ಪಾನ್ ಮಸಾಲ ಜಾಹೀರಾತು ನೋ ಎಂದ ಯಶ್: ತಿರಸ್ಕರಿಸಿದ ಮೊತ್ತವೆಷ್ಟು?

ಅಕ್ಷಯ್ ಕುಮಾರ್, ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಈ ಮೂವರೂ ಸೂಪರ್‌ಸ್ಟಾರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಿಂದ ಟ್ರೋಲ್ ಆಗುತ್ತಿದ್ದಾರೆ. ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಳಿಕವಂತೂ ಈ ಮೂವರು ಬಾಲಿವುಡ್‌ ನಟರನ್ನೂ 'ಗುಟ್ಕಾ ಗ್ಯಾಂಗ್' ಎಂದೇ ಕಾಲೆಳೆಯುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅಕ್ಷಯ್ ಕುಮಾರ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಜಾಹೀರಾತಿನಿಂದ ಬಂದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳುವುದಾಗಿಯೂ ಹೇಳಿದ್ದರು. ಹೀಗಿದ್ದರೂ, ಇತ್ತೀಚೆಗೆ ಹಿಂದಿ ರಾಷ್ಟ್ರ ಭಾಷೆ ಎಂದಿದ್ದ ಅಜಯ್ ದೇವಗನ್‌ಗೆ ಬೆಂಬಲಿಸಿ ಅಕ್ಷಯ್ ಮತ್ತೆ ಪೇಚಿಗೆ ಸಿಕ್ಕಿಕೊಂಡಿದ್ದರು. ಈ ಬೆನ್ನಲ್ಲೇ ಮತ್ತೆ ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವಗನ್ ಇದೇ ಪಾನ್ ಮಸಾಲ ಜಾಹೀರಾತಿಗೆ ಟ್ರೋಲ್ ಆಗಿದ್ದರು. ಈಗ ಯಶ್ ಇಂತಹದ್ದೇ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿ ಮೆಚ್ಚುಗೆ ಗಳಿಸಿದ್ದಾರೆ.

ಹೌದು.. ರಾಕಿಂಗ್ ಸ್ಟಾರ್ ಯಶ್ ಬಹು ಕೋಟಿ ಮೊತ್ತದ ಪಾನ್ ಮಸಾಲ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ರಾಕಿ ಬಾಯ್‌ ತೆಗೆದುಕೊಂಡು ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದೆ. ಅಸಲಿಗೆ ಯಶ್ ಕೈ ಬಿಟ್ಟ ಈ ಜಾಹೀರಾತಿನ ಕಥೆಯೇನು? ಅಂತ ತಿಳಿಯಲು ಮುಂದೆ ಓದಿ.

Recommended Video

ಕೋಟಿ ಕೊಟ್ರು ಪಾನ್ ಮಸಾಲಾ ಗುಟ್ಕಾ ಪ್ರಚಾರ ಮಾಡಲ್ಲ | Yash | KGF 2 | Ajay Devgn | Akshay Kumar

ಪಾನ್ ಮಸಾಲ ಆಡ್ ಕೈ ಬಿಟ್ಟ ಯಶ್

ಪಾನ್ ಮಸಾಲ ಆಡ್ ಕೈ ಬಿಟ್ಟ ಯಶ್

'ಕೆಜಿಎಫ್ 2' ಅದ್ಧೂರಿ ಯಶಸ್ಸಿನ ಬಳಿಕ ಪಾನ್ ಮಸಲಾ ಹಾಗೂ ಎಲೈಚಿ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗುವಂತೆ ಯಶ್‌ಗೆ ಕೇಳಲಾಗಿತ್ತು. ಆದರೆ, ಯಶ್ ಈ ದುಬಾರಿ ಮೌಲ್ಯದ ಜಾಹೀರಾತನ್ನು ತಿರಸ್ಕರಿಸಿದ್ದಾರೆ. 'ಕೆಜಿಎಫ್' ಬಳಿಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಯಶ್, ತಮ್ಮ ಅಭಿಮಾನಿಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಈ ಜಾಹೀರಾತನ್ನು ಕೈ ಬಿಟ್ಟಿದ್ದಾರೆ ಎಂದು ಟ್ಯಾಲೆಂಟ್ ಮ್ಯಾನೆಜ್ಮೆಂಟ್ ಏಜೆನ್ಸಿ ಬಹಿರಂಗ ಪಡಿಸಿದೆ.

ಯಶ್ ಕೈ ಬಿಟ್ಟ ಆಡ್‌ನ ಮೊತ್ತವೆಷ್ಟು?

ಯಶ್ ಕೈ ಬಿಟ್ಟ ಆಡ್‌ನ ಮೊತ್ತವೆಷ್ಟು?

ಬಹುಕೋಟಿ ಮೊತ್ತದ ಜಾಹೀರಾತನ್ನು ಯಶ್ ಕೈ ಬಿಟ್ಟಿರುವುದನ್ನು ಟ್ಯಾಲೆಂಟ್ ಮ್ಯಾನೆಜ್ಮೆಂಟ್ ಕಂಪನಿಯೇ ಸ್ಪಷ್ಟಪಡಿಸಿದೆ. ಇದೇ ವೇಳೆ ಮೊತ್ತವನ್ನು ಬಹಿರಂಗ ಪಡಿಸದೆ ಹೋದರೂ, ಎರಡು ಡಿಜಿಟ್‌ ಮೊತ್ತದ ಜಾಹೀರಾತು ಎಂದು ಹೇಳಿದೆ. ಇದು 10 ಕೋಟಿಯಿಂದ 99 ಕೋಟಿವರೆಗೂ ಎಷ್ಟು ಬೇಕಿದ್ದರೂ ಆಫರ್ ಮಾಡಿರಬಹುದು. " ಇತ್ತೀಚೆಗೆ ನಾವು ಎರಡು ಡಿಜಿಟ್‌ನ ಬಹುಕೋಟಿ ಮೊತ್ತದ ಪಾನ್ ಮಸಾಲ ಬ್ರ್ಯಾಂಡ್‌ನ ಆಫರ್‌ ಅನ್ನು ಸರಿಯಾಗಿ ಯೋಚಿಸಿ ಕೈ ಬಿಟ್ಟಿದ್ದೇವೆ. ಯಶ್ ಅವರ ಪ್ಯಾನ್ ಇಂಡಿಯಾ ಇಮೇಜ್ ಅನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸರಿಯಾದ ಸಂದೇಶವನ್ನು ಅಭಿಮಾನಿಗಳಿಗೆ ತಲುಪಿಸುವ ಸಲುವಾಗಿ ಹಾಗೂ ನಮ್ಮ ಸಮಯ ಮತ್ತು ಬೆವರನ್ನು ಸಮಾನ ಮನಸ್ಥಿತಿಯುಳ್ಳ ಬ್ರ್ಯಾಂಡ್ ಜೊತೆ ಗುರುತಿಸಿಕೊಳ್ಳಲು ಬಯಸಿದ್ದೇವೆ." ಎಂದು ಎಕ್ಸೀಡ್ ಎಂಟರ್‌ಟೈನ್ಮೆಂಟ್‌ನ ಮುಖ್ಯಸ್ಥ ಅರ್ಜುನ್ ಬ್ಯಾನರ್ಜಿ ಹೇಳಿದ್ದಾರೆ.

ಬಾಲಿವುಡ್ ನಟರ ದಾರಿ ಹಿಡಿಯದ ಯಶ್

ಬಾಲಿವುಡ್ ನಟರ ದಾರಿ ಹಿಡಿಯದ ಯಶ್

ಅಕ್ಷಯ್ ಕುಮಾರ್, ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಒಳಗಾಗಿದ್ದರು. ಈ ಮೂವರು ಸ್ಟಾರ್‌ಗಳ ದಾರಿಯನ್ನು ಯಶ್ ಹಿಡಿಯದೆ ಇದ್ದಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಬಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಟ್ಟಿದ್ದಷ್ಟೇ ಅಲ್ಲ. ಜಾಹೀರಾತು ತಿರಸ್ಕರಿಸಿ ಸಂದೇಶ ಕೂಡ ರವಾನಿಸಿದ್ದಾರೆ.

ಅಕ್ಷಯ್ ಕುಮಾರ್ ಕ್ಷಮೆ

ಅಕ್ಷಯ್ ಕುಮಾರ್ ಕ್ಷಮೆ

"ನನ್ನಿಂದ ತಪ್ಪಾಗಿದೆ. ನಾನು ನನ್ನ ಅಭಿಮಾನಿಗಳು ಹಾಗೂ ಹಿತೈಷಿಗಳ ಬಳಿ ಕ್ಷಮೆ ಕೇಳಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನೀವು ನೀಡುತ್ತಿರುವ ಪ್ರತಿಕ್ರಿಯೆ ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿದೆ. ವಿಮಲ್ ಎಲೈಚಿ ಜಾಹೀರಾತಿನಲ್ಲಿ ಕಂಡಿದ್ದು ನಿಮ್ಮ ಭಾವನೆಗಳಿಗೆ ಧಕ್ಕೆಯಾಗಿರುವುದನ್ನು ನಾನು ಗೌರವಿಸುತ್ತೇನೆ. ನಮ್ರತೆಯಿಂದ ನಾನು ಈ ಜಾಹೀರಾತಿನಿಂದ ಹಿಂದೆ ಸರಿಯುತ್ತಿದ್ದೇನೆ." ಎಂದು ಅಕ್ಷಯ್ ಕುಮಾರ್ ಹೇಳಿದ್ದರು.

More from Filmibeat

English summary
Yash Rejected Multi-Crore For Endorsement Deal Paan Masala And Cardamom Brand, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X