ಸಲಾಂ ರಾಕಿ ಭಾಯ್ ಎಂದು ಹಾಡಿದ ಯಶ್ ಪುತ್ರಿ ಐರಾ: ವಿಡಿಯೋ ಸಿಕ್ಕಾಪಟ್ಟೆ ವೈರಲ್

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗಿ ಮೂರು ವಾರ ಕಳೆದಿದ್ದರೂ, ಇನ್ನೂ ಈ ವಾರ ಬಿಡುಗಡೆಯಾಗಿರುವ ಚಿತ್ರಕ್ಕೆ ಕಾಂಪಿಟೇಷನ್ ಕೊಡುತ್ತಿದೆ. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ರಾಕಿ ಭಾಯ್ ಯಶ್ ಜಾಲಿ ಮೂಡಿಗೆ ಜಾರಿದ್ದಾರೆ. ಅದರಲ್ಲೂ ವೀಕೆಂಡ್‌ನಲ್ಲಿ ಯಶ್ ಹಾಕಿದ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ 'ಕೆಜಿಎಫ್ 2' ಸಿನಿಮಾದಷ್ಟೇ ಸದ್ದು ಮಾಡುತ್ತಿದೆ.

'ಕೆಜಿಎಫ್' ಸಿನಿಮಾದಲ್ಲಿ ರಾಕಿ ಭಾಯ್ ಖದರ್ ನೋಡಿ, ಇಡೀ ವಿಶ್ವವೇ ಸಲಾಂ ರಾಕಿ ಭಾಯ್ ಎನ್ನುತ್ತಿದೆ. ಬಾಕ್ಸಾಫೀಸ್‌ ಕೂಡ ರಾಕಿ ಖದರ್‌ಗೆ ಸಲಾಂ ಹೊಡೆಯುತ್ತಿದೆ. ಈ ಮಧ್ಯೆ ಯಶ್ ಪುತ್ರಿ ಐರಾ ಕೂಡ ಸಲಾಂ ರಾಕಿ ಭಾಯ್ ಎಂದು ಹಾಡಿದ್ದಾರೆ. ಇದೇ ವಿಡಿಯೋ ಬೇಜಾನ್ ವೈರಲ್ ಆಗುತ್ತಿದೆ.

ಸಲಾಂ ರಾಕಿ ಭಾಯ್ ಎಂದು ಹಾಡಿದ ಐರಾ

ಯಶ್ ಪುತ್ರಿ ಐರಾ 'ಕೆಜಿಎಫ್ ಚಾಪ್ಟರ್ 1' ಚಿತ್ರದ ಹಾಡನ್ನು ಹಾಡಿದ್ದಾರೆ. 'ಸಲಾಂ ರಾಕಿ ಭಾಯ್ ಎಂದು ಹಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ವೈರಲ್ ಆಗುತ್ತಿತ್ತು. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Yash Shared Twitter Video Of His Daughter Ayra Making Fun Of Rokcy Bhai

ಯಶ್, ಐರಾ ಹಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಷ್ಟೇ ಅಲ್ಲ. 'ಪ್ರತಿದಿನ ಎದ್ದ ಕೂಡಲೇ ರಾಕಿ ಬಗ್ಗೆ ತಮಾಷೆ​ ಮಾಡಲೇಬೇಕು.' ಎಂದು ಪ್ರೀತಿ ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಯಶ್ ಅಭಿಮಾನಿಗಳು ಈ ಮುದ್ದಾದ ವಿಡಿಯೋವನ್ನು ಎಲ್ಲಾ ಕಡೆ ಶೇರ್ ಮಾಡುತ್ತಿದ್ದಾರೆ.

ಚಿಕ್ಕ ಮಕ್ಕಳಿಗೂ ಇಷ್ಟ ರಾಕಿ ಭಾಯ್

'ಕೆಜಿಎಫ್ 2' ಕ್ರೇಜ್ ಹೇಗಿದೆ ಅನ್ನೋದು ಕಳೆದ 15 ದಿನಗಳಿಂದ ನೋಡುತ್ತಲೇ ಇದ್ದೇವೆ. ವಿಶ್ವದ ಮೂಲೆ ಮೂಲೆಗೂ ರಾಕಿಂಗ್ ಸ್ಟಾರ್ ಯಶ್, ರಾಕಿ ಭಾಯ್ ಅವತಾರದಲ್ಲಿ ತಲುಪಿದ್ದಾಗಿದೆ. ವಯಸ್ಸಿನ ಅಂತರವಿಲ್ಲದೆ ಸಲಾಂ ರಾಕಿ ಭಾಯ್ ಅಂತ ಗುನುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಪೋಷಕರೊಂದಿಗೆ 'ಕೆಜಿಎಫ್ 2' ಸಿನಿಮಾದ ನೋಡಿದ ಬಾಲಕನೊಬ್ಬ ರಾಕಿ ಭಾಯ್ ಅನ್ನು ಭೇಟಿ ಮಾಡಬೇಕು ಎಂದು ಹಠ ಹಿಡಿದಿದ್ದ. ಆಗಲೂ ಯಶ್ ಸೋಶಿಯಲ್ ಮೀಡಿಯಾದ ಮೂಲಕವೇ ಪುಟ್ಟ ಬಾಲಕನನ್ನು ಸಮಾಧಾನ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುವುದು ಇನ್ನೂ ನಿಲ್ಲಿಸಿಲ್ಲ

ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಅನ್ನುವುದು ಮತ್ತೆ ಸಾಬೀತಾಗಿದೆ. 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ಸಮೀಪದಲ್ಲಿದೆ. ಇನ್ನೇನು ಈ ವಾರ ಮುಗಿಯುವುದರೊಳಗೆ 'ಕೆಜಿಎಫ್ 2' ಸಾವಿರ ಕೋಟಿ ಗಡಿದಾಟಲಿದೆ. ಟ್ರೇಡ್ ಅನಲಿಸ್ಟ್ ರಮೇಶ್ ಬಾಲ ಈಗಾಗಲೇ 'ಕೆಜಿಎಫ್ 2' 1000 ಕೋಟಿ ದಾಟಿದೆ ಎಂದು ಹೇಳಿದ್ದಾರೆ.

ಇಡೀ ವಿಶ್ವವೇ ರಾಕಿ ಭಾಯ್ ಖದರ್‌ಗೆ ಸಲಾಂ ಎಂದು ಸೆಲ್ಯೂಟ್ ಹೊಡೆಯುತ್ತಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದ್ದು ಸಾಮಾನ್ಯ ಸಾಧನೆಯೇ ಏನಲ್ಲ. ಸದ್ಯ 'ಕೆಜಿಎಫ್ 2' ಸಾವಿರ ಕೋಟಿ ಲೂಟಿ ಮಾಡಿದೆಯಾ? ಅನ್ನುವ ಗೊಂದಲದಲ್ಲಿದ್ದು, ಶೀಘ್ರದಲ್ಲಿಯೇ ಗೊಂದಲ ಪರಿಹಾರವಾಗಬಹುದು.

More from Filmibeat

English summary
Yash Shared Twitter Video Of His Daughter Ayra Making Fun Of Rokcy Bhai, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X