'ಟಾಕ್ಸಿಕ್' ದುಬಾರಿ ರಿಲೀಸ್ ಪ್ಲ್ಯಾನ್; ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಹೊಸ ಚರಿತ್ರೆ ಆರಂಭ

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ರಾಕಿ ಭಾಯ್ ಟೀಮ್ ಭರ್ಜರಿ ಪ್ರಚಾರವನ್ನು ಆರಂಭಿಸಿದೆ. ಕಳೆದ ಕೆಲವು ದಿನಗಳಿಂದ ಸಿನಿಮಾದ ಟೀಸರ್‌ ಜೊತೆಗೆ ಪ್ರಮುಖ ಪಾತ್ರಗಳನ್ನು ರಿವೀಲ್ ಮಾಡಲಾಗಿದೆ. ಬಿಗ್ ಸಿನಿಮಾ ಇನ್ನೂ ಪ್ರಚಾರವನ್ನೇ ಮಾಡುತ್ತಿಲ್ಲ ಅಂತ ಟೀಕೆ ಮಾಡಿದವರಿಗೆ 'ಟಾಕ್ಸಿಕ್' ಟಕ್ಕರ್ ಕೊಡುತ್ತಿದೆ.

'ಟಾಕ್ಸಿಕ್' ಎದುರು ಬೇರೆ ಸಿನಿಮಾ ರಿಲೀಸ್ ಆಗಲ್ಲ. ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವುದಕ್ಕೆ ಯಶ್‌ಗೆ ಒಳ್ಳೆಯ ಅವಕಾಶ ಎನ್ನಲಾಗಿತ್ತು. ಆದರೆ, ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಇದೇ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿರೋದು ಟಫ್ ಕಾಂಪಿಟೇಷನ್ ನೀಡಬಹುದೆಂದು ಅಂದಾಜಿಸಲಾಗಿದೆ. ಅಲ್ಲದೆ ಸ್ಕ್ರೀನ್‌ಗಳ ಸಂಖ್ಯೆಯಲ್ಲೂ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಿತ್ತು.

Yash Rukmini Vasanth pan-India film Toxic target to release 5000-6000 screens

ಆದರೆ, 'ಟಾಕ್ಸಿಕ್' ಕನ್ನಡ ಚಿತ್ರರಂಗದ ಅತೀ ದೊಡ್ಡ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಹಿಂದೆಂದೂ ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾವನ್ನು ರಿಲೀಸ್ ಮಾಡಿರಲಿಲ್ಲ. ಅಷ್ಟು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದು, 'ಧುರಂಧರ್ 2' ಟಕ್ಕರ್ ಕೊಡುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ. ಹಾಗಿದ್ರೆ, 'ಟಾಕ್ಸಿಕ್' ರಿಲೀಸ್ ಸ್ಟ್ರಾಟಜಿ ಏನು? ವಿಶ್ವದಾದ್ಯಂತ ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತೆ? ಕರ್ನಾಟಕದಲ್ಲಿ ಎಷ್ಟು ಸ್ಕ್ರೀನ್‌? ತಿಳಿಯುವುದಕ್ಕೆ ಮುಂದೆ ಓದಿ.

'ಟಾಕ್ಸಿಕ್' ರಿಲೀಸ್ ಸ್ಟ್ರಾಟಜಿ

ಈ ವರ್ಷ ಅತೀ ದೊಡ್ಡ ಸಿನಿಮಾ 'ಟಾಕ್ಸಿಕ್'. ನಾಲ್ಕು ವರ್ಷಗಳ ಬಳಿಕ ಯಶ್ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ರಿಲೀಸ್‌ಗೆ ಬಿಗ್ ಪ್ಲ್ಯಾನ್ ಅನ್ನು ಮಾಡಲಾಗುತ್ತಿದೆ. ಯಶ್, ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಅವರ ತಂಡ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ನಿರ್ಮಾಣ ಆಗಿರುವುದರಿಂದ ಸಿನಿಮಾ ರಿಲೀಸ್ ಬೇರೆ ಲೆವೆಲ್‌ ಸ್ಟ್ರಾಟಜಿ ಮಾಡಲಾಗುತ್ತಿದೆ ಎನ್ನಲಾಗಿದೆ.

ಎಷ್ಟು ಸ್ಕ್ರೀನ್‌ಗಳಲ್ಲಿ ರಿಲೀಸ್?

'ಟಾಕ್ಸಿಕ್' ಸಿನಿಮಾ ಕನ್ನಡ ಅಷ್ಟೇ ಅಲ್ಲ, ಭಾರತದ ಅತೀ ದೊಡ್ಡ ರಿಲೀಸ್ ಆಗುವ ಸಾಧ್ಯತೆಯಿದೆ. ಫಿಲ್ಮ್ ಟ್ರೇಡ್ ಅನಲಿಸ್ಟ್ ಸಮಿತ್ ಕಡೆಲ್ ಅವರ ಪ್ರಕಾರ, 'ಟಾಕ್ಸಿಕ್' ಕನ್ನಡದ ಅತೀ ದೊಡ್ಡ ರಿಲೀಸ್ ಆಗಲಿದೆ. ಭಾರತದ ಹಾಗೂ ವಿಶ್ವದಾದ್ಯಂತ ಸುಮಾರು 5 ಸಾವಿರದಿಂದ 6 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಒಂದು 6 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆದರೆ, ಈ ವರ್ಷ ಬಿಗ್ ರಿಲೀಸ್ ಆಗುವುದರಲ್ಲಿ ಡೌಟೇ ಇಲ್ಲ.

Yash Rukmini Vasanth pan-India film Toxic target to release 5000-6000 screens

ಕರ್ನಾಟಕದಲ್ಲಿ ಎಷ್ಟು ಸ್ಕ್ರೀನ್

'ಟಾಕ್ಸಿಕ್' ಹಾಗೂ 'ಧುರಂಧರ್ 2' ಬಾಕ್ಸಾಫೀಸ್‌ನಲ್ಲಿ ಕ್ಲ್ಯಾಶ್ ಆಗುತ್ತಿರುವುದರಿಂದ ಕರ್ನಾಟಕಕ್ಕೆ ಎಷ್ಟು ಸ್ಕ್ರೀನ್ ಸಿಗಬಹುದು? ಅನ್ನೋ ಲೆಕ್ಕಾಚಾರ ಶುರುವಾಗಿದೆ. ಕರ್ನಾಟಕದ ವಿತರಕರ ಪ್ರಕಾರ, ಇಲ್ಲಿ ಸುಮಾರು 485 ರಿಂದ 530 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಬಹುದು. ಇದರಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳು ಕೂಡ ಸೇರಿವೆ ಎಂದು ಹೇಳುತ್ತಿದ್ದಾರೆ.

ಯಾವ್ಯಾವ ಭಾಷೆಗೆ ಎಷ್ಟೆಷ್ಟು ಸ್ಕ್ರೀನ್ಸ್?

'ಟಾಕ್ಸಿಕ್' ಥಿಯೇಟ್ರಿಕಲ್ ರೈಟ್ಸ್ ಲಾಕ್ ಆಗಿದೆ. ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಅವರೇ ವಿತರಣೆ ಮಾಡುತ್ತಿದ್ದಾರೆ. ಹೀಗಾಗಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದಂತೂ ಕನ್ಫರ್ಮ್. ಕರ್ನಾಟಕದಲ್ಲಿ ಯಾವ್ಯಾವ ಭಾಷೆಗೆ ಎಷ್ಟೆಷ್ಟು ಸ್ಕ್ರೀನ್ ಸಿಗಬಹುದೆಂದು ವಿತರಕರು ವಲಯದಲ್ಲಿ ಕೇಳಿ ಬರುತ್ತಿರುವ ಲೆಕ್ಕ ಹೀಗಿದೆ.

ಕನ್ನಡ 250-300 ಸ್ಕ್ರೀನ್ಸ್
ಹಿಂದಿ 40-60 ಸ್ಕ್ರೀನ್ಸ್
ತಮಿಳು 40-50 ಸ್ಕ್ರೀನ್ಸ್
ತೆಲುಗು 35-50 ಸ್ಕ್ರೀನ್ಸ್
ಮಲಯಾಳಂ 15-25 ಸ್ಕ್ರೀನ್ಸ್

More from Filmibeat

English summary
Yash, Rukmini Vasanth pan-India film Toxic target to release 5000-6000 screens.
Read more about: yash toxic kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X