»   » ರಂಗಿತರಂಗ ಸೌಂಡಿಗೆ ಥ್ರಿಲ್ ಆದ ಮುರಳಿ, ಯಶ್

ರಂಗಿತರಂಗ ಸೌಂಡಿಗೆ ಥ್ರಿಲ್ ಆದ ಮುರಳಿ, ಯಶ್

Posted By:
Subscribe to Filmibeat Kannada

ಸಂಪೂರ್ಣ ಯುವಪ್ರತಿಭೆಗಳ ರೋಚಕ ಕಥೆ "ರಂಗಿತರಂಗ" ಚಿತ್ರವೊಂದು ಸದ್ದಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸೌಂಡ್ ಮಾಡ್ತಿದೆ ಅಂತಾ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಾವೇ ನಿಮಗೆ ಹೇಳಿದ್ವಿ ಅಲ್ವಾ. ಇದೀಗ ಹೊಸದಾಗಿ ಬಂದ ನ್ಯೂಸ್ ಏನಪ್ಪಾ ಅಂದ್ರೆ, ಈ ಹೊಸಬರ ಚಿತ್ರದ ಟ್ರೈಲರ್ ನೋಡಿದ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು 'ಉಗ್ರಂ' ಖ್ಯಾತಿಯ ಶ್ರೀಮುರುಳಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

"ಇಡೀ ಚಿತ್ರತಂಡ ಹೃದಯದಿಂದ ಜೊತೆಗೆ ಪ್ರೀತಿಯಿಂದ ಸಿನಿಮಾ ಮಾಡಿದ್ದಾರೆ, ಮಾತ್ರವಲ್ಲದೇ ನೀಟಾಗಿ ಎಲ್ಲಾ ಕೆಲಸಗಳನ್ನು ಮುಗಿಸಿದ್ದಾರೆ. ಲ್ಯಾನ್ಸ್ ಕ್ಯಾಪ್ಲನ್ ಮತ್ತು ವಿಲಿಯಂ ಡೇವಿಡ್ ಅವರು ಮಾಡಿರುವ ಕ್ಯಾಮರಾ ವರ್ಕ್ "ಒನ್ ಆಫ್ ದಿ ಬೆಸ್ಟ್'' ಕ್ಯಾಮಾರ ವರ್ಕ್ ಆಗಿದೆ. ಇನ್ನು ಈ ಚಿತ್ರದ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿ''

''ಈಗ ಬರ್ತಾ ಇರೋ ಮೂವಿ "ಒನ್ ಆಫ್ ದಿ ಬೆಸ್ಟ್'' ಮೂವಿ. ಒಳ್ಳೊಳ್ಳೆಯ ಸಿನೆಮಾಗಳು ಬಂದಾಗ ನಮ್ಮಂತವರು ಸಪೋರ್ಟ್ ಮಾಡಬೇಕು. ಒಳ್ಳೆಯ ನಿರ್ದೇಶಕ, ನಿರ್ಮಾಪಕರುಗಳು ಒಳ್ಳೆ ಸಿನೆಮಾ ತೆಗೆಯೋದೇ ಒಳ್ಳೆ ಸಿನೆಮಾ ಆಗ್ಲಿ ಅಂತಾ. ಸೋ ಪ್ರೇಕ್ಷಕರಾದ ನೀವು ಸಿನೆಮಾ ನೋಡಿ ಗೆಲ್ಲಿಸಿ ಆಲ್ ದಿ ಬೆಸ್ಟ್" ಅಂತಾ ಶ್ರೀ ಮುರುಳಿ ತುಂಬು ಹೃದಯದಿಂದ ಹಾರೈಕೆ ಮಾತುಗಳನ್ನಾಡಿದ್ದಾರೆ. [ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್]

rangitaranga

"ರಂಗಿತರಂಗ' ಚಿತ್ರದ ಟ್ರೈಲರ್ ನ ನೋಡಿದೆ, ತುಂಬಾನೇ ಇಂಪ್ರೆಸ್ ಆಗಿದ್ದೀನಿ. ಯಾಕಂದ್ರೆ ಒಂದು ಟ್ರೈಲರ್ ಒಳಗೆ ಏನಿರುತ್ತೆ ಅದು ಪ್ರತಿ ಚಿತ್ರದ ಇನ್ವಿಟೇಷನ್ ಕಾರ್ಡ್ ಇದ್ದಂತೆ. ನಾನು ನಂಬೋದು ಒಂದು ಟ್ರೈಲರಿಂದ ಆ ಸಿನೆಮಾದ ವ್ಯಾಲ್ಯೂ ಏನು ಅಥವಾ ಅದು ಯಾವ ಮಟ್ಟದಲ್ಲಿ ತಯಾರಾಗಿದೆ ಅಂತಾ ಅರ್ಥ ಆಗುತ್ತೆ. ಅದರ ಜೊತೆಗೆ ಈ ಸಿನೆಮಾದಲ್ಲಿ ಕೆಲಸ ಮಾಡಿರುವ ಎಲ್ಲರು ಹೊಸಬ್ಬರು. ಎಲ್ಲರಿಗೆ ಹೊಸ ಪ್ರಯತ್ನ. ತುಂಬಾನೇ ಖುಷಿ ಆಗ್ತಿದೆ, ನಮ್ ಸಿನೆಮಾ ಇಂಡಸ್ಟ್ರಿಯಲ್ಲಿ ಈ ಥರದ ಸಿನೆಮಾ ಬರ್ತಾ ಇರೋದು.''

''ಯಾಕಂದ್ರೆ ಕ್ವಾಲಿಟಿಯಲ್ಲೂ ತುಂಬಾ ಮುಂದಿದ್ದಾರೆ. ನಮ್ ಇಂಡಸ್ಟ್ರಿಗೆ ಇಂತಹ ಸಿನೆಮಾಗಳು ಬರಬೇಕು. ಈ ಥರದ ತಂತ್ರಜ್ಞಾನರು ಬರಬೇಕು. ಈ ಸಿನೆಮಾದ ಇನ್ನೊಂದು ವಿಶೇಷತೆ ಅಂದ್ರೆ ಹಾಲಿವುಡ್ ಸಿನೆಮಾಟೋಗ್ರಾಫರ್ ಲ್ಯಾನ್ಸ್ ಕ್ಯಾಪ್ಲನ್ ಮತ್ತು ಕನ್ನಡಿಗ ವಿಲಿಯಂ ಡೇವಿಡ್ ಇಬ್ರೂ ಸೇರಿ ಈ ಚಿತ್ರಕ್ಕೆ ಕೆಲಸ ಮಾಡಿರೋದು. ಸಿನೆಮಾಟೋಗ್ರಫಿ ಹೈ ಲೆವಲಿಗಿದೆ.''

''ನಾನು ಮೊದಲು ಇಂಪ್ರೆಸ್ ಆಗಿದ್ದು ಸಿನೆಮಾಟೋಗ್ರಫಿಗೆ. ಒಂದೊಂದು ಫ್ರೇಮ್ ಗಳೂ ಪೇಂಟಿಂಗ್ ಥರಾ ಇದೆ. ಇನ್ನೂ ಇನ್ನೊಂದು ಇಂಪ್ರೆಸ್ ಆಗಿದ್ದು, ನಿರೂಪಣೆ, ಹೀರೊ ಫೇಸ್ ತುಂಬಾನೇ ಅಪೀಲಿಂಗ್ ಆಗಿದೆ. ಹೀರೊ ಮೆಟಿರಿಯಲ್ ಕಾಣ್ತಾ ಇದೆ.''

''ಶಾರ್ಟ್ ಮೂವಿ ಮಾಡಿ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಫೇಮಸ್ ಆಗಿರೋ ಅನೂಪ್ ಭಂಡಾರಿ ಈ ಚಿತ್ರಕ್ಕೆ ಡೈರೆಕ್ಟ್ ಮಾಡಿದ್ದಾರೆ. ಎಲ್ಲರೂ ಈ ಚಿತ್ರದ ಟ್ರೈಲರ್ ನೋಡಿ ಮೆಚ್ಚಿಕೊಳ್ಳುತ್ತೀರಿ ಅಂದುಕೊಂಡಿದ್ದೇನೆ. ನಾನು ಟ್ರೈಲರ್ ಅಷ್ಟೇ ನೋಡಿದ್ದೀನಿ. ಈ ಟ್ರೈಲರ್ ಗೆ ಗೌರವ ಸಲ್ಲಬೇಕು. ನೀವು ನೋಡಿ, ಹೊಸಬ್ಬರನ್ನು ಪ್ರೋತ್ಸಾಹಿಸಿ. ಎಲ್ಲರಿಗೂ ಶೇರ್ ಮಾಡಿ. ನಿಮ್ಮೆಲ್ಲರ ಸಪೋರ್ಟ್ ಕನ್ನಡ ಚಿತ್ರರಂಗಕ್ಕೆ ಇರಬೇಕು ಒಳ್ಳೆಯದಾಗಲಿ ನಮಸ್ಕಾರ" ಅಂತಾ ರಾಕಿಂಗ್ ಸ್ಟಾರ್ ಯಶ್ ಶುಭ ಹಾರೈಸಿದ್ದಾರೆ. [ಈ ಹಾಡು ಕೇಳಿ..ನಿಮ್ಮ ನಾಲಿಗೆಗೆ ಕಸರತ್ತು ಕೊಡಿ...]

'ರಂಗಿತರಂಗ' ಮೂಲಕ ನಿರುಪ್ ಭಂಡಾರಿ, ರಾಧಿಕಾ ಚೇತನ್ ಸ್ಯಾಂಡಲ್ ವುಡ್ ಗೆ ಪರಿಚಯವಾಗ್ತಿದ್ದಾರೆ. ಇಬ್ಬರ ಜೊತೆ ವಿಶೇಷ ಪಾತ್ರದಲ್ಲಿ ಸಾಯಿ ಕುಮಾರ್ ಕಾಣಿಸಿಕೊಂಡಿರುವುದು ಸ್ಪೆಷಲ್. ಮೊದಲ ನೋಟಕ್ಕೆ ಮರ್ಡರ್ ಮಿಸ್ಟರಿ, ಹಾರರ್ ಥ್ರಿಲ್ಲರ್ ಚಿತ್ರದಂತೆ ಕಾಣುವ 'ರಂಗಿತರಂಗ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಯುವ ಪ್ರತಿಭೆ ಅನೂಪ್ ಭಂಡಾರಿ. ಸದ್ಯದಲ್ಲೇ ಚಿತ್ರ ತೆರೆಕಾಣಲಿದೆ.

English summary
Rocking Star Yash and Sri murali have praised upcoming movie RangiTaranga directed by Anup Bhandari. 'Rangitaranga' features Nirup Bhandari, Radhika Chetan, Sai Kumar and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada