'ಟಗರು' ಹಾಡಿಗೆ ರಾಕಿ ಭಾಯ್ ಭರ್ಜರಿ ಸ್ಟೆಪ್ಸ್; ಪತಿಯ ಡ್ಯಾನ್ಸ್‌ಗೆ ಥ್ರಿಲ್ ಆದ ರಾಧಿಕಾ ಪಂಡಿತ್
ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಸಿನಿಮಾ ವಿವಾದಕ್ಕೆ ಸಿಲುಕಿದೆ. ಕಳೆದ ಎರಡು ದಿನಗಳಿಂದ 'ಟಾಕ್ಸಿಕ್' ಸೆಟ್ ಬಗ್ಗೆನೇ ಚರ್ಚೆಯಾಗುತ್ತಿದೆ. ಇನ್ನೊಂದು ಕಡೆ ಅರಣ್ಯ ಇಲಾಖೆ ಕಾನೂನು ಕ್ರಮ ಜರುಗಿಸಿದರೆ ಮುಂದೆ ಏನಾಗಬಹುದು ಅನ್ನುವ ಲೆಕ್ಕಾಚಾರ ಕೂಡ ಹಾಕಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ರಾಕಿ ಭಾಯ್ ತಲೆ ಕೆಡಿಸಿಕೊಂಡಿಲ್ಲ.
ಯಶ್ ಅದೆಷ್ಟೇ ಬ್ಯುಸಿಯಾಗಿದ್ದರೂ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕವೂ ಯಶ್ ಕುಟುಂಬಕ್ಕೆ ಅಂತ ಸಮಯವನ್ನು ಮೀಸಲಾಗಿ ಇಡುತ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಅವರ ಪುತ್ರನ ಬರ್ತ್‌ಡೇ.

ನಿನ್ನೆ (ಅಕ್ಟೋಬರ್ 30) ಯಶ್ ಪುತ್ರ ಯಥರ್ವ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಪುತ್ರ ಬರ್ತ್‌ಡೇ ಆಚರಿಸುವುದಕ್ಕೆ ಯಶ್ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಕುಟುಂಬದ ಜೊತೆಗೆ ಕಾಲ ಕಳೆದಿದ್ದಾರೆ. ಈ ವೇಳೆ ಶಿವಣ್ಣನ ಸೂಪರ್ ಹಿಟ್ ಸಿನಿಮಾ 'ಟಗರು' ಚಿತ್ರದ ಹಾಡಿಗೆ ಹೆಜ್ಜೆನೂ ಹಾಕಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಯಶ್ ಪುತ್ರ ಯಥರ್ವ್ ಹುಟ್ಟಿದ್ದು ಅಕ್ಟೋಬರ್ 30, 2019. ನಿನ್ನೆಗೆ ಐದನೇ ವರ್ಷಕ್ಕೆ ಕಾಲಿಟ್ಟಿರುವ ಜೂ. ರಾಕಿ ಭಾಯ್ ಬರ್ತ್‌ಡೇಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಡ್ಯಾನ್ಸ್, ಮಸ್ತಿ ಕೂಡ ಇತ್ತು.
ಸ್ಯಾಂಡಲ್‌ವುಡ್‌ನಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಬಲ್ಲ ಕೆಲವೇ ಕೆಲವು ಸ್ಟಾರ್‌ಗಳಲ್ಲಿ ಯಶ್ ಕೂಡ ಒಬ್ಬರು. ಡ್ಯಾನ್ಸ್ ಅಂದಾಗ ಪುನೀತ್ ರಾಜ್‌ಕುಮಾರ್, ಶಿವಣ್ಣ ಹಾಗೂ ಯಶ್ ಕಣ್ಮುಂದೆ ಬರುತ್ತಾರೆ. ಆದರೆ, ಮಾಸ್ ಹೀರೋ ಆಗಿ ಯಶಸ್ಸು ಕಂಡಿರುವ ಯಶ್ ಇತ್ತೀಚೆಗೆ ತೆರೆ ಮೇಲೆ ಡ್ಯಾನ್ಸ್ ಮಾಡೋದನ್ನು ನಿಲ್ಲಿಸಿದ್ದಾರೆ. ರಾಕಿ ಭಾಯ್ ಡ್ಯಾನ್ಸ್ ಅನ್ನು ಅವರ ಅಭಿಮಾನಿಗಳು ಕೂಡ ಮಿಸ್ ಮಾಡಿಕೊಂಡಿದ್ದಾರೆ.
ಕೊನೆಗೂ ಮಗನ ಬರ್ತ್‌ಡೇ ಖುಷಿಯಲ್ಲಿ ಯಶ್ 'ಟಗರು' ಹಾಡಿಗೆ ಹೆಜ್ಜೆ ಹಾಕಿದ್ದು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಬಹಳ ದಿನಗಳ ಬಳಿಕ ಯಶ್ ಮಸ್ತ್ ಆಗಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಸಿನಿಮಾಗಳಲ್ಲಿ ಅಲ್ಲದೇ ಹೋದರೂ, ವೇದಿಕೆಯಲ್ಲಾದರೂ ರಾಕಿ ಭಾಯ್ ಹೆಜ್ಜೆ ಹಾಕಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಯಥರ್ವ್ ಹುಟ್ಟುಹಬ್ಬದಲ್ಲಿ ಯಶ್ ಹಾಕಿದ ಡ್ಯಾನ್ಸ್‌ಗೆ ಪತ್ನಿ ರಾಧಿಕಾ ಪಂಡಿತ್ ಕೂಡ ಖುಷಿಯಾಗಿದ್ದಾರೆ. ಯಶ್ ಡ್ಯಾನ್ಸ್ ಅನ್ನು ಅವರೂ ಕೂಡ ಎಂಜಾಯ್ ಮಾಡಿದ್ದಾರೆ. ಹಾಗೇ ಪುತ್ರಿ ಆಯ್ರಾ ಅಪ್ಪನ ಡ್ಯಾನ್ಸ್ ಅನ್ನು ನೋಡಿ ಬೆರಗಾಗಿದ್ದಾಳೆ. ಇನ್ನು ಯಶ್ ಆಪ್ತರು ಅವರೊಂದಿಗೆ ಎಂಜಾಯ್ ಮಾಡಿದ್ದು ವಿಡಿಯೋದಲ್ಲಿ ನೋಡಬಹುದು. ಸದ್ಯ ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ರಾಮಾಯಣದಲ್ಲಿಯೂ ನಟಿಸುತ್ತಿರುವುದಾಗಿ ಹೇಳಿದ್ದಾರೆ.


Click it and Unblock the Notifications










