»   » ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್

ಸೋಷಿಯಲ್ ಮೀಡಿಯಾದಲ್ಲಿ 'ರಂಗಿತರಂಗ' ಸೂಪರ್ ಹಿಟ್

Posted By:
Subscribe to Filmibeat Kannada

ಬಹುಶಃ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಆದ್ಮೇಲೆ ಸಂಪೂರ್ಣ ಯುವ ಪ್ರತಿಭೆಗಳೆ ಸೇರಿ ಮಾಡಿರುವ 'ರಂಗಿತರಂಗ' ಚಿತ್ರವೊಂದಕ್ಕೆ ಇರ್ಬೇಕು ಸಾಮಾಜಿಕ ಜಾಲತಾಣಗಳಲ್ಲಿ ಈ ಪರಿ ಮೆಚ್ಚುಗೆ ವ್ಯಕ್ತವಾಗುತ್ತಿರುವುದು.

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲಿ ಕಚಗುಳಿ ಇಡುವ ಡೈಲಾಗ್ಸ್ ಇತ್ತು. ಆದ್ರೆ, 'ರಂಗಿತರಂಗ' ಚಿತ್ರದಲ್ಲಿ ಹಾಗಿಲ್ಲ. ನಗಿಸಲೇಬೇಕು ಅನ್ನುವ ಕಾರಣಕ್ಕೆ ಡಬಲ್ ಮೀನಿಂಗ್ ಡೈಲಾಗ್ಸ್ ತುರುಕಿಲ್ಲ.

Kannada Movie 'Rangitaranga' becoming viral in Social Media

'ರಂಗಿತರಂಗ' ಚಿತ್ರದಲ್ಲಿ ಒಂದು ರೋಚಕ ಕಥೆ ಇದೆ. ಇಡೀ ಸಿನಿಮಾ ಉದ್ದಕ್ಕೂ ಕುತೂಹಲ ಕೆರಳಿಸುವ ಸನ್ನಿವೇಶಗಳಿವೆ. ಕಣ್ಣಿಗೆ ಮುದ ನೀಡುವ ಸುಂದರ ತಾಣಗಳಿವೆ. ಕಿವಿ ಇಂಪು ನೀಡುವ ಸಂಗೀತ ಇದೆ. ಇಷ್ಟೆಲ್ಲಾ ಇರುವ 'ರಂಗಿತರಂಗ' ಫೇಸ್ ಬುಕ್, ಟ್ವಿಟ್ಟರ್ ಮತ್ತು ಯೂಟ್ಯೂಬ್ ನಲ್ಲಿ ಸಖತ್ ಹಿಟ್ ಆಗಿದೆ.

ಬರೀ ಹೊಸ ಮುಖಗಳೇ ಇರುವ 'ರಂಗಿತರಂಗ' ಚಿತ್ರದಲ್ಲಿ ಅಂಥದ್ದೇನಿದೆ ಅಂತ ನೀವು ಕಣ್ಣರಳಿಸುತ್ತಿದ್ದರೆ, ಒಮ್ಮೆ ಈ ಟ್ರೈಲರ್ ಗಳನ್ನ ನೋಡಿ...


ಮೊದಲ ನೋಟಕ್ಕೆ ಮರ್ಡರ್ ಮಿಸ್ಟರಿ, ಹಾರರ್ ಥ್ರಿಲ್ಲರ್ ಚಿತ್ರದಂತೆ ಕಾಣುವ 'ರಂಗಿತರಂಗ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಯುವ ಪ್ರತಿಭೆ ಅನೂಪ್ ಭಂಡಾರಿ. ನಿರ್ದೇಶನದ ಜೊತೆಗೆ ಸಾಹಿತ್ಯ ರಚಿಸಿ, ಸಂಗೀತವನ್ನೂ ಸಂಯೋಜಿಸಿದ್ದಾರೆ ಅನೂಪ್ ಭಂಡಾರಿ.

'ರಂಗಿತರಂಗ' ಮೂಲಕ ನಿರುಪ್ ಭಂಡಾರಿ, ರಾಧಿಕಾ ಚೇತನ್ ಸ್ಯಾಂಡಲ್ ವುಡ್ ಗೆ ಪರಿಚಯವಾಗ್ತಿದ್ದಾರೆ. ಇಬ್ಬರ ಜೊತೆ ವಿಶೇಷ ಪಾತ್ರದಲ್ಲಿ ಸಾಯಿ ಕುಮಾರ್ ಕಾಣಿಸಿಕೊಂಡಿರುವುದು ಸ್ಪೆಷಲ್.

ಲ್ಯಾನ್ಸ್ ಕ್ಯಾಪ್ಲನ್ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಟ್ರೈಲರ್ ನ ಪ್ರತಿ ಫ್ರೇಮ್ ನಲ್ಲೂ ಕಣ್ಣುಕುಕ್ಕುತ್ತೆ. ಟ್ರೈಲರ್ ಮಾತ್ರದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ 'ರಂಗಿತರಂಗ' ಸೂಪರ್ ಹಿಟ್ ಆಗುತ್ತಿದೆ.

English summary
New Comer Anup Bhandari directorial 'Rangitaranga' is becoming viral in Social Media. 'Rangitaranga' features Nirup Bhandari, Radhika Chetan, Sai Kumar and others.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada