Toxic Teaser: ಯಶ್ 'ಟಾಕ್ಸಿಕ್' 2ನೇ ಟೀಸರ್ ಔಟ್.. ಯಾರಿಗೆ ಏನೇನು ಇಷ್ಟ ಆಯ್ತು?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ 2ನೇ ಟೀಸರ್ ನಿರೀಕ್ಷೆ ಮಾಡಿದಂತೆ ರಿಲೀಸ್ ಆಗಿದೆ. 'ಟಾಕ್ಸಿಕ್' ಮೊದಲ ಟೀಸರ್ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. 2ನೇ ಟೀಸರ್ ಇನ್ನು ಹೇಗಿರುತ್ತೋ? ಅಂತ ಕುತೂಹಲದಿಂದ ಎದುರು ನೋಡುತ್ತಿದ್ದವರು ಕೊನೆಗೂ ಟೀಸರ್ ಅನ್ನು ಕಣ್ತುಂಬಿ ಕೊಂಡಿದ್ದಾರೆ. ರಾಕಿ ಭಾಯ್ ಲುಕ್, ಖದರ್ ನೋಡಿ ಫಿದಾ ಆಗಿದ್ದಾರೆ.

'ಟಾಕ್ಸಿಕ್' 2ನೇ ಟೀಸರ್ ಪ್ರೇಕ್ಷಕರಿಗೆ ಬೇರೆನೇ ಇಮೇಜ್ ಕೊಟ್ಟಿದೆ. ಇಲ್ಲಿವರೆಗೂ ಸಿನಿಮಾವನ್ನು ನೋಡುತ್ತಿದ್ದ ರೀತಿಯೇ ಬದಲಾಗಿದೆ. ಮಲಯಾಳಂ ನಿರ್ದೇಶಕ ಗೀತು ಮೋಹನ್‌ದಾಸ್ ನಿರ್ದೇಶಿಸಿದ ಈ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ. ಇನ್ನು ಈ ಬಾರಿ ಕೂಡ ನಾಯಕಿಯರನ್ನು ರಿವೀಲ್ ಮಾಡಿಲ್ಲ. ಟೀಸರ್‌ನಲ್ಲಿ ನಾಯಕಿಯರ ಚಿಕ್ಕದೊಂದು ಗ್ಲಿಂಪ್ಸ್ ಆದರೂ ಇರುತ್ತೆ ಎಂದುಕೊಂಡಿದ್ದವರಿಗೆ ಕೊಂಚ ನಿರಾಸೆ ಆಗಿದ್ದರೂ, ಯಶ್ ಲುಕ್, ಮಾಸ್ ಮ್ಯಾನರಿಸಂ, ವಿಜ್ಯೂವಲ್ಸ್ ಹಾಗೂ ಆಕ್ಷನ್ ಸೀಕ್ವೆನ್ಸ್ ಕಿಕ್ ಕೊಟ್ಟಿದೆ. ಹಾಗಿದ್ದರೆ, ಟೀಸರ್ ನೋಡಿದ ಬಳಿಕ ಎಕ್ಸ್‌ನಲ್ಲಿ ನೆಟ್ಟಿಗರು ಏನು ಹೇಳುತ್ತಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

Yash Rukmini Vasanth Nayanthara Kiara Advani starrer Toxic second teaser X reaction in Kannada

ಅಂದುಕೊಂಡಿದ್ದಕ್ಕಿಂತ 'ಟಾಕ್ಸಿಕ್' ವಿಭಿನ್ನ

"ಟಾಕ್ಸಿಕ್ ಬಗ್ಗೆ ನನ್ನ ಅನಿಸಿಕೆ. ಮೊದಲ ಪ್ರೋಮೋ ನೋಡಿದ ಬಳಿಕ ಈ ಟಾಕ್ಸಿಕ್ ಟೀಸರ್‌ ನೋಡಿದಾಗ ನಾನು ಕಲ್ಪನೆ ಮಾಡಿಕೊಂಡಿದ್ದಕ್ಕಿಂತ ವಿಭಿನ್ನ ಅಂತ ಅನಿಸಿತು. ಆರಂಭದಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಕಂಟೆಂಟ್ ತುಂಬಾನೇ ಡಿಫ್ರೆಂಟ್ ಆಗಿದೆ ಅಂತ ಅನಿಸಿತು. ಸಿನಿಮಾದ ವಿಜ್ಯೂವಲ್ಸ್, ಕಲರ್ ಗ್ರೇಡಿಂಗ್, ಆಕ್ಷನ್ ಹಾಗೂ ಇಡೀ ಟೀಸರ್ ರೂಪಿಸಿದ ರೀತಿ ಅದ್ಭುತವಾಗಿದೆ."

ಟಾಕ್ಸಿಕ್ ಟೀಸರ್ ಗ್ರ್ಯಾಂಡ್

'ಟಾಕ್ಸಿಕ್ ಟೀಸರ್ ನೋಡಿದ ಮೇಲೆ ಪ್ರಾಮಾಣಿಕವಾಗಿ ಪ್ರೊಡಕ್ಷನ್ ಡಿಸೈನ್ ಇಷ್ಟ ಆಯ್ತು. ವಿಜ್ಯೂವಲ್ ಕ್ವಾಲಿಟಿ, ಸಿನಿಮಾ ಸ್ಕೇಲ್ ಎಲ್ಲವೂ ಅದ್ಭುತವಾಗಿದೆ. ಇದು ತುಂಬಾನೇ ಮ್ಯಾಸಿವ್ ಹಾಗೂ ಗ್ರ್ಯಾಂಡ್ ಆಗಿದೆ ಎನಿಸುತ್ತಿದೆ. ರವಿ ಬಸ್ರೂರು ಮತ್ತೆ ನಿರಾಸೆ ಮಾಡಿದ್ದಾರೆ. ಅವರು ಈ ಸಿನಿಮಾಗೆ ನಿಜವಾದ ಆಯ್ಕೆ ಅಲ್ಲವೇ ಅಲ್ಲ. ಸಿನಿಮಾದ ಸ್ಟೋರಿ ಹಾಗೂ ರೈಟಿಂಗ್‌ಗೆ ಸಂಬಂಧಿಸಿದಂತೆ ನನಗೆ ಇನ್ನೂ ಅನುಮಾನಗಳಿವೆ" ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.

ಯಶ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರಾ?

"ನಾನು ಅಪ್‌ಗ್ರೇಡ್ ಆಗೋದು ಅನ್ನೋದು ಇದಕ್ಕೆ. ಈ ಹಿಂದೆ ಬಂದಿದ್ದ ಟೀಸರ್‌ಗಿಂತ ಇದು ಶಾರ್ಪ್ ಆಗಿದೆ. ಫೈಟ್ ಸೀನ್‌ಗಳು ಮಾಸ್ ಆಗಿವೆ. ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ವಿಎಫ್‌ಎಕ್ಸ್‌ ಉತ್ತಮಗೊಂಡಿದೆ. ಹಾಗೇ, ಯಶ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರಾ? ದೊಡ್ಡ ಕುರುಹುಗಳೇ ಸಿಕ್ಕಿದೆ. ಸಿನಿಮಾದ ಮೇಲೆ ಸೆಳೆತ ಮತ್ತಷ್ಟು ಹೆಚ್ಚಾಗಿದೆ. ಆದರೆ, ಒಂದು ಪ್ರಶ್ನೆ ಹಾಗೇ ಉಳಿದುಕೊಂಡಿದೆ. ಈ ಸಿನಿಮಾದ ನಾಯಕಿಯರು ಎಲ್ಲಿದ್ದಾರೆ? ಸ್ಕ್ರೀನ್‌ನಲ್ಲಿ ಪವರ್‌ ಎಂದು ಕೂಗಿದಾಗ, ವಿಸ್ಮಯದಿಂದ ನೋಡುತ್ತೀರಿ. ರಾಯ ಅನ್ನೋದು ಕೇವಲ ಒಂದು ಪಾತ್ರವಲ್ಲ. ಇದೊಂದು ಹೇಳಿಕೆ. ಟಾಕ್ಸಿಕ್ ಏನೋ ದೊಡ್ಡದನ್ನು ಲಾಕ್ ಮಾಡಿದೆ ಎಂದು ಹೇಳಲಾಗುತ್ತಿದೆ." ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಗಡ್ಡವಿಲ್ಲ ಆ ಕೊನೆಯ ಫ್ರೇಮ್

ಯಶ್ ಟಾಕ್ಸಿಕ್ ಟೀಸರ್ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ಅಂಶ ಇಷ್ಟ ಆಗಿದೆ. ಅದರಲ್ಲೂ ಒಬ್ಬರಿಗೆ ಕೊನೆಯ ಪ್ರೇಮ್ ಇಷ್ಟ ಆಗಿದೆ. ಅದರಲ್ಲಿ ಯಶ್ ಗಡ್ಡವಿಲ್ಲದೆ ಕಾಣಿಸಿಕೊಂಡಿದ್ದಾರೆ." ಯಶ್ ಬಾಸ್ ಗಡ್ಡವಿಲ್ಲದ ಆ ಕೊನೆಯ ಶಾಟ್‌ನಿಂದ ಇನ್ನೂ ನಾನು ರಿಕವರಿ ಆಗುತ್ತಿದ್ದೇನೆ" ಎಂದು ನೆಟ್ಟಿಗರು ಆಶ್ವರ್ಯ ಹಾಗೂ ಬೆಂಕಿಯ ಎಮೋಜಿ ಹಾಕಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.

"ಮಾರ್ಕೋ ತರ ಇದೆ"

"ಎಲ್ಲಾ ನಾಯಕಿಯರಿಗೂ ಇಲ್ಲಿ ಪ್ರಮುಖ ಪಾತ್ರವಿದೆ. ಆದರೆ, ಟೀಸರ್‌ನಲ್ಲಿ ಅವರನ್ನು ತೋರಿಸಿಯೇ ಇಲ್ಲ. ಟೀಸರ್‌ ಅವರೇಜ್ ಆಗಿದೆ. ರಕ್ತಪಾತವೇ ಹೆಚ್ಚಿದೆ. ಮಾರ್ಕೋ ತರಹದ ದೃಶ್ಯಗಳಿವೆ. ಎಲ್ಲರೂ ಯಶ್ ಯುವಕನಾಗಿ ಕಾಣುವ ಕೊನೆಯ ದೃಶ್ಯವನ್ನು ಮೆಚ್ಚಲೇಬೇಕು. ಅದ್ಭುತವಾಗಿದೆ." ಎಂದು ಇನ್ನೊಬ್ಬ ನೆಟ್ಟಿಗರು ಟಾಕ್ಸಿಕ್ ಟೀಸರ್ ಬಗ್ಗೆ ಬರೆದು ಪೋಸ್ಟ್ ಮಾಡಿದ್ದಾರೆ.

More from Filmibeat

English summary
Yash, Rukmini Vasanth, Nayanthara, Kiara Advani starrer Toxic second teaser X reaction in Kannada.
Read more about: yash toxic teaser
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X