ಕನ್ನಡದ ಮತ್ತೊಂದು ಸಿನಿಮಾ 'ಕರಿಕಾಡ' ಪ್ಯಾನ್ ಇಂಡಿಯಾ ರಿಲೀಸ್; ಏನಿದರ ವಿಶೇಷ

ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಯುವ ಪ್ರತಿಭೆಗಳು ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇಂತಹದ್ದೇ ಒಂದು ಸಿನಿಮಾ 'ಕರಿಕಾಡ'. ಇದು ಕನ್ನಡದಲ್ಲಿ ನಿರ್ಮಾಣ ಆಗಿದ್ದು, ಪಂಚಭಾಷೆಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

'ಕರಿಕಾಡ' ಟೈಟಲ್‌ನಿಂದಲೇ ಗಮನ ಸೆಳೆಯುತ್ತಿರುವ ಈ ಸಿನಿಮಾ ಕೂಡ ಅಷ್ಟೇ ವಿಭಿನ್ನಾವಾಗಿದೆ. ಇದೊಂದು ಮ್ಯೂಸಿಕಲ್ ಜರ್ನಿಯ ಜೊತೆಗೆ ಅಡ್ವೆಂಚರಸ್ ಎಲಿಮೆಂಟ್ಸ್ ಇಟ್ಟುಕೊಂಡು ಮಾಡಿರುವ ಸಿನಿಮಾ. ಮೂರು ತಿಂಗಳ ಹಿಂದೆ ಟೈಟಲ್ ಟೀಸರ್ ರಿಲೀಸ್ ಮಾಡಿ 'ಕರಿಕಾಡ' ಚಿತ್ರತಂಡ ಸದ್ದು ಮಾಡಿತ್ತು. ಇದೀಗ ಅಧಿಕೃತ ಟೀಸರ್ ರಿಲೀಸ್ ಮಾಡಿ ಗಮನ ಸೆಳೆದಿದೆ.

Yash Shetty and Nireeksha Shetty starrer Karikaada movie releasing pan india on Feb 6th

ಯುವ ಪ್ರತಿಭೆಗಳ 'ಕರಿಕಾಡ' ಸಿನಿಮಾದ ಟೀಸರ್ ಹೊಸ ಭರವಸೆ ಹುಟ್ಟಿಸಿದೆ. ಸಾಹಸಮ ದೃಶ್ಯಕಾವ್ಯವಾಗಿ, ಪ್ರೇಮಕಥೆಯ ರೂಪಕವಾಗಿ, ನಮ್ಮ ಮಣ್ಣಿನ ಸೊಗಡನ್ನ ಸೂಸುವಂತಹ ಕಥಾಹಂದರ ಹೊಂದಿದೆ. ಇಷ್ಟೇ ಅಲ್ಲದೆ ಇದೊಂದು ರಿವೇಂಜ್ ಸ್ಟೋರಿಯಂತೆ ಎದ್ದು ಕಾಣುತ್ತಿದೆ. ಇಷ್ಟೇ ಅಲ್ಲದೆ ಸಿನಿಮಾ ಕಥೆಯ ಜೊತೆಗೆ ತಾಂತ್ರಿಕತೆಯಲ್ಲಿಯೂ ಗಮನ ಸೆಳೆದಿದೆ.

ಈ ಸಿನಿಮಾದಲ್ಲಿ ಕಾಡ ನಟರಾಜ್ ನಾಯಕ ನಟನಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಮುಖ ಪಾತ್ರದಲ್ಲಿ ಬಲರಾಜವಾಡಿ,ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರರಂಗದ ಚೆಲುವೆ ನಿರೀಕ್ಷಾ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ಮಂಜು ಸ್ವಾಮಿ, ಗೋವಿಂದ ಗೌಡ , ದೀವಾಕರ್, ಕಾಮಿಡಿ ಕಿಲಾಡಿ ಸೂರ್ಯ, ದಿ.ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್, ಬಾಲನಟಿ ರಿದ್ಧಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇನ್ನು ಈ ಸಿನಿಮಾವನ್ನು ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್‌ನಲ್ಲಿ ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಪತಿಯ ಕನಸಿನ ಈ ಸಿನಿಮಾ ಮೂಲಕ ಈಡೇರಿಸಿದ್ದಾರೆ. ಇನ್ನು ಇವರ ಕನಸಿಗೆ ಸ್ನೇಹಿತ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

'ಕರಿಕಾಡ' ಸಿನಿಮಾವನ್ನು ಗಿಲ್ಲಿ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹೀರೋ ಕಾಡ ನಟರಾಜ ಅವರೇ ಸಿನಿಮಾಗೆ ಕಥೆ ಬರೆದಿದ್ದಾರೆ. ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಾಗಿರಿ ಕಂಪೋಸ್ ಮಾಡಿದ್ದಾರೆ. ಶಶಾಂಕ್ ಶೇಷಾಗರಿ ಅವರು ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತವನ್ನ ನೀಡಿದ್ದಾರೆ. ಜೀವನ್ ಗೌಡ ಕೆಲಸ ಕ್ಯಾಮರಾವರ್ಕ್ ಇದ್ದರೆ, ದೀಪಕ್ ಸಿ.ಎಸ್ ಸಂಕಲನವಿದೆ.

'ಕರಿಕಾಡ' ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ ತಮ್ಮ ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲೂ ಅಪ್ಪಟ ಕನ್ನಡಿಗರು ಮಾಡಿರೋ ಈ ಕನ್ನಡ ಸಿನಿಮಾವನ್ನ ನೋಡಿ ಬಾಲಿವುಡ್ ಫಿಲಂ ಟ್ರೇಡಸ್೯ ಖುದ್ದು ಈ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರಂತೆ. ಅಲ್ಲದೇ ಕನ್ನಡ ಸಿನಿಮಾವೊಂದಕ್ಕೆ ಇಷ್ಟೊಂದು ಬ್ರ್ಯಾಂಡ್‌ಗಳೂ ಬಂದಿರೋದು ಇದೇ ಮೊದಲು ಎನ್ನುತ್ತೆ ಚಿತ್ರತಂಡ. ಮಾರ್ಕೆಟಿಂಗ್ ವಿಚಾರದಲ್ಲಿ 'ಕರಿಕಾಡ' ಸಿನಿಮಾ ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ ಎಂದೂ ಹೇಳಿಕೊಂಡಿದೆ. ನಿರೀಕ್ಷೆ ಹುಟ್ಟಿಸಿದ ಹೊಸ ನಾಯಕ ಕಾಡ ನಟರಾಜ್ ನಟನೆಯ ಈ 'ಕರಿಕಾಡ' ಸಿನಿಮಾ ಇದೇ ಫೆಬ್ರವರಿ 6, 2026ಕ್ಕೆ ವಿಶ್ವದಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಕರಿಕಾಡ ಸಿನಿಮಾಗೆ ಕಾರ್ಪೋರೇಟ್ ಜಗತ್ತಿನ ಬ್ರ್ಯಾಂಡ್ಸ್ ಸಾಥ್ ನೀಡಿದ್ದು, ಉತ್ತರ ಭಾರತದಲ್ಲಿ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಸ್ಕೆಚ್ ಹಾಕಲಾಗಿದೆ.

More from Filmibeat

English summary
Buzz: After releasing from jail Darshan will do back to back 2 movies here is the details.
Read more about: darshan upcoming movies jail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X