ಲಿ ಯಶ್ ಹೊಸ ದುಬಾರಿ ಕಾರು ಖರೀದಿಸಿದ್ದಾರೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಯಶ್ ಅಮೆರಿಕ ಪ್ರವಾಸ
'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾದಲ್ಲಿ ಬ್ಯುಸಿಯಾಗಿರುವ ರಾಕಿ ಭಾಯ್ ಶೂಟಿಂಗ್ ಮುಗಿಸಿ ಅಮೆರಿಕ ಪ್ರವಾಸಕ್ಕೆ ಹೊರಟಿದ್ದಾರೆ. ಕುಟುಂಬದೊಂದಿಗೆ ಯಶ್ ಪ್ರವಾಸ ಕೈಗೊಂಡಿದ್ದಾರೆ. ಈ ಸಂಬಂಧ ಯಶ್ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. 'ರಾಮಾಯಣ' ಗ್ಲಿಂಪ್ಸ್ ರಿಲೀಸ್‌ಗೂ ಮುನ್ನ ಯಶ್ ವಿದೇಶಕ್ಕೆ ತೆರಳಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ರಾಕಿ ಬಾಯ್ ಈಗಾಗಲೇ ಯುಎಸ್‌ಎಗೆ ಲ್ಯಾಂಡ್ ಆಗಿದ್ದಾರೆಂದು ಮೂಲಗಳು ಹೇಳುತ್ತಿವೆ.
ಕುತೂಹಲ ಕೆರಳಿಸಿದ 'ರಾಮಾಯಣ'
'ರಾಮಾಯಣ' ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಯಶ್ ಸಿನಿಮಾದಲ್ಲಿ ರಾವಣನಾಗಿ ಕಾಣಿಸಿಕೊಂಡರೆ, ರಣ್‌ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ ಪ್ರಮುಖ ದೃಶ್ಯಗಳನ್ನು ಚಿತ್ರೀಕರಣ ಮಾಡಿ ಮುಗಿಸಿದೆ. ರಾಮಾಯಣದ ಮೊದಲನೇ ಭಾಗ 2026 ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಸದ್ಯ ಈ ಸಿನಿಮಾದ ಟೈಟಲ್ ಟೀಸರ್ ಜುಲೈ 3 ರಂದು ರಿಲೀಸ್ ಆಗುತ್ತಿದೆ.


Click it and Unblock the Notifications











