ಕೊನೆಗೂ 'ಬಾಹುಬಲಿ 2' ಹಿಂದಿಕ್ಕಿದ 'ಕೆಜಿಎಫ್ 2': ದಾಖಲೆ ಮಾಡೋದು ಇನ್ನೂ ಇದೆ!
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಸ್ಯಾಂಡಲ್‌ವುಡ್‌ಗೆ ವರನೋ.. ಶಾಪನೋ ಗೊತ್ತಿಲ್ಲ. ಯಾಕಂದ್ರೆ, 'ಕೆಜಿಎಫ್ 2' ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರ ಅಭಿರುಚಿನೂ ಬದಲಾಗಿದೆ. ಒಂದು ಕಡೆ ಈ ಸಿನಿಮಾ ದಾಖಲೆ ಬರೆದು ವಿಶ್ವದ ಗಮನ ಸೆಳೆದಿದೆ. ಇನ್ನೊಂದು ಕಡೆ ಕನ್ನಡದ ಸ್ಮಾಲ್ ಬಜೆಟ್ ಸಿನಿಮಾಗಳ ಕಡೆ ತಿರುಗಿ ನೋಡುತ್ತಿಲ್ಲವೆಂಬ ಅಳಲು ಕೂಡ ಕೇಳಿಸುತ್ತಿದೆ. ಇವೆಲ್ಲ ಏನೇ ಇದ್ದರೂ 'ಕೆಜಿಎಫ್ 2' ದಾಖಲೆ ಬರೆಯುವುದನ್ನು ಮಾತ್ರ ನಿಲ್ಲಿಸಿಲ್ಲ.
'ಕೆಜಿಎಫ್ 2' ಹಲವು ದಾಖಲೆಗಳನ್ನು ಈಗಾಗಲೇ ಬರೆದಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಕಡೆಯಲ್ಲೂ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿ ಮುನ್ನುಗ್ಗುತ್ತಿದೆ. ಈ ಮಧ್ಯೆನೇ ಬಾಕ್ಸಾಫೀಸ್‌ನಲ್ಲಿ 'ಬಾಹುಬಲಿ 2' ದಾಖಲೆಯನ್ನು ಹಿಂದಕ್ಕೆ ಹಾಕುವ ಶತ ಪ್ರಯತ್ನವೂ ನಡೆಯುತ್ತಿದೆ.
'ಕೆಜಿಎಫ್ 2' ಹಲವು ಕಾರಣಗಳಿಗೆ ವಿಶ್ವದ ಗಮನ ಸೆಳೆಯುತ್ತಿದೆ. ಒಂದು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಲೂಟಿ ಮಾಡಿದ ಮೇಲೆ ಆ ಯಶಸ್ಸನ್ನು ಅಳೆದು ತೂಗಿ ಲೆಕ್ಕ ಹಾಕಲಾಗುತ್ತೆ. ಈ ಬೆನ್ನಲ್ಲೇ 'ಕೆಜಿಎಫ್ 2' ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಸಿನಿಮಾವನ್ನು ಮತ್ತೊಂದು ವಿಭಾಗದಲ್ಲಿ ಹಿಂದಿಕ್ಕಿದೆ. ಆದರೆ, ದಾಖಲೆ ಮಾಡುವುದು ಇನ್ನೂ ಇದೆ. ಅದೇನು ಎಂದು ತಿಳಿಯಲು ಮುಂದೆ ಓದಿ.

'ಬಾಹುಬಲಿ 2 ದಾಖಲೆ ಮುರಿದ 'ಕೆಜಿಎಫ್ 2'
'ಕೆಜಿಎಫ್ 2' ಸಿನಿಮಾ 'ಬಾಹುಬಲಿ 2' ಕಲೆಕ್ಷನ್ ಅನ್ನು ಹಿಂದಿಕ್ಕುತ್ತಾ ಅಂತ ಇಡೀ ದೇಶವೇ ಎದುರು ನೋಡುತ್ತಿರುವಾಗಲೇ ಮತ್ತೊಂದು ಹೊಸ ದಾಖಲೆ ಬರೆದಿದೆ. 'ಕೆಜಿಎಫ್ 2' ರಾಜಮೌಳಿಯ 'ಬಾಹುಬಲಿ 2' ಸಿನಿಮಾಗಿಂತಲೂ ಹೆಚ್ಚು ಟಿಕೆಟ್ ಮಾರಾಟವಾಗಿ ರೆಕಾರ್ಡ್ ಬರೆದಿದೆ. 2022ರ ಏಪ್ರಿಲ್ ತಿಂಗಳಲ್ಲಿ ಬುಕ್ ಮೈ ಶೋ ಸುಮಾರು 29 ಮಿಲಿಯನ್ ಟಿಕೆಟ್‌ಗಳನ್ನು ಸೇಲ್ ಮಾಡಿದೆ. ಇದರಲ್ಲಿ 'ಕೆಜಿಎಫ್ 2' ಸಿನಿಮಾ ಟಿಕೆಟ್ 17.1 ಮಿಲಿಯನ್ ಟಿಕೆಟ್ ಮಾರಾಟವಾಗಿದೆ. ಕೊರೊನಾ ತಣ್ಣಗಾದ ಬಳಿಕ ಅತಿ ಹೆಚ್ಚು ಟಿಕೆಟ್ ಸೇಲ್ ಆದ ಸಿನಿಮಾ ಇದಾಗಿದೆ. 2017ರಲ್ಲಿ ತೆರೆಕಂಡಿದ್ದ 'ಬಾಹುಬಲಿ 2' ಸಿನಿಮಾದ ಸುಮಾರು 16 ಮಿಲಿಯನ್ ಟಿಕೆಟ್ ಅನ್ನು ಬುಕ್ ಮೈ ಶೋ ಸೇಲ್ ಮಾಡಿತ್ತು. ಈ ಕ್ಯಾಟಗರಿಯಲ್ಲಿ 'ಬಾಹುಬಲಿ 2' ದಾಖಲೆಯನ್ನು ಹಿಂದಿಕ್ಕಿದೆ.

ಅಸಲಿ ದಾಖಲೆ ಮುರಿಯಬೇಕಿದೆ
ಅಸಲಿಗೆ 'ಕೆಜಿಎಫ್ 2' ಬಿಡುಗಡೆಯಾದ ಬಳಿಕೆ ಹಲವು ದಾಖಲೆಗಳನ್ನು ಬರೆದಿದೆ. ಆದರೆ, ಎಲ್ಲರೂ 'ಬಾಹುಬಲಿ 2' ಬಾಕ್ಸಾಫೀಸ್ ದಾಖಲೆ ಮುರಿಯುವುದನ್ನು ಎದುರು ನೋಡುತ್ತಿದ್ದಾರೆ. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಬಾಹುಬಲಿ 2' ಗಳಿಸಿದ 500 ಕೋಟಿ ದಾಖಲೆಯನ್ನು ಸೈಡಿಗಟ್ಟಬೇಕಿದೆ. ಇದರೊಂದಿಗೆ ವಿಶ್ವದಾದ್ಯಂತ ಗಳಿಕೆ 1800 ಕೋಟಿ ಕಲೆಕ್ಷನ್ ಮುರಿಯ ಬೇಕಿದೆ. ಸದ್ಯ 'ಕೆಜಿಎಫ್ 2' 47 ದಿನಗಳಲ್ಲಿ 1238.20 ಕೋಟಿ ಗಳಿಸಿದ್ದು, 'ಬಾಹುಬಲಿ 2' ಚಿತ್ರದ ಎರಡು ದಾಖಲೆಯನ್ನೂ ಮುರಿಯಬೇಕಿದೆ.
Recommended Video


ಹೆಚ್ಚು ಸೇಲ್ ಆದ ಸಿನಿಮಾ ಟಿಕೆಟ್ ಯಾವುದು?
ಎಸ್ ಎಸ್ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ ಸುಮಾರು 13.4 ಮಿಲಿಯನ್ ಟಿಕೆಟ್‌ಗಳು ಕೇವಲ ಬುಕ್ ಮೈ ಶೋನಲ್ಲಿ ಮಾರಾಟವಾಗಿದೆ. ಹಾಲಿವುಡ್ ಸಿನಿಮಾ 'ಡಾಕ್ಟರ್ ಸ್ಟ್ರೇಂಜ್: ಇನ್ ದಿ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್' ಸಿನಿಮಾದ 2.5 ಮಿಲಿಯನ್ ಟಿಕೆಟ್ ಸೇಲ್ ಆಗಿದೆ. ಈ ಮೂಲಕ ಮೊದಲ ವಾರ ಈ ವೇದಿಕೆಯಿಂದ ಶೇ.66ರಷ್ಟು ಟಿಕೆಟ್ ಸೇಲ್ ಆಗಿದೆ. ಇದರಲ್ಲಿ ಹಿಂದಿ ಭಾಷೆಯಿಂದ ಸೇಲ್ ಆಗಿದ್ದು ಕೇವಲ ಶೇ.40ರಷ್ಟು ಮಾತ್ರ. ಇದರಲ್ಲಿ 'ಕೆಜಿಎಫ್ 2' ಹಾಗೂ 'RRR' ಸಿನಿಮಾದ ಪಾಲು ಹೆಚ್ಚಿದೆ. ಅಲ್ಲದೆ ತಮಿಳು ಹಾಗೂ ತೆಲುಗು 20 ರಷ್ಟು ಟಿಕೆಟ್ ಸೇಲ್ ಆಗಿದೆ. ಎಂದು ಬುಕ್ ಮೇ ಶೋ ವರದಿ ನೀಡಿದೆ.

ಯಾವ ನಗರದಲ್ಲಿ ಎಷ್ಟು ಟಿಕೆಟ್ ಮಾರಾಟ?
ಬುಕ್ ಮೈ ಶೋನಲ್ಲಿ ಹೆಚ್ಚು ಅತಿ ಹೆಚ್ಚು ಟಿಕೆಟ್ ಮಾರಾಟವಾದ ನಗರಗಳ ಪಟ್ಟಿಯನ್ನೂ ರಿಲೀಸ್ ಮಾಡಿದೆ. ಬೆಂಗಳೂರು, ಮುಂಬೈ, ದೆಹಲಿಯಲ್ಲಿ ಹೆಚ್ಚು ಟಿಕೆಟ್ ಸೇಲ್ ಆಗಿದೆ. ಇನ್ನೊಂದು ಕಡೆ ಕೊಯಂಬತ್ತೂರು ಮತ್ತು ಕೊಚ್ಚಿ ಯಲ್ಲೂ ಹೆಚ್ಚು ಟಿಕೆಟ್ ಸೇಲ್ ಮಾಡಿದ್ದಾಗಿ ಬುಕ್ ಮೈ ಶೋ ಹೇಳಿಕೊಂಡಿದೆ.


Click it and Unblock the Notifications











